KGF 2: ಅಮೀರ್ ಖಾನ್‌ನಿಂದ ಯಶ್ ಸಿನಿಮಾಗೆ ತೊಂದರೆ ?

Published : Nov 20, 2021, 06:34 AM ISTUpdated : Nov 20, 2021, 08:37 AM IST

KGF 2: ಯಶ್ ಪ್ಯಾನ್ ಇಂಡಿಯಾ ಸಿನಿಮಾಗೆ ಅಮೀರ್ ಖಾನ್‌ನಿಂದ(Amir Khan) ತೊಂದರೆಯಾಗುತ್ತಿದೆಯಾ ? ಸ್ಯಾಂಡಲ್‌ವುಡ್(Sandalwood) ಬಿಗ್‌ಬಜೆಟ್ ಸಿನಿಮಾಗೆ ಬಾಲಿವುಡ್(Bollywood) ನಟನಿಂದ ಏನು ತೊಂದರೆ ?

PREV
18
KGF 2: ಅಮೀರ್ ಖಾನ್‌ನಿಂದ ಯಶ್ ಸಿನಿಮಾಗೆ ತೊಂದರೆ ?

ಪ್ರಶಾಂತ್ ನೀಲ್(Prashant Neel) ನಿರ್ದೇಶನದ ಯಶ್ ಅಭಿನಯದ ಕೆಜಿಎಫ್ 2(KGF 2) ವರ್ಷದ ಬಹು ನಿರೀಕ್ಷಿತ ಸಿನಿಮಾ. ಕೆಜಿಎಫ್ 2 ರ ಅಭಿಮಾನಿಗಳು ಎಲ್ಲಾ ಪ್ಯಾನ್ ಇಂಡಿಯಾ(Pan India) ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

28

ಈಗ ಸಿನಿಮಾ ಕುರಿತ ಎಕ್ಸೈಟ್‌ಮೆಂಟ್ ಇನ್ನಷ್ಟು ಹೆಚ್ಚಾಗಿದೆ. ಕೆಲವು ತಿಂಗಳ ಹಿಂದೆ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಇದು ಅಭಿಮಾನಿಗಳ ಕುತೂಹಲ ಕೆರಳಿಸಿತ್ತು.

38

ಬಾಕಿ ಉಳಿದಿರುವ ಸಿನಿಮಾಗಳ ನಿರಂತರ ಬಿಡುಗಡೆಯಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ರಶ್ ಆದ ಕಾರಣ ಕೆಜಿಎಫ್ 2 ರ ನಿರ್ಮಾಪಕರು(Producers) ತಮ್ಮ ಸಿನಿಮಾವನ್ನು ಏಪ್ರಿಲ್ 2022 ಕ್ಕೆ ಮುಂದೂಡಿದ್ದಾರೆ. ಆದರೆ ಈಗ ಕೆಜಿಎಫ್ 2 ದೊಡ್ಡ ಸಂಕಷ್ಟದಲ್ಲಿದೆಯಂತೆ.

48

ಕೇಳಿಬರುತ್ತಿರುವ ಗಾಸಿಪ್‌ಗಳ ಪ್ರಕಾರ  ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಫೆಬ್ರವರಿ 2022 ರಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿತ್ತು. ಆದರೆ ಈಗ COVID19 ಕಾರಣದಿಂದಾಗಿ ಮುಂದೂಡಲಾಗಿದೆ.

58

ಸಿನಿಮಾ ರಿಲೀಸನ್ನು ಏಪ್ರಿಲ್ 2022 ಕ್ಕೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಅಮೀರ್ ಅವರ ಲಾಲ್ ಸಿಂಗ್ ಚಡ್ಡಾ ಮತ್ತು ಯಶ್ ಅವರ ಕೆಜಿಎಫ್ 2 ಚಿತ್ರಮಂದಿರಗಳಲ್ಲಿ ಕ್ಲಾಷ್ ಆಗುವ ಸಾಧ್ಯತೆ ಇದೆ ಎನ್ನುವುದು ಸದ್ಯದ ವರದಿ.

68

ವರದಿಯ ಪ್ರಕಾರ ಅಮೀರ್ ಅವರ ಸಿನಿಮಾ ನಾರ್ತ್‌ ಇಂಡಿಯಾದ ಹೆಚ್ಚಿನ ಥಿಯೇಟರ್‌ಗಳನ್ನು ಆಕ್ರಮಿಸಿಕೊಳ್ಳುತ್ತದೆ. ಕೆಜಿಎಫ್ 2 ನಂತರ ಸರಿಯಾಗಿ ಬಿಡುಗಡೆಯಾಗದೆ ತೊಂದರೆ ಎದುರಿಸಬೇಕಾಗುತ್ತದೆ ಎನ್ನಲಾಗಿದೆ.

78

ಈಗ ಕೆಜಿಎಫ್ 2 ರ ತಯಾರಕರು ಲಾಲ್ ಸಿಂಗ್ ಚಡ್ಡಾ ಫೈನಲ್ ಸಿನಿಮಾ ರಿಲೀಸ್ ಡೇಟ್‌ ಎನೌನ್ಸ್‌ಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ಮತ್ತು ದಕ್ಷಿಣ ನಟ ನಾಗ ಚೈತನ್ಯ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ

88

ಕೆಜಿಎಫ್ 2 ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಅನಂತ್ ನಾಗ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಕಾರ್ತಿಕ್ ಗೌಡ ನಿರ್ಮಿಸಿದ್ದಾರೆ.

Read more Photos on
click me!

Recommended Stories