Relationship and Breakup: ಸ್ವಂತ ಅಣ್ಣನೊಂದಿಗೇ ಅನಿಲ್ ಕಪೂರ್ ಸಂಬಂಧ ಕಡಿದು ಕೊಂಡಿದ್ಯಾಕೆ?

Suvarna News   | Asianet News
Published : Nov 12, 2021, 08:03 PM IST

ಬಾಲಿವುಡ್ ಇಂಡಸ್ಟ್ರಿಗೆ ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ನಿರ್ಮಾಪಕ ಬೋನಿ ಕಪೂರ್ (Boney kapoor)  ಅವರಿಗೆ 66 ವರ್ಷ. 11 ನವೆಂಬರ್ 1955 ರಂದು ಮೀರತ್‌ನಲ್ಲಿ ಜನಿಸಿದ ಬೋನಿ ಕಪೂರ್‌ ಅವರು ಕುಟುಂಬ ಸಮೇತ ಮುಂಬೈಗೆ ಬಂದಾಗ ಅವರಿಗೆ ವಾಸಕ್ಕೆ ನೆಲೆಯೂ ಇರಲಿಲ್ಲ. ರಾಜ್ ಕಪೂರ್  (Raj Kapoor) ಅವರ ಗ್ಯಾರೇಜ್‌ನಲ್ಲಿ ತಮ್ಮ ಪೋಷಕರು ಮತ್ತು ಒಡ ಹುಟ್ಟಿದವರ ಜೊತೆ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಬೋನಿ ಅವರು 1980ರಲ್ಲಿ ಹಮ್ ಪಾಂಚ್ ಚಲನಚಿತ್ರವನ್ನು ಮಾಡಿದರು. ಆದರೆ ಅವರು  ಬಾಲಿವುಡ್‌ನಲ್ಲಿ ಗುರುತಿಸಲ್ಪಟ್ಟಿದ್ದು ಸೂಪರ್‌ ಹಿಟ್ ಮಿಸ್ಟರ್ ಇಂಡಿಯಾ  (Mr. India) ಸಿನಿಮಾ ಮೂಲಕ.

PREV
18
Relationship and Breakup: ಸ್ವಂತ ಅಣ್ಣನೊಂದಿಗೇ ಅನಿಲ್ ಕಪೂರ್ ಸಂಬಂಧ ಕಡಿದು ಕೊಂಡಿದ್ಯಾಕೆ?

ಮಿಸ್ಟರ್ ಇಂಡಿಯಾ ಚಿತ್ರ ಬಿಡುಗಡೆಯಾಗಿ 34 ವರ್ಷ ಪೂರೈಸಿದೆ. ಈ ಸಿನಿಮಾ 1987 ರಲ್ಲಿ ಬಿಡುಗಡೆಯಾಯಿತು. ಬೋನಿ ಕಪೂರ್ ಮತ್ತು ಸುರೀಂದರ್ ಕಪೂರ್ ನಿರ್ಮಿಸಿದ ಇದರಲ್ಲಿ ಅನಿಲ್ ಕಪೂರ್, ಶ್ರೀದೇವಿ ಮತ್ತು ಅಮರೀಶ್ ಪುರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಶೇಖರ್ ಕಪೂರ್ ನಿರ್ದೇಶಿಸಿದ್ದಾರೆ

28

ಅಂದಹಾಗೆ, ಅನಿಲ್ ಕಪೂರ್ ಮತ್ತು ಶ್ರೀದೇವಿ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಆದರೆ, ಶ್ರೀದೇವಿಯ ಕಾರಣದಿಂದ ಅನಿಲ್‌ ಕಪೂರ್‌  ಅಣ್ಣ ಬೋನಿ ಅವರ ಮೇಲೆ ಕೋಪಗೊಂಡೊದ್ದರು. ಮಿಸ್ಟರ್ ಇಂಡಿಯಾದ ಶೂಟಿಂಗ್ ವೇಳೆ ಅನಿಲ್ ಮತ್ತು ಅವರ ಸಹೋದರ ಜಗಳವಾಡಿದ್ದರು.


 

38

ಶ್ರೀದೇವಿಯನ್ನು ನೋಡಿದ ನಂತರ ಬೋನಿ ಕಪೂರ್‌ಗೆ ಹುಚ್ಚು ಹಿಡಿದಂತಾಗಿತ್ತು. ಎಷ್ಟೇ ಖರ್ಚಾದರೂ ಅವಳನ್ನು ತಮ್ಮ ಚಿತ್ರದಲ್ಲಿ ತೆಗೆದುಕೊಳ್ಳಬೇಕೆಂದು ಬೋನಿ ಬಯಸಿದ್ದರು, ಅದಕ್ಕಾಗಿ ಅವರು ನಟಿ ತಾಯಿಯ ಮನವೊಲಿಸಬೇಕಾಯಿತು ಎಂದು  ಬೋನಿ ಕಪೂರ್ ಸಂದರ್ಶನವೊಂದರಲ್ಲಿ  ಹೇಳಿದ್ದರು.

