Farah Khan Birthday: ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದ ಫರಾ ಖಾನ್‌ ಈಗ ಫೇಮಸ್‌ ಕೊರಿಯೊಗ್ರಾಫರ್‌..!

First Published | Jan 9, 2022, 5:12 PM IST

ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ (choreographer) ಹಾಗೂ ನಿರ್ದೇಶಕಿ (Film maker) ಫರಾ ಖಾನ್ (Farah Khan) ಅವರಿಗೆ 57 ವರ್ಷ. ಇವರು ಜನವರಿ 9, 1965 ರಂದು ಮುಂಬೈನಲ್ಲಿ ಜನಿಸಿದರು. ಚಲನಚಿತ್ರಗಳು ಮತ್ತು ಅವರ ನೃತ್ಯ ಸಂಯೋಜನೆಯ ಜೊತೆಗೆ ತನ್ನ ವೈಯಕ್ತಿಕ ಜೀವನಕ್ಕಾಗಿಯೂ ಸುದ್ದಿಯಲ್ಲಿದ್ದಾರೆ. ಅಂದಹಾಗೆ, ಫರಾ ಜೀವನದಲ್ಲಿ ಈ ಸ್ಥಾನ ತಲುಪುವುದು ಅಷ್ಟು ಸುಲಭವಾಗಿರಲಿಲ್ಲ. ಅವರು ತಂದೆ ಮಾಡಿದ ಸಾಲ ತೀರಿಸಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಮನೆಯನ್ನು ನಡೆಸಲು, ಫರಾ ಕೆಲವು ಜನರ ಸಹಾಯದಿಂದ ನೃತ್ಯಗಾರ್ತಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು  ಮೊದಲು  ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಫರಾ ಖಾನ್ ಅವರ ತಂದೆ ಕಮ್ರಾನ್ ಖಾನ್ ಹಿಂದಿ ಚಲನಚಿತ್ರಗಳಲ್ಲಿ ನಿರ್ದೇಶಕರಾಗಿ ಮತ್ತು ನಟರಾಗಿ ಕೆಲಸ ಮಾಡುತ್ತಿದ್ದರು. ಕಮ್ರಾನ್ ತಮ್ಮ ಸ್ವಂತ ಖರ್ಚಿನಲ್ಲಿ ಐಸಾ ಭಿ ಹೋತಾ ಹೈ ಸಿನಿಮಾ ಮಾಡಿದ್ದರು. ಚಿತ್ರವು ಕೆಟ್ಟದಾಗಿ ಸೋತಿತು ಮತ್ತು ಕಮ್ರಾನ್ ಸಾಲದ ಸುಳಿಗೆ ಸಿಲುಕಿದರು. 

ಕಷ್ಟದ ಸಂದರ್ಭಗಳಲ್ಲಿ, ಫರಾಳ ತಂದೆ ಮನೆಯ ಆಭರಣಗಳು ಮತ್ತು ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ಮಾರಿದರು. ಆದರೆ ತೊಂದರೆಗಳು ಕಡಿಮೆಯಾಗಲಿಲ್ಲ. ಕೆಲವು ದಿನಗಳ ನಂತರ, ಫರಾಳ ತಂದೆ ನಿಧನರಾದರು ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ಫರಾ ಖಾನ್ ಮೇಲೆ ಬಿದ್ದಿತು.

Tap to resize

ಫರಾ ಖಾನ್ ನೃತ್ಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರು ಮೈಕೆಲ್ ಜಾಕ್ಸನ್ ಅವರ ದೊಡ್ಡ ಅಭಿಮಾನಿ. ಮೈಕೆಲ್ ಜಾಕ್ಸನ್ ಅವರ ಥ್ರಿಲ್ಲರ್ ಹಾಡು ಬಿಡುಗಡೆಯಾದಾಗ ಅವರು ನೃತ್ಯದಲ್ಲಿ ಆಸಕ್ತಿ ಹೊಂದಿದ್ದರು. ಆ ನಂತರವೇ ನೃತ್ಯ ಕಲಿಯುವ ಯೋಚನೆ ಮಾಡಿದರು. 

ಆದರೆ ಫರಾ ಖಾನ್ ಅವರ ಮನೆಯಲ್ಲಿ ನೃತ್ಯ ಕಲಿಯಲು ಯಾವುದೇ ಸೌಲಭ್ಯವಿರಲಿಲ್ಲ. ಈ ಕಾರಣದಿಂದ ಅವರು ಅಕ್ಕಪಕ್ಕದವರ ಮನೆಗೆ ಹೋಗಿ ಟಿವಿಯಲ್ಲಿ ಡ್ಯಾನ್ಸ್ ನೋಡಿ ಕಲಿಯುತ್ತಿದ್ದರು. ಅವರು ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ಪ್ರತಿಫಲ ದೊರೆಯಿತು.

