Travis Scott ಅವರ Astroworld ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಜನಸಂದಣಿಯ ಮೂಲಕ ಹೋಗಲು ಪ್ರಯತ್ನಿಸುತ್ತಿರುವ ಆಂಬ್ಯುಲೆನ್ಸ್ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದಾಗಿನಿಂದ ಕೈಲಿ ಜೆನ್ನರ್ ಸುದ್ದಿಯಲ್ಲಿದ್ದಾರೆ. ನಂತರ ಅವರು ಪೋಸ್ಟ್‌ಗೆ ತೀವ್ರವಾಗಿ ವಿರೋಧ ಉಂಟಾದಾಗ ಅಧಿಕೃತ ಹೇಳಿಕೆಯನ್ನು ನೀಡಿದರು.
ಹೂಸ್ಟನ್‌ನಲ್ಲಿ ನಡೆದ ಈವೆಂಟ್‌ನಲ್ಲಿನ ಸಾವಿನಿಂದ ಅವರು ಮತ್ತು ಅವರ ಪಾರ್ಟನರ್ ಟ್ರಾವಿಸ್ ಸ್ಕಾಟ್ ತುಂಬಾ ಡಿಸ್ಟರ್ಬ್ ಆಗಿದ್ದಾರೆ ಎಂದು ಕೈಲಿ ಹೇಳಿದರು. ವರದಿಗಳ ಪ್ರಕಾರ, ಆ ಪ್ರದೇಶದಲ್ಲಿ ಹೆಚ್ಚಾಗಿದ್ದ ಜನಸಂದಣಿಯಿಂದ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡರು.
ಕೆಲವು ವಾರಗಳ ಹಿಂದೆ, ಕೈಲಿ ತನ್ನ ಹ್ಯಾಲೋವೀನ್ ಪೋಸ್ಟ್‌ಗಾಗಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ವರ್ಷ ಕೈಲಿ ಜೆನ್ನರ್ ಅವರು ಅಕ್ಟೋಬರ್ 30 ರಂದು ಹ್ಯಾಲೋವೀನ್ ಅನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದಾರೆ.ಅವರು ರಕ್ತಸಿಕ್ತ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತಮ್ಮ Instagram ಪುಟದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಗ್ನವಾಗಿ ಫೇಕ್ ಬ್ಲಡ್‌ನಲ್ಲಿ ಮುಳುಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಸ್ವಲ್ಪ ಸಮಯದಲ್ಲೇ, ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಫೋಟೋಗೆ ತೀವ್ರವಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದರು ಮತ್ತು ಕೈಲಿ ಅವರನ್ನು ಟ್ರೋಲ್ ಮಾಡಿದರು.
ಫೋಟೋವನ್ನು ಬಳಸಿ ಹಲವು ಮಿಮ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ತುಂಬಾ ಡಿಸ್ಟರ್ಬಿಂಗ್ ಸಂಗತಿ, ಎಂದು ಹಲವರು ಕಾಮೆಂಟ್ ಮಾಡಿದ್ದಾರೆ 'ಇದಕ್ಕೆ ಎಚ್ಚರಿಕೆಯ ಅಗತ್ಯವಿದೆ' ಎಂದು ಒಬ್ಬ ಯೂಸರ್ ಬರೆದಿದ್ದಾರೆ. 'ಅವಳು ಪ್ರೆಗ್ನೆಂಟ್ ಆಗಿರುವುದರಿಂದ ಇದು ನಿಜವಾಗಿಯೂ ತುಂಬಾ ಡಿಸ್ಟರ್ಬಿಂಗ್ ವಿಷಯ,' ಎಂದು ಇನ್ನೊಬ್ಬರು ಬರೆದಿದ್ದಾರೆ.
ಹ್ಯಾಲೋವೀನ್‌ಗೆ ಮುಂಚಿತವಾಗಿ, ಕೈಲೀ ಜೆನ್ನರ್ ಅವರು Nightmare On Elm Street ಸಹಯೋಗದೊಂದಿಗೆ ಲಿಮಿಟೆಡ್ ಎಡಿಷನ್‌ನ ಮೇಕಪ್ ಕಲೆಕ್ಷನ್ ಅನ್ನು ಪ್ರಾರಂಭಿಸಿದರು. 24 ವರ್ಷದ ಈ ಬಿಲಿಯನೇರ್ ತನ್ನ ಮುಂಬರುವ ಬ್ರ್ಯಾಂಡ್ ಸಹಯೋಗದ ಫೋಟೋಶೂಟ್‌ನಿಂದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕೈಲಿ ಟ್ರಾವಿಸ್ ಸ್ಕಾಟ್ ಅವರ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ. ಕೈಲ್ ಮತ್ತು ಸ್ಕಾಟ್ ಸಹ 2018 ರಲ್ಲಿ ಜನಿಸಿದ ಸ್ಟಾರ್ಮಿ ವೆಬ್‌ಸ್ಟರ್‌ಗೆ ಪೋಷಕರು. ರಿಯಾಲಿಟಿ ಟಿವಿ ಸ್ಟಾರ್ ಆಗಿರುವುದರ ಜೊತೆಗೆ, ಕೈಲೀ ಜೆನ್ನರ್ ಮಾಡೆಲ್ ಮತ್ತು ಮೇಕಪ್ ಬ್ಯುಸಿನೆಸ್ ವುಮೆನ್ ಕೂಡ ಹೌದು. ಕೈಲಿ ಕಾಸ್ಮೆಟಿಕ್ಸ್ ಕಂಪನಿಯ ಸಂಸ್ಥಾಪಕಿ ಮತ್ತು ಓನರ್ ಆಗಿದ್ದಾರೆ.