Published : Dec 21, 2021, 09:16 PM ISTUpdated : Dec 21, 2021, 09:18 PM IST
ಮುಂಬೈ(ಡಿ.21) ಈ ವರ್ಷದಲ್ಲಿ ದೊಡ್ಡ ಸುದ್ದಿಗೆ ಕಾರಣವಾಗಿದ್ದು ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra)ಮತ್ತು ಅಶ್ಲೀಲ ಚಿತ್ರ ತಯಾರಿಕೆ (Pornography Case)ಪ್ರಕರಣ. ಜೈಲು ವಾಸವನ್ನು ಅನುಭವಿಸಿದ್ದ ರಾಜ್ ಕುಂದ್ರಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೆ ಮೊದಲ ಸಾರಿ ಎಂಬಂತೆ ಪ್ರಕರಣದ ಬಗ್ಗೆ ಮಾತನಾಡಿದ್ದರು.
ನಟಿ ಶಿಲ್ಪಾ ಶೆಟ್ಟಿ ಮೊದಲಿನಿಂದಲೂ ಗಂಡನ ಪರವಾಗಿ ಬ್ಯಾಟಿಂಗ್ ಮಾಡಿಕೊಂಡೇ ಬಂದಿದ್ದರು. ಇದೀಗ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೆಯೊಂದನ್ನು ಹಂಚಿಕೊಂಡು ಎಲ್ಲರಿಗೂ ಉತ್ತರ ನೀಡುವ ಯತ್ನ ಮಾಡಿದ್ದಾರೆ.
ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಮೌನ ಮುರಿದ ನಂತರ, ನಟಿ ಶಿಲ್ಪಾ ಶೆಟ್ಟಿ ಮಾತನಾಡಿದ್ದಾರೆ. ಬ್ರಿಟಿಷ್ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಹೇಳಿಕೆ ಉಲ್ಲೇಖಿಸಿದ್ದಾರೆ.
39
'The truth is incontrovertible. Malice may attack it, ignorance may deride it, but in the end, there it is' ಇದು ಶಿಲ್ಪಾ ಅವರ ನೇರ ಮಾತು.
49
Raj Kundra
ಸತ್ಯ ಎನ್ನುವುದು ಶಾಶ್ವತ.. ನಿರ್ವಿವಾದ.. ಕೆಲವರು ಅಪಹಾಸ್ಯ ಮಾಡಬಹುದು. ಟೀಕೆ ಮಾಡಬಹುದು, ಆದರೆ ಕೊನೆಯಲ್ಲಿ ಸತ್ಯವೇ ಉಳಿಯುತ್ತದೆ ಎಂದು ಗಂಡನ ಪರವಾಗಿ ಬ್ಯಾಟ್ ಬೀಸಿದ್ದಾರೆ.
59
ಈ ಪ್ರಕರಣವೇ ನನ್ನನ್ನು ಸಿಲುಕಿಸಲು ಮಾಡಿದ ದೊಡ್ಡ ಜಾಲ. ಸಂಚು. ಯಾವುದೇ ರೀತಿ ವಿಚಾರಣೆ ಎದುರಿಸಲು ತಾವು ಸಿದ್ಧ ಎಂದು ರಾಜ್ ಕುಂದ್ರಾ ಹೇಳಿದ್ದರು.
69
ನಾನು ಜೀವನದಲ್ಲಿ ಎಂದೂ ಶ್ಲೀಲ ಚಿತ್ರಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾಗಿಯಾಗಿರಲಿಲ್ಲ. ಕೆಲವರು ಮಾಡಿದ ಪಿತೂರಿಗೆ ನಾನು ಸಿಕ್ಕಿಹಾಕಿಕೊಂಡೆ ಎಂದಿದ್ದರು.
79
ಮಾಧ್ಯಮಗಳ ಮೇಲೆಯೂ ಕೆಂಡ ಕಾರಿದ್ದ ಕುಂದ್ರಾ, ಆಧಾರವಿಲ್ಲದೇ ಸುದ್ದಿ ಪ್ರಸಾರ ಮಾಡುವುದು ಸರಿ ಅಲ್ಲ. ಪ್ರತಿ ಕ್ಷಣವೂ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದಿದ್ದರು.
ಈ ವರ್ಷದ ಜುಲೈನಲ್ಲಿ, ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು, ಅವರು ಮೊಬೈಲ್ ಆ್ಯಪ್ ಗಳ ಮೂಲಕ ಪೋರ್ನ್ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪ ಬಂದಿತ್ತು.
99
ಪತಿಗಾಗಿ ಪರಿತಪಿಸುತ್ತಿದ್ದ ಶಿಲ್ಪಾ ಶೆಟ್ಟಿ ಯಾವ ಕ್ಷಣದಲ್ಲಿಯೂ ಅಂಜಿರಲಿಲ್ಲ. ವೈಷ್ಣೋದೇವಿಗೆ ಪ್ರವಾಸ ಹೋಗಿ ಗಂಡನ ಬಗ್ಗೆ ಪ್ರಾರ್ಥಿಸಿದ್ದರು. ಪ್ರಕರಣ ಇನ್ನು ವಿಚಾರಣೆ ಹಂತದಲ್ಲಿಯೇ ಇದೆ. ನಟಿ ಶೆರ್ಲಿನ್ ಚೋಪ್ರಾ ಸಹ ರಾಜ್ ಮೇಲೆ ಆರೋಪ ಮಾಡಿದ್ದರು.