ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪತ್ರಲೇಖಾ ಕೆಂಪು ಸೀರೆಯಲ್ಲೆ ನವ ವಧುವಿನ ಸೌಂದರ್ಯದಿಂದ ಕಂಗೊಳಿಸುತ್ತಿದ್ದರು. ಮತ್ತೊಂದೆಡೆ, ರಾಜ್‌ಕುಮಾರ್ ರಾವ್ ಬಿಳಿ ಡಿಸೈನರ್ ಕುರ್ತಾ ಧರಿಸಿದ್ದರು. ಅವರ ಮುಖದ ಮೇಲೆ ಮದುವೆಯ ಖುಷಿ ಎದ್ದು ಕಾಣುತ್ತಿತ್ತು.
ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ರಲೇಖಾ ಮತ್ತು ರಾಜ್‌ಕುಮಾರ್ ರಾವ್ ಪರಸ್ಪರ ಕೈ ಹಿಡಿದಿರುವುದು ಕಂಡುಬಂದಿದೆ. ಪತ್ರಲೇಖೆಯ ಕೊರಳಿನಲ್ಲಿ ಧರಿಸಿದ್ದ ಮಂಗಳಸೂತ್ರ ಎಲ್ಲರ ಗಮನ ಸೆಳೆದಿದೆ. ಸೀರೆ ಮತ್ತು ಮಂಗಳಸೂತ್ರವು ನಟಿಯ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು
ಕೆಲಸದ ಕಾರಣದಿಂದ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಮುಂಬೈಗೆ (Mumbai) ಬಂದಿದ್ದಾರೆ. ದಂಪತಿಗೆ ಹನಿಮೂನ್‌ಗಾಗಿ (honeymoon) ವಿದೇಶಕ್ಕೆ ಹೋಗಲು ಸದ್ಯಕ್ಕೆ ಸಮಯವಿಲ್ಲ. ಅವರು ಮೊದಲು ತಮ್ಮ ಕೆಲಸವನ್ನು ಪೂರೈಸಲು ಮುಂದಾಗಿದ್ದಾರೆ.
ವಾಸ್ತವವಾಗಿ, ನವೆಂಬರ್ 18 ರಿಂದ ರಾಜ್‌ಕುಮಾರ್ ಅನುಭವ್ ಸಿನ್ಹಾ ಅವರ 'ಭೋದ್' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಬೇಕಾಗಿತ್ತು. ರಾಜ್‌ಕುಮಾರ್ ಅವರು ಪತ್ರಲೇಖಾ ಜೊತೆ ಹನಿಮೂನ್‌ಗೆ ತೆರಳುವ ಮೊದಲು ಚಿತ್ರದ ಚಿತ್ರೀಕರಣವನ್ನು ಮುಗಿಸಲು ನಿರ್ಧರಿಸಿದ್ದಾರೆ.
‘ಭೋದ್’ ಸಿನಿಮಾದ ಬಹುತೇಕ ಚಿತ್ರೀಕರಣ ಲಕ್ನೋದಲ್ಲಿ ನಡೆಯಲಿದೆ. ಅನುಭವ್ ಸಿನ್ಹಾ ಅವರೊಂದಿಗೆ ಕೆಲಸ ಮಾಡಲು ನಾನು ಥ್ರಿಲ್ ಆಗಿದ್ದೇನೆ ಮತ್ತು ಒಬ್ಬ ನಟನಾಗಿಯೂ ನನ್ನ ಕೆಲಸವನ್ನು ಜನರು ಇಷ್ಟಪಡಬೇಕೆಂದು ನಾನು ಬಯಸುತ್ತೇನೆ ಎಂದು ರಾಜ್‌ಕುಮಾರ್ ರಾವ್ ಕೆಲವು ದಿನಗಳ ಹಿಂದೆ ಹೇಳಿದ್ದರು
ಪತ್ರಲೇಖಾ ಅವರನನ್ನು ವರಿಸಿದ ನಂತರ, ರಾಜ್‌ಕುಮಾರ್ ರಾವ್ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು 'ಅಂತಿಮವಾಗಿ 11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ಮೋಜಿನ ನಂತರ ಸರ್ವಸ್ವವೂ ನನ್ನದೇ ಆದ ಬೆಸ್ಟ್ ಫ್ರೆಂಡ್ ಜೊತೆ ಮದುವೆಯಾಗಿದ್ದೇನೆ ಮತ್ತು ಇಂದು ನಿಮ್ಮ ಪತಿ ಎಂದು ಕರೆಯುವುದಕ್ಕಿಂತ ಹೆಚ್ಚು ಸಂತೋಷವಿಲ್ಲ' ಎಂದು ಫೋಟೋ ಜೊತೆ ಬರೆದಿದ್ದಾರೆ.
ಮದುವೆಯ ಸಂದರ್ಭದಲ್ಲಿ ಪತ್ರಲೇಖಾ ತಾನು ಧರಿಸಿದ್ದ ಚುನರಿಯ ಮೇಲೆ ರಾಜಕುಮಾರ ರಾವ್‌ಗಾಗಿ ವಿಶೇಷವಾದ ಟಿಪ್ಪಣಿ ಬರೆದಿದ್ದರು. ಪತ್ರಲೇಖಾ ಅವರ ದಾವಣಿ ಮೇಲೆ ಬಂಗಾಳಿ ಭಾಷೆಯಲ್ಲಿ 'ಪ್ರೀತಿಯಿಂದ ತುಂಬಿದ ಹೃದಯದಿಂದ, ನಾನು ನಿಮಗೆ ನನ್ನನ್ನು ಒಪ್ಪಿಸುತ್ತೇನೆ' ಎಂದು ಬರೆದಿತ್ತು.