ಭಾರತೀಯ ಸೌತ್ ಸಿನಿಮಾ ರಂಗ ಮಿಲ್ಕ್ ಬ್ಯೂಟಿ ಹಾಟ್ ಬ್ಯೂಟಿ ಆಂಡ್ ಕ್ಯೂಟಿ ಬ್ಯೂಟಿ ಎಂದು ಮೊದಲು ಕರೆಯಲು ಆರಂಭಿಸಿದ್ದು ತಮನ್ನಾ ಭಾಟಿಯಾರನ್ನು.
ಕಡಿಮೆ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ತಮನ್ನಾ ಭಾಟಿಯ ಇತ್ತೀಚಿಗೆ ವಿಮಾನ ಪ್ರಯಾಣ ಹೆಚ್ಚು ಮಾಡುತ್ತಿದ್ದಾರೆ.
ಹೀಗಾಗಿ ಪದೇ ಪದೇ ಪ್ಯಾಪರಾಜಿಗಳ ಕಣ್ಣಿಗೆ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಪ್ರಾಜೆಕೆಗಳ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳದ ಕಾರಣ ತಮನ್ನಾ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಹಸಿರು ಬಣ್ಣದ ಸೂಟ್ ಧರಿಸಿ ರಾತ್ರಿ ವೇಳೆ ಏರ್‌ಪೋರ್ಟ್‌ಗೆ ಆಗಮಿಸಿರುವ ತಮನ್ನಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ರಾತ್ರಿಯಲ್ಲಿ ಯಾಕಮ್ಮ ನಿನಗೆ ಸೂಟ್? ಸಿಂಪಲ್ ಲುಕ್‌ನಲ್ಲಿ ಬಂದ್ರೆ ಫ್ಲೈಟ್ ಎಂಟ್ರಿ ಇಲ್ವಾ? ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ತಮನ್ನಾ ಕೈಯಲ್ಲಿ ಒಂದು ತೆಲುಗು ಸಿನಿಮಾ ಒಂದು ತಮಿಳು ಸಿನಿಮಾ ಇದೆ. ಸೌತ್ ಬ್ಯೂಟಿಯಾಗಿ ಎರಡೇ ಸಿನಿಮಾಗಳು ಇರುವುದಕ್ಕೆ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ.