ಕಂಗನಾ ರಣಾವತ್ ಏರ್‌ಪೋರ್ಟ್‌ನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರೆಯೊಂದಿಗೆ ಗಾಗಲ್ಸ್ ಧರಿಸಿರುವ ನಟಿಯ ಸ್ಟನ್ನಿಂಗ್ ಲುಕ್ ಎಲ್ಲರ ಗಮನ ಸೆಳೆದಿದೆ. ಕಂಗನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದೆ
ಜನವರಿ 8ರ ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಗನಾ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ನಟಿ ಕಾಟನ್ ಸೀಲ್ಕ್ ಸೀರೆ ಉಟ್ಟಿದ್ದರು. ತಿಳಿ ಹಸಿರು ಬಣ್ಣದ ಸೀರೆಯಲ್ಲಿ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಸೀರೆ ಲುಕ್ ಕಂಪ್ಲೀಟ್ ಮಾಡಲು ಮುತ್ತಿನ ಸೆಟ್ ಧರಿಸಿದ್ದರು ಮತ್ತು ರೌಂಡ್ ಸನ್‌ಗ್ಲಾಸ್ ಧರಿಸುವ ಮೂಲಕ ಕಂಗನಾ ತಮ್ಮ ಸಾಂಪ್ರಾದಾಯಿಕ ಲುಕ್‌ಗೆ ಹೊಸ ಸ್ಟೈಲ್‌ಯನ್ನು ನೀಡಿದರು. ಇದಲ್ಲದೆ ಕಂಗನಾ ಬಿಳಿ ಬಣ್ಣದ ವ್ಯಾನಟಿ ಬ್ಯಾಗ್ ಹಿಡಿದಿದ್ದರು.
ಕೆಲಸದ ಮುಂಭಾಗದಲ್ಲಿ, ಕಂಗನಾ ರಣಾವತ್ ಪ್ರಸ್ತುತ ತಮ್ಮ ಆಕೌಂಟ್‌ನಲ್ಲಿ ಅನೇಕ ಚಲನಚಿತ್ರಗಳನ್ನು ಹೊಂದಿದ್ದಾರೆ. ಅವರು 'ಮಣಿಕರ್ಣಿಕಾ ರಿಟರ್ನ್ಸ್', 'ದಿ ಲೆಜೆಂಡ್ ಆಫ್ ದಿಡ್ಡಾ', 'ಎಮರ್ಜೆನ್ಸಿ', 'ಧಕಡ್', 'ತೇಜಸ್' ಮತ್ತು 'ದಿ ಇನ್ಕಾರ್ನೇಷನ್: ಸೀತಾ' ಸಿನಿಮಾಗಳನ್ನು ಮಾಡುತ್ತಿದ್ದಾರೆ.
ನಟಿ ಸೊನ್ನಳ್ಳಿ ಸೇಗಲ್ (Sonnalli seygall) ತಮ್ಮ ಬೋಲ್ಡ್ ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಕಳೆದ ದಿನದಲ್ಲಿ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳೂ ಅವರನ್ನು ಗುರುತಿಸಿದರು. ಅವರು ಬಿಳಿ ಕಾರ್ಟೂನ್ ಪ್ರಿಟೆಂಡ್ ಶರ್ಟ್ ಮತ್ತು ಕೆಂಪು ಪ್ಯಾಂಟ್ ಧರಿಸಿದ್ದರು. ಇದರೊಂದಿಗೆ ಸನ್ ಗ್ಲಾಸ್ ಹಾಕಿಕೊಂಡಿದ್ದರು. ಕೂದಲು ತೆರೆದುಕೊಂಡು, ಏರ್ಪೋರ್ಟ್ ಲುಕ್ ಅನ್ನು ಪೂರ್ಣಗೊಳಿಸಿದರು.'ಪ್ಯಾರ್ ಕಾ ಪಂಚನಾಮಾ' ಸಿನಿಮಾದಿಂದ ಅವರಿಗೆ ಮನ್ನಣೆ ಸಿಕ್ಕಿದೆ.
ಅಂಧೇರಿ ಲೋಖಂಡವಾಲಾದಲ್ಲಿನ ಜಿಮ್‌ನ ಹೊರಗೆ ಎಲ್ಲಿ ಅವ್ರಾಮ್ ಕಾಣಿಸಿಕೊಂಡಿದ್ದಾರೆ. ಅವರು ಗ್ರೇ ಕಲರ್ ಕ್ರಾಪ್ ಫುಲ್ ಸ್ಲೀವ್ ಟಾಪ್ ಮತ್ತು ಟೈಟ್ ಪ್ಯಾಂಟ್ ಧರಿಸಿದ್ದರು. ಮೇಕಪ್ ಇಲ್ಲದಿದ್ದರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಜಿಮ್ ಔಟ್‌ಫಿಟ್‌ನಲ್ಲಿ ಎಲ್ಲಿ ಅವ್ರಾಮ್ ಅವರ ಫರ್ಫೇಕ್ಟ್ ಫೀಗರ್ ಕಂಡು ಬಂದಿದೆ.
ಟಿವಿ ನಟಿ ತಾನ್ಯಾ ಶರ್ಮಾ ಲೋಖಂಡವಾಲಾ ಸಲೂನ್‌ನ ಹೊರಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದರು. ಈ ಸಮಯದಲ್ಲಿ ಅವರು ಡೆನಿಮ್ ಜೀನ್ಸ್ ಮತ್ತು ಕ್ರಾಪ್ ಟಾಪ್ ಧರಿಸಿದ್ದರು. ಅದರ ಮೇಲೆ ನೀಲಿ ಬಣ್ಣದ ಜಾಕೆಟ್ ಹಾಕಿಕೊಂಡಿದ್ದರು.
ಟಿವಿ ನಟ ಅಲಿ ಗೋನಿ (Aly Goni) ಲೋಖಂಡವಾಲಾದಲ್ಲಿನ ಜಿಮ್‌ನ ಹೊರಗೆ ಕಾಣಿಸಿಕೊಂಡರು. ಅವರು ಜಿಮ್ ಉಡುಪಿನಲ್ಲಿ ಕಾಣಿಸಿಕೊಂಡರು. ಅಲಿ ಗೋನಿ ಜಾಸ್ಮಿನ್ ಭಾಸಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಇತ್ತೀಚೆಗಷ್ಟೇ ಇಬ್ಬರೂ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿ ಮರಳಿದ್ದಾರೆ.