Govinda Birthday: ಬಾಲಿವುಡ್‌ ನಟನ ಆಸ್ತಿ, ಕಾರು ಕಲೆಕ್ಷನ್‌ & ಲೈಫ್‌ಸ್ಟೈಲ್‌!

Published : Dec 21, 2021, 07:04 PM ISTUpdated : Dec 21, 2021, 07:15 PM IST

ತಮ್ಮ ಪ್ರತಿ ಪಾತ್ರದಿಂದಲೂ ಪ್ರೇಕ್ಷಕರನ್ನು ರಂಜಿಸಿರುವ ಬಾಲಿವುಡ್‌ (Bollywood) ನಟ ಗೋವಿಂದ (Govinda) 58ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 21, 1963 ರಂದು ಮಹಾರಾಷ್ಟ್ರದ ವಿರಾರ್‌ನಲ್ಲಿ ಜನಿಸಿದ ಗೋವಿಂದ ಬಹಳ ದಿನಗಳಿಂದ ದೂರವಿದ್ದಾರೆ. ಆದರೆ ಅವರು ಬಾಲಿವುಡ್‌ನ ಟಾಪ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದ ಕಾಲವೊಂದಿತ್ತು. ತಮ್ಮ ವೃತ್ತಿಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಗೋವಿಂದ ಚಿತ್ರರಂಗದಿಂದ ದೂರವಿದ್ದರೂ ಗಳಿಕೆಯಲ್ಲಿ ಇನ್ನೂ ಹಿಂದೆ ಬಿದ್ದಿಲ್ಲ. ಅವರ ನಿವ್ವಳ ಮೌಲ್ಯದ (net worth) ಬಗ್ಗೆ ಹೇಳುವುದಾದರೆ, ವರದಿಗಳ ಪ್ರಕಾರ ಅವರು ಸುಮಾರು 135 ಕೋಟಿ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ. ಅಷ್ಟೇ ಅಲ್ಲ, 3 ಬಂಗಲೆಗಳು ಮತ್ತು ಐಷಾರಾಮಿ ಕಾರುಗಳ  ಸಂಗ್ರಹವನ್ನು ಹೊಂದಿದ್ದಾರೆ. ಗೋವಿಂದ ಅವರ  ಆಸ್ತಿ (Property) ಮತ್ತು ಜೀವನಶೈಲಿ (Lifestyle) ಬಗ್ಗೆ ವಿವರ ಇಲ್ಲಿದೆ.

PREV
110
Govinda Birthday: ಬಾಲಿವುಡ್‌ ನಟನ ಆಸ್ತಿ, ಕಾರು ಕಲೆಕ್ಷನ್‌ & ಲೈಫ್‌ಸ್ಟೈಲ್‌!

ಗೋವಿಂದ ಅವರ ಮೊದಲು ಸಹಿ ಹಾಕಿದ ಸಿನಿಮಾ ಲವ್ 86. ಆದರೆ ಅವರ ಮೊದಲ ಬಿಡುಗಡೆಯಾದ ಸಿನಿಮಾ ಇಲ್ಜಾಮ್. ಈ ಸಿನಿಮಾದ ಕಾರಣ ಗೋವಿಂದ ರಾತ್ರೋರಾತ್ರಿ ಸ್ಟಾರ್ ಆದರು. ನೀಲಂ ಕೊಠಾರಿ ಪ್ರಮುಖ ಪಾತ್ರದಲ್ಲಿದ್ದರು.


 

210

ಗೋವಿಂದನ ತಂದೆ ಅರುಣ್ ಅಹುಜಾ ಕೂಡ ನಟರಾಗಿದ್ದರು ಮತ್ತು ತಾಯಿ ನಿರ್ಮಲಾ ದೇವಿ ಗಾಯಕಿಯಾಗಿದ್ದರು. ಅವರ ತಂದೆ ಸುಮಾರು 15 ವರ್ಷಗಳ ನಟನಾ ವೃತ್ತಿಜೀವನದಲ್ಲಿ ಸುಮಾರು 30 ಚಿತ್ರಗಳಲ್ಲಿ ನಾಯಕರಾಗಿ ಕೆಲಸ ಮಾಡಿದರು. ತಾಯಿ ಕೂಡ ದೊಡ್ಡ ಗಾಯಕಿ.


 

310

ಗೋವಿಂದ ಅವರು ಕೆಲವು ವರ್ಷಗಳಿಂದ ಬಾಲಿವುಡ್‌ನಿಂದ ದೂರವಿದ್ದರೂ ಸಹ ಅವರ ಗಳಿಕೆ ಏನು ಕಡಿಮೆಯಾಗಿಲ್ಲ. ನಟನ ನಿವ್ವಳ ಮೌಲ್ಯದ  ಸುಮಾರು 135 ಕೋಟಿ ಎಂದು ವರದಿಗಳು ಹೇಳುತ್ತವೆ. 

