One Month Anniversary: ಕಾಮನ್‌ ಫ್ರೆಂಡ್‌ ಮನೆಯಲ್ಲಿ ಶುರುವಾದ ವಿಕ್ಕಿ - ಕತ್ರಿನಾ ಲವ್‌ ಸ್ಟೋರಿ

Published : Jan 09, 2022, 04:25 PM ISTUpdated : Jan 09, 2022, 04:29 PM IST

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಮದುವೆಗೆ ಒಂದು ತಿಂಗಳು ಪೂರ್ಣಗೊಂಡಿದೆ. ದಂಪತಿಗಳು 9 ಡಿಸೆಂಬರ್ 2021 ರಂದು ರಾಜಸ್ಥಾನದ ಬರ್ವಾರಾ ಕೋಟೆಯಲ್ಲಿ ವಿವಾಹವಾದರು. ಮದುವೆಯಾಗಿ ಒಂದು ತಿಂಗಳಾದ ಮೇಲೆ ಕತ್ರಿನಾ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ಕ್ಯಾಟ್-ವಿಕ್ಕಿಯನ್ನು ಅಭಿನಂದಿಸುತ್ತಿದ್ದಾರೆ. ಅಷ್ಟಕ್ಕೂ ಇವರ ಲವ್‌ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ? ವಿವರಕ್ಕಾಗಿ ಮುಂದೆ ಓದಿ.   

PREV
19
One Month Anniversary: ಕಾಮನ್‌ ಫ್ರೆಂಡ್‌ ಮನೆಯಲ್ಲಿ ಶುರುವಾದ ವಿಕ್ಕಿ - ಕತ್ರಿನಾ  ಲವ್‌ ಸ್ಟೋರಿ

ಈ ಫೋಟೋದಲ್ಲಿ, ಕಪಲ್‌ ಪರಸ್ಪರ ಹಗ್‌ ಮಾಡಿರುವುದು ಕಾಣಬಹುದು. 'ಹ್ಯಾಪಿ ಓನ್‌ ಮಂಥ್‌ ಮೈ ಲವ್‌' ಎಂದು ಕತ್ರಿನಾ ಕ್ಯಾಪ್ಷನ್‌ ನೀಡಿದ್ದಾರೆ. ಫೋಟೋದಲ್ಲಿ, ವಿಕ್ಕಿ ನೀಲಿ ಟೀ ಶರ್ಟ್ ಧರಿಸಿದ್ದರೆ, ಕ್ಯಾಟ್ ಕಪ್ಪು ಟೀ ಶರ್ಟ್ ಧರಿಸಿದ್ದಾರೆ.

29

ನೇಹಾ ಧೂಪಿಯಾ, ವಾಣಿ ಕಪೂರ್, ರಣವೀರ್ ಸಿಂಗ್‌ನಿಂದ ದಿಯಾ ಮಿರ್ಜಾ, ಜೋಯಾ ಅಖ್ತರ್, ಹರ್ಷದೀಪ್ ಕೌರ್, ಅನೇಕ ಸೆಲೆಬ್ರಿಟಿಗಳು ಇಬ್ಬರಿಗೂ ಶುಭ ಹಾರೈಸಿದ್ದಾರೆ. ಅದೇ ಸಮಯದಲ್ಲಿ, ಅಭಿಮಾನಿಗಳು ಹಾರ್ಟ್‌ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ ದಂಪತಿಯನ್ನು ಅಭಿನಂದಿಸಿದರು.

39

ಮದುವೆಯ ನಂತರ ಕತ್ರಿನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಮಂಗಳಸೂತ್ರವನ್ನು ತೋರಿಸಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. 
 

