ರಣಬೀರ್‌ - ವಾಣಿ ಕಪೂರ್‌ ಕೆಮಿಸ್ಟ್ರಿ: ಆಲಿಯಾ ಹೊಡೆಯುತ್ತಾರೆ ಅಂತಿದ್ದಾರೆ ನೆಟ್ಟಿಗರು

Published : Jul 12, 2022, 10:53 AM IST

ಈ ದಿನಗಳಲ್ಲಿ ರಣಬೀರ್ ಕಪೂರ್ (Ranbir Kapoor) ತಮ್ಮ ಮುಂಬರುವ ಚಿತ್ರ 'ಶಂಶೇರಾ'  (Shamshera) ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರ ಎದುರು ವಾಣಿ ಕಪೂರ್  (Vaani Kapoor)  ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರತಿ ದಿನವೂ ರಣಬೀರ್ ಜೊತೆಗಿನ ಫೋಟೋಶೂಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಜೋಡಿಯ ಸಿಜ್ಲಿಂಗ್ ಕೆಮಿಸ್ಟ್ರಿಯನ್ನು ಹೊಗಳುತ್ತಿದ್ದಾರೆ. ಆದರೆ ನೆಟ್ಟಿಗರು ಈಗಷ್ಟೇ ಮದುವೆಯಾಗಿ ಖುಷಿಯಾಗಿರೋ ಈ ಜೋಡಿ ಕಾಲು ಎಳೆಯೋದಾ? ರಣಬೀರ್‌ ಮತ್ತು ವಾಣಿ ಕಪೂರ್‌ ಹಾಟ್‌ ಫೋಟೋಗಳಿಗೆ ಬಳಕೆದಾರರು ಏನು  ಕಾಮೆಂಟ್‌ ಮಾಡುತ್ತಿದ್ದಾರೆ ನೋಡಿ.

PREV
17
ರಣಬೀರ್‌ - ವಾಣಿ ಕಪೂರ್‌ ಕೆಮಿಸ್ಟ್ರಿ: ಆಲಿಯಾ ಹೊಡೆಯುತ್ತಾರೆ ಅಂತಿದ್ದಾರೆ ನೆಟ್ಟಿಗರು

ಇತ್ತೀಚೆಗೆ, ಶಂಶೇರಾ ಚಿತ್ರದ ಪ್ರಚಾರದಲ್ಲಿ ರಣಬೀರ್ ಜೊತೆ ತೆಗೆದ ಕೆಲವು ಹಾಟ್‌ ಪೋಟೋಗಳನ್ನು ವಾಣಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ವಾಣಿ ಮತ್ತು ರಣಬೀರ್ ಪರಸ್ಪರ ಹತ್ತಿರದಲ್ಲಿ ಕಾಣಿಸಿಕೊಂಡಿದ್ದಾರೆ. 

27

ಕೆಲವು ಬಳಕೆದಾರರು ಈ ಫೋಟೋಗಳಿಗೆ ತುಂಬಾ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಫೋಟೋಗಳಿಗೆ ವಾಣಿಯನ್ನು ಟ್ಯಾಗ್ ಮಾಡುವ ಮೂಲಕ ಬಳಕೆದಾರರು 'ಆಲಿಯಾ ತುಂಬಾ ಹೊಡೆಯುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ. 

37

ಅದೇ ಸಮಯದಲ್ಲಿ, ದಕ್ಷಿಣದ ನಟಿ ರಾಶಿ ಖನ್ನಾ ಮತ್ತು ಫ್ಯಾಷನ್ ಡಿಸೈನರ್‌ಗಳಾದ ಗೌರ್ ಮತ್ತು ನೈಂಕಾ ಕೂಡ ಈ  ಫೋಟೋಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಹೃದಯದ ಎಮೋಜಿ ಶೇರ್‌  ಮಾಡಿದ್ದಾರೆ.


 

47

ಇತ್ತೀಚೆಗೆ, ಈ ಚಿತ್ರದ ನಿರ್ಮಾಪಕರು ಶಂಶೇರಾದ ಎರಡನೇ ಹಾಡನ್ನು 'ಫಿತೂರ್' ಬಿಡುಗಡೆ ಮಾಡಿದ್ದಾರೆ. ಅರಿಜಿತ್ ಸಿಂಗ್ ಮತ್ತು ನೀತಿ ಮೋಹನ್ ಅವರ ಈ ಹಾಡಿಗೆ ರಣಬೀರ್ ಮತ್ತು ವಾಣಿ ಕಪೂರ್ ಅವರ ಕೆಮಿಸ್ಟ್ರಿಯನ್ನು ಅಭಿಮಾನಿಗಳು  ಹೊಗಳುತ್ತಿದ್ದಾರೆ. ಈ ಹಾಡನ್ನು ಸ್ವತಃ ನಿರ್ದೇಶಕ ಕರಣ್ ಮಲ್ಹೋತ್ರಾ ಬರೆದಿದ್ದಾರೆ.

57

ಇತ್ತೀಚೆಗೆ, ಈ ಚಿತ್ರದ ನಿರ್ಮಾಪಕರು ಶಂಶೇರಾದ ಎರಡನೇ ಹಾಡನ್ನು 'ಫಿತೂರ್' ಬಿಡುಗಡೆ ಮಾಡಿದ್ದಾರೆ. ಅರಿಜಿತ್ ಸಿಂಗ್ ಮತ್ತು ನೀತಿ ಮೋಹನ್ ಅವರ ಈ ಹಾಡಿಗೆ ರಣಬೀರ್ ಮತ್ತು ವಾಣಿ ಕಪೂರ್ ಅವರ  ಕೆಮಿಸ್ಟ್ರಿಯನ್ನು ಅಭಿಮಾನಿಗಳು  ಹೊಗಳುತ್ತಿದ್ದಾರೆ. ಈ ಹಾಡನ್ನು ಸ್ವತಃ ನಿರ್ದೇಶಕ ಕರಣ್ ಮಲ್ಹೋತ್ರಾ ಬರೆದಿದ್ದಾರೆ.

67

ವಾಣಿ ಕಪೂರ್ 2013ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ 'ಶುದ್ಧ್ ದೇಸಿ ರೊಮ್ಯಾನ್ಸ್' ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಈಗ ಅವರು 'ಶಂಶೇರಾ' ಚಿತ್ರದಲ್ಲಿ ರಣಬೀರ್ ಅವರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರ ಜೊತೆಗೆ ಸಂಜಯ್ ದತ್ ಕೂಡ ಚಿತ್ರದಲ್ಲಿ ಇರಲಿದ್ದಾರೆ.

77

ಜುಲೈ 22 ರಂದು 'ಶಂಶೇರಾ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ರಣಬೀರ್ ಕಪೂರ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆಯು ತನ್ನ ಜನರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವ ಡಕಾಯಿತನ ಕುರಿತು  ಆಗಿದೆ.
 

Read more Photos on
click me!

Recommended Stories