Poonam Pandey in Controversy; ಪತಿಯಿಂದ ಹಲ್ಲೆ ಆಸ್ಪತ್ರೆ ಸೇರಿದ್ದ ನಟಿ!

First Published | Nov 12, 2021, 7:35 PM IST

ಆಗಾಗ ವಿವಾದಗಳಲ್ಲಿ ಸಿಲುಕುವ ನಟಿ ಪೂನಂ ಪಾಂಡೆ (Poonam Pandey ) ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಪೂನಂ ಮತ್ತೊಮ್ಮೆ ತನ್ನ ಪತಿ ಸ್ಯಾಮ್ ಬಾಂಬೆ ಹಲ್ಲೆ ಮಾಡಿಸಿದ್ದಾರೆಂದು ಆರೋಪಿಸಿದ್ದಾರೆ. ಸುದ್ದಿ ಪ್ರಕಾರ ಆಕೆಯ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಂತರ ಪೂನಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತಂತೆ. ವರದಿಗಳ ಪ್ರಕಾರ, ಪೂನಮ್‌ಗೆ ಆಕೆಯ ಪತಿ ಸ್ಯಾಮ್ ಥಳಿಸಿದ್ದರಿಂದ ಆಕೆಯ ತಲೆ, ಕಣ್ಣು ಮತ್ತು ಮುಖದ ಮೇಲೆ ಗಂಭೀರ ಗಾಯಗಳಾಗಿವೆ. ಅಂದಹಾಗೆ, ಪೂನಂ ಪಾಂಡೆ ಅವರ ಜೀವನ ವಿವಾದಗಳಿಂದಲೇ ತುಂಬಿದೆ. ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಪೂನಂ ಪಾಂಡೆಗೆ ಸಂಬಂಧಿಸಿದ ಕೆಲವು ವಿವಾದಗಳು ಇಲ್ಲಿವೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆಯನ್ನು ವಿವಾಹವಾದರು. ಮದುವೆಯಾಗಿ ಕೇವಲ 10-12 ದಿನಗಳಲ್ಲಿಯೇ ಪತಿ ಆಕೆಯನ್ನು ತೀವ್ರವಾಗಿ ಥಳಿಸಿದ ಸುದ್ದಿ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲ ಪತಿ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೂಡ ನೀಡಿದ್ದರು. ಆದರೆ, ನಂತರ ವಿಷಯ ಇತ್ಯರ್ಥವಾಯಿತು ಹಾಗೂ ಇಬ್ಬರೂ ರಾಜಿಯಾಗಿದ್ದರು.

ಕೊರೊನಾ ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕಾಗಿ ಪೂನಂ ಪಾಂಡೆ ಮತ್ತು ಆಕೆಯ ಗೆಳೆಯನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಲಾಕ್‌ಡೌನ್‌ನಲ್ಲಿ ಹೊರಗೆ ಹೋಗುವುದನ್ನು ನಿಷೇಧಿಸಿದ್ದರೂ, ಅವರು ಕಾರಿನಲ್ಲಿ ರಾತ್ರಿ ಸುತ್ತಲು ಹೋಗಿದ್ದರು . ಆದರೆ, ನಂತರ ಅವರು ಈ ಸುದ್ದಿಯನ್ನು ಸುಳ್ಳು ಎಂದು ಹೇಳಿಕೆ ನೀಡಿದ್ದರು.

Tap to resize

2011ರ ವಿಶ್ವಕಪ್ ವೇಳೆ ಪೂನಂ ಪಾಂಡೆ ಹೇಳಿಕೆ ಟೀಮ್‌ ಇಂಡಿಯಾ ಮ್ಯಾಚ್‌ ಗೆದ್ದರೆ ನಗ್ನವಾಗಿ ಫೋಸ್‌ ನೀಡುವುದಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು, ಪೂನಂ ಅವರು ನೀಡಿದ ಹೇಳಿಕೆ ಸಖತ್‌ ಸಂಚಲನ ಮೂಡಿಸಿತ್ತು ಹಾಗೂ ಅವರ ಹೇಳಿಕೆಗೆ ವ್ಯಾಪಕ ಟೀಕೆಗಳೂ ವ್ಯಕ್ತವಾಗಿದ್ದವು. 

ಇದಾದ ಬಳಿಕ ಪೂನಂ ಮತ್ತೊಮ್ಮೆ ವಿವಾದಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ವಾಸ್ತವವಾಗಿ, 2016 ರಲ್ಲಿ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ಗೆದ್ದಾಗ, ಪೂನಂ ತನ್ನ ಅರೆ ನಗ್ನ ಫೋಟೋವನ್ನು ಹಂಚಿಕೊಂಡಿದ್ದರು. ಅವರ ಈ ಫೋಟೋ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪೂನಂ ಪಾಂಡೆ ಯೂಟ್ಯೂಬ್‌ನಲ್ಲಿ ತನ್ನ ಸ್ನಾನದ ವೀಡಿಯೊವನ್ನು ಹಂಚಿಕೊಂಡಿದ್ದರು. ಅದಕ್ಕೆ ಪೂನಂನಲ್ಲಿ ಬಾತ್ರೂಮ್ ಸೀಕ್ರೆಟ್ಸ್ ಎಂದು ಹೆಸರಿಸಲಾಯಿತು. ವಿಡಿಯೋದಲ್ಲಿ ಆಕೆ ಬಾತ್ ರೂಂನಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೀಡಿಯೋ ತುಂಬಾ ಬೋಲ್ಡ್ ಆಗಿದ್ದು ಯೂಟ್ಯೂಬ್ ಅದನ್ನು ನಿರ್ಬಂಧಿಸಿದೆ.

ಇಷ್ಟೇ ಅಲ್ಲ  ಪೂನಂ ಪಾಂಡೆ ಅಶ್ಲೀಲ ವಿಡಿಯೋ ಮಾಡಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದರು. ಗೋವಾದಲ್ಲಿ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪ ಅವರ ಮೇಲಿತ್ತು. ವರದಿಯ ಪ್ರಕಾರ, ಗೋವಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು ಮತ್ತು  ದೂರಿನಲ್ಲಿ ಆ ವ್ಯಕ್ತಿ ಪೂನಂ ಪಾಂಡೆ ಅವರ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿದ ಆರೋಪ ಮಾಡಲಾಗಿತ್ತು.

2011 ರಲ್ಲಿ, ಅವರ ಮಾರ್ಫ್ ಮಾಡಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಪೂನಂ ಪಾಂಡೆ ಅವರ ಫೋಟೋಗಳ ಮುಂದೆ ಪಾಕಿಸ್ತಾನಿ ಕ್ರಿಕೆಟಿಗನೊಬ್ಬ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ.

ಪೂನಂ ಪಾಂಡೆ ಅವರು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ವಿರುದ್ಧ ಏಪ್ರಿಲ್ 2009 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ತಮ್ಮ ಅನುಮತಿಯಿಲ್ಲದೆ ರಾಜ್‌ಕುಂದ್ರಾ ತಮ್ಮ ಆಪ್‌ನ ವಿಷಯವನ್ನು ಹಣ ಸಂಪಾದಿಸಲು ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Latest Videos

click me!