49

ಡಿಸೆಂಬರ್ 20 ರಂದು  ಮುಂಬೈನಲ್ಲಿ ಗ್ರ್ಯಾಂಡ್‌ ರಿಸೆಪ್ಷನ್‌ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಅವರು ತಮ್ಮ ಆರತಕ್ಷತೆಯನ್ನು ಜನವರಿಗೆ ಮುಂದೂಡಿದ್ದಾರೆ ಮತ್ತು ವಿಕ್ಕಿ,ಕತ್ರಿನಾ ಪ್ರಸ್ತುತ ರಿಸೆಪ್ಷನ್‌ಗಾಗಿ ದಿನಾಂಕಗಳನ್ನು ಆಯ್ಕೆ ಮಾಡುತ್ತಿದ್ದಾರೆ.


 

59

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿದ್ದರು ಎಂದು ಈ ಹಿಂದೆ ವರದಿಯಾಗಿತ್ತು. ಅವರ ಈ ಕಾಮಾನ್‌ ಫ್ರೆಂಡ್‌  ವಿಕ್ಕಿಯ ಬಾಲ್ಯದ ಸ್ನೇಹಿತ. 

69

ಈ ಫ್ರೆಂಡ್‌ ಕತ್ರಿನಾ ಅವರ ವೃತ್ತಿಪರ ಸಹವರ್ತಿ ಕೂಡ. ಅವರು ವಿಕ್ಕಿ ವಾಸಿಸುವ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ನಂತರ ಎಲ್ಲಾ ಮಾಧ್ಯಮಗಳ ಗಮನವನ್ನು ತಪ್ಪಿಸಿ ಇವರಿಬ್ಬರು  ಈ  ಕಾಮನ್‌ ಫ್ರೆಂಡ್‌ ಸ್ಥಳದಲ್ಲಿ ಭೇಟಿಯಾಗಲು ಪ್ರಾರಂಭಿಸಿದರು. 

79

2021 ರ ಆರಂಭದಲ್ಲಿ ಹರ್ಷವರ್ಧನ್ ಕಪೂರ್ ಅವರ ಸಂಬಂಧವನ್ನು ದೃಢಪಡಿಸಿದ ನಂತರ ಅವರ ಸಂಬಂಧದ ಬಗ್ಗೆ ವಿಷಯಗಳು ಹೆಚ್ಚು ಸ್ಪಷ್ಟವಾಯಿತು. ನಂತರ, ಅವರ ಮದುವೆಗೆ ಸ್ವಲ್ಪ ಮೊದಲು, ಆಯುಷ್ಮಾನ್ ಖುರಾನಾ ಸಹ ಅವರ ಸಂಬಂಧದ ಬಗ್ಗೆ ಪ್ರಮುಖ ಸುಳಿವುಗಳನ್ನು ಬಿಟ್ಟುಕೊಟ್ಟರು.

89

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮದುವೆಯ ದಿನದವರೆಗೂ ತಮ್ಮ ಸಂಬಂಧದ ಬಗ್ಗೆ ಒಂದೇ ಒಂದು ಮಾತನ್ನು ಬಾಯಿ ಬಿಡಲಿಲ್ಲ. ಡಿಸೆಂಬರ್ 09. ಅವರ ಮದುವೆಯ ನಂತರವೇ ಇಬ್ಬರು ತಮ್ಮ ವಿವಾಹ ಮದುವೆ ಫೋಟೋಗಳನ್ನು ಶೇರ್‌ ಮಾಡುವ  ಮೂಲಕ ಅಧಿಕೃತವಾಗಿ ಜಗತ್ತಿಗೆ ಘೋಷಿಸಿದರು.

99

ಕೆಲಸದ ಮುಂಭಾಗದಲ್ಲಿ, ಕತ್ರಿನಾ ಕೈಫ್ ಶೀಘ್ರದಲ್ಲೇ ಟೈಗರ್ 3 ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅದೇ ಸಮಯದಲ್ಲಿ, ವಿಕ್ಕಿ ಕೌಶಲ್ ಪ್ರಸ್ತುತ ಇಂದೋರ್‌ನಲ್ಲಿ ಲುಕಾ ಚುಪ್ಪಿ 2 ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಕೋ ಸ್ಟಾರ್‌ ಆಗಿದ್ದಾರೆ. 

Read more Photos on
click me!

Recommended Stories