48

ಮೊದಲು ಶ್ರೀದೇವಿ ಮಿಸ್ಟರ್ ಇಂಡಿಯಾ ಆಫರ್ ಬಂದಾಗ ಅದನ್ನು ನಿರಾಕರಿಸಿದ್ದರು. ಇದಾದ ನಂತರ ಅವರು 10 ಲಕ್ಷ ರೂಪಾಯಿ ಶುಲ್ಕವನ್ನು ಕೇಳಿದ್ದರು, ಅದರ ಮೇಲೆ ಬೋನಿ ಅವರಿಗೆ 11 ಲಕ್ಷ ರೂ ಸಂಭಾವನೆಯ ಅಫರ್‌ ನೀಡಿದ್ದರು ಎಂದು ಹೇಳಲಾಗುತ್ತದೆ. ಸಿನಿಮಾಕ್ಕೆ ಅನಿಲ್ ಸಹ ಅವರ ಹಣವನ್ನೂ ಹೂಡಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಶ್ರೀದೇವಿಗೆ ನೀಡಲು ಅವರು ಇಷ್ಟಪಡಲಿಲ್ಲ. ಆಗ ಬೋನಿ ಅವರಿಗೆ ಅನಿಲ್ ಏನನ್ನೂ ಹೇಳಲಿಲ್ಲ.

58

ಇದಾದ ನಂತರ ಶ್ರೀದೇವಿಗೆ ತನ್ನ ತಾಯಿಯ ಚಿಕಿತ್ಸೆಗೆ ಹಣದ ಅಗತ್ಯವಿತ್ತು. ಆ ಸಮಯದಲ್ಲಿ ಬೋನಿ ಕೂಡ ಅವರಿಗೆ ಸಹಾಯ ಮಾಡಿದರು. ಇದರಿಂದ ಬೋನಿ ಜತೆ ಅನಿಲ್ ಜಗಳವಾಡಿದರು. ಅಷ್ಟೇ ಅಲ್ಲ, ಮಿಸ್ಟರ್ ಇಂಡಿಯಾ ಸೆಟ್‌ನಿಂದ ಹೊರಬಂದು ಸಿನಿಮಾ ಮಾಡಲು ನಿರಾಕರಿಸಿದ್ದರು.

68

ಇದಾದ ನಂತರ ಚಿತ್ರದ ನಿರ್ದೇಶಕ ಶೇಖರ್ ಕಪೂರ್ ಅನಿಲ್‌ಗೆ ಫೋನ್‌ ಮಾಡಿ ಮನವೊಲಿಸಿದರು ಮತ್ತು ಅನಿಲ್‌  ಕೆಲವು ಷರತ್ತುಗಳೊಂದಿಗೆ ಸಿನಿಮಾಕ್ಕೆ ಹಿಂದಿರುಗಿದರು. ಅನಿಲ್‌ ಸಿನಿಮಾದ ನಿರ್ಮಾಣ ಕಾರ್ಯವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು ಮತ್ತು ಲಾಭದ ಗಣನೀಯ ಭಾಗವನ್ನು ಅವರ ಹೆಸರಿಗೆ ಮಾಡಿದರು.


 

78

ಬೋನಿ ಕಪೂರ್ 1980 ರಲ್ಲಿ ಹಮ್ ಪಾಂಚ್ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅದರ ನಂತರ ಬೋನಿ ಕಪೂರ್‌ ಅವರು ವೋ 7ದಿನ್‌, ಮಿ. ಇಂಡಿಯಾ, ರೂಪ್ ಕಿ ರಾಣಿ, ಚೋರೋನ್ ಕಾ ರಾಜಾ, ಪ್ರೇಮ್, ಲೋಫರ್, ಜುದಾಯಿ, ಓನ್ಲಿ ತುಮ್, ಪುಕಾರ್, ಶಕ್ತಿ, ಖುಷಿ, ನೋ ಎಂಟ್ರಿ, ತೇವರ್, ಮಾಮ್, ರನ್ ಮುಂತಾದ ಹಲವು ಚಿತ್ರಗಳನ್ನು ಮಾಡಿದ್ದಾರೆ.

88

ಪ್ರಸ್ತುತ ಅವರು ಮೈದಾನ್ ಮತ್ತು ಮಿಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮೈದಾನ್‌ ಸಿನಿಮಾದಲ್ಲಿ ಅಜಯ್ ದೇವಗನ್ ನಾಯಕನಾಗಿದ್ದು, ಮಿಲಿ ಚಿತ್ರದಲ್ಲಿ ಬೋನಿ ಅವರ ಮಗಳು ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

Read more Photos on
click me!

Recommended Stories