ನಂತರ ಚಲನಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡುವಾಗ, ಫರಾ ಕೂಡ ಸ್ಟಾರ್‌ಗಳಿಗೆ ಹೊಸ ನೃತ್ಯದ ಸ್ಟೆಪ್ಸ್‌ ಕಲಿಸಲು ಪ್ರಾರಂಭಿಸಿದರು. ಜೋ ಜೀತಾ ವಿ ಸಿಕಂದರ್ ಸಿನಿಮಾದಲ್ಲಿ ಫರಾ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರ ಸಹಾಯಕರಾಗಿದ್ದರು.

ಹಠಾತ್ತನೆ ಸರೋಜ್  ಖಾನ್ ಬ್ಯಾಕ್ ಔಟ್ ಆದಾಗ ಫರಾ ಖಾನ್ಗೆ ಪೇಹಲಾ ನಶಾ ಹಾಡಿಗೆ ನೃತ್ಯ ಸಂಯೋಜನೆ ಮಾಡುವ ಅವಕಾಶ ಸಿಕ್ಕಿತು. ಅವರ ಅದೃಷ್ಟವು ಬದಲಾಯಿತು.

ಫರಾ ಖಾನ್  ವೈಯಕ್ತಿಕ ಜೀವನದ ಬಗ್ಗೆ  ಹೇಳುವುದಾದರೆ ಅವರು ಚಲನಚಿತ್ರ ನಿರ್ಮಾಪಕ ಶಿರಿಶ್ ಕುಂದರ್ ಅವರನ್ನು ವಿವಾಹವಾಗಿದ್ದಾರೆ. ವಯಸ್ಸಿನಲ್ಲಿ ಫರಾಗಿಂತ 9 ವರ್ಷ ಚಿಕ್ಕವರಾದ ಶಿರೀಷ್ ಜೊತೆ ಫರಾ ಖಾನ್ ಡಿಸೆಂಬರ್ 2004 ರಲ್ಲಿ ಪ್ರೇಮ ವಿವಾಹವಾಗಿದ್ದರು. ಈ ಜೋಡಿ ತ್ರಿವಳಿ ಗಂಡು ಮಕ್ಕಳಿದ್ದಾರೆ

ಬಾಲಿವುಡ್ ಚಲನಚಿತ್ರ ನಿರ್ಮಾಪಕ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದಲ್ಲದೇ ಫರಾ ಅವರು ಓಂ ಶಾಂತಿ ಓಂ, ಮೈಹೂ ನಾ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಫರಾ ಖಾನ್ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಆಪ್ತ ಗೆಳತಿ. ಈ ಹೆಸರುಗಳಲ್ಲಿ ಕರಣ್ ಜೋಹರ್ ಕೂಡ ಒಂದು. ಸಾಜಿದ್ ಖಾನ್ ಮತ್ತು ರಿತೇಶ್ ದೇಶ್‌ಮುಖ್ ಅವರ ಶೋ ಯಾರೋನ್ ಕಿ ಬಾರಾತ್‌ನಲ್ಲಿ ಫರಾ ಅವರನ್ನು ಪ್ರೀತಿಸುತ್ತಾರೆ ಎಂದು ಕರಣ್ ಹೇಳಿದರು. ಅದೇ ಸಮಯದಲ್ಲಿ, ಫರಾ ಅವರು ಕರಣ್ಗೆ  ಮದುವೆಗೆ ಪ್ರಪೋಸ್‌ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದರು.

ಕುಚ್ ಕುಚ್ ಹೋತಾ ಹೈ ಚಿತ್ರದ ಹಾಡೊಂದನ್ನು ಸ್ಕಾಟ್ಲೆಂಡ್‌ನಲ್ಲಿ ಶೂಟಿಂಗ್‌ ಮಾಡುವ ಸಮಯದಲ್ಲಿ ನಾನು ನನ್ನ ಕೋಣೆಯಲ್ಲಿ ಶಾರ್ಟ್ಸ್ ಮತ್ತು ಟಿ-ಶರ್ಟ್‌ನಲ್ಲಿ ಮಲಗಿದ್ದೆ. ಫರಾ ಮಧ್ಯರಾತ್ರಿಯಲ್ಲಿ ನನ್ನ ಕೋಣೆಗೆ ಬಂದರು ಎಂದು ಕರಣ್ ಜೋಹರ್ ಈ ಕಾರ್ಯಕ್ರಮದಲ್ಲಿ ಹೇಳಿದ್ದರು.

Latest Videos

click me!