410

ಸುದ್ದಿ ಪ್ರಕಾರ ಗೋವಿಂದ ಚಿತ್ರವೊಂದಕ್ಕೆ 5-6 ಕೋಟಿ ರೂ ಸಂಭಾವನೆ ಪಡೆದರೆ, ಅದೇ ಸಮಯದಲ್ಲಿ, ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಾಗಿ ರೂ 2 ಕೋಟಿ ಶುಲ್ಕವನ್ನು ವಿಧಿಸುತ್ತಾರೆ. ಗೋವಿಂದ ಪ್ರತಿ ವರ್ಷ ಸುಮಾರು 12 ಕೋಟಿ ರೂ
ಸಂಪಾದಿಸುತ್ತಾರೆ.

510

ಗೋವಿಂದ ಅವರು ಮುಂಬೈ ಮತ್ತು ಸುತ್ತಮುತ್ತ  3 ಬಂಗಲೆಗಳನ್ನು ಹೊಂದಿದ್ದಾರೆ. ಪ್ರಸ್ತುತ ಗೋವಿಂದ ಕುಟುಂಬ ಸಮೇತ ವಾಸವಿರುವ ಮನೆ ಬೆಲೆ  ಸುಮಾರು 16 ಕೋಟಿ ರೂಪಾಯಿಗಳು ಎನ್ನಲಾಗುತ್ತದೆ. 

610

ಇದಲ್ಲದೆ, ಅವರು ಇನ್ನೂ ಎರಡು ಬಂಗಲೆಗಳನ್ನು ಒಂದು ಜುಹು ಮತ್ತು ಒಂದು ಮಡ್ ಐಲ್ಯಾಂಡ್‌ನಲ್ಲಿ ಹೊಂದಿದ್ದಾರೆ. ಅವರು ಹಲವಾರು ರಿಯಲ್ ಎಸ್ಟೇಟ್ ಆಸ್ತಿಗಳನ್ನೂ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ.

710

ಗೋವಿಂದ ಅವರು 64 ಲಕ್ಷ ರೂಪಾಯಿ ಮೌಲ್ಯದ Mercedes Benz GLC, ಸುಮಾರು 43 ಲಕ್ಷ ರೂಪಾಯಿ ಬೆಲೆಯ Mercedes C220D ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇದರೊಂದಿಗೆ 34 ಲಕ್ಷ ಮೌಲ್ಯದ ಟೊಯೊಟಾ ಫಾರ್ಚುನರ್ ಮತ್ತು ಹ್ಯುಂಡೈ ಕ್ರೆಟಾ ಕೂಡ ಹೊಂದಿದ್ದಾರೆ.

810

ಗೋವಿಂದ ಅವರ ವೈಯಕ್ತಿಕ ಜೀವನದ ಬಗ್ಗೆ  ಹೇಳಿವುದಾದರೆ ಅವರು ಮಾರ್ಚ್ 11, 1987 ರಂದು ಸುನೀತಾ ಮುಂಜಾಲ್ ಅವರನ್ನು ವಿವಾಹವಾದರು. ಆದರೆ ಅವರ ಮದುವೆ ನಾಲ್ಕು ವರ್ಷಗಳ ಕಾಲ ರಹಸ್ಯವಾಗಿ ಉಳಿಯಿತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಟೀನಾ ಅಹುಜಾ ಮತ್ತು ಮಗ ಯಶವರ್ಧನ್. ಗೋವಿಂದ 6 ಒಡಹುಟ್ಟಿದವರಲ್ಲಿ ಕಿರಿಯವರು.

910

ಗೋವಿಂದ ಅವರು ತಮ್ಮ ಮೊದಲ ಚಿತ್ರವನ್ನು 21 ನೇ ವಯಸ್ಸಿನಲ್ಲಿ ಮಾಡಿರುವುದಾಗಿ  ಹೇಳಿದರು. ಅವರು ತಮ್ಮ 21 ನೇ ವಯಸ್ಸಿನಲ್ಲಿ 50 ದಿನಗಳಲ್ಲಿ 49 ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ಅವರು ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ. ಗೋವಿಂದ  ಅವರ ವೃತ್ತಿಜೀವನದಲ್ಲಿ ಪ್ರತಿಯೊಬ್ಬ ನಿರ್ದೇಶಕರು ಅವರು ಸಿನಿಮಾಗೆ ಸಹಿ ಹಾಕಲು ಕಾಯುತ್ತಿದ್ದ ಸಮಯವಿತ್ತು.

1010

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಗೋವಿಂದ ಸಖತ್‌ ಸದ್ದು ಮಾಡಿದ್ದಾರೆ. ಗೋವಿಂದರ ಸ್ಟಾರ್‌ಡಮ್‌ ಕಂಡು ಅನೇಕರು ಹೊಟ್ಟೆಕಿಚ್ಚುಪಟ್ಟಿದ್ದರು. ಇದರಿಂದಾಗಿ ಬಾಲಿವುಡ್‌ನಲ್ಲಿ ಹರಡಿರುವ ಗ್ರೂಪಿಸಂ ಮತ್ತು ಗ್ಯಾಂಗ್‌ಗಳು ಅವರನ್ನು ಗುರಿಯಾಗಿಸಿ ನಟನನ್ನು ಬದಿಗೆ ಸರಿಸಿದ್ದರು ಎಂದು ಸ್ವತಃ ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Read more Photos on
click me!

Recommended Stories