Malaika Arora-Arjun Kapoor: ಮುಂದಿನ ವರ್ಷ ಮದುವೆಗೆ ರೆಡಿನಾ ಲವ್‌ಬರ್ಡ್ಸ್‌?

Suvarna News   | Asianet News
Published : Dec 21, 2021, 07:01 PM IST

ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾಗಿದೆ. ಗಾಸಿಪ್ ಕಾಲಂಗಳಲ್ಲಿ ಹೆಚ್ಚು ಚರ್ಚೆಯಾಗುವ ಫೇಮಸ್‌ ಕಪಲ್‌ ಇವರು. ಅವರು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿರುವ ಈ ಜೋಡಿಯ ರಿಲೆಷನ್‌ಶಿಪ್‌ ಗಟ್ಟಿಯಾಗುತ್ತಿದೆ. ಮಲೈಕಾ ಅರೋರಾ, ಅರ್ಜುನ್ ಕಪೂರ್ ಮುಂದಿನ ವರ್ಷ ಮದುವೆಯಾಗಲು ಸಿದ್ಧವಾಗಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ ಹಾಗೂ ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಸಹ ಈ ಜೋಡಿ ಮುಂದಿನ ವರ್ಷ ಮದುವೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪೂರ್ತಿ ವಿವರಕ್ಕೆ ಮುಂದೆ ಓದಿ.

PREV
17
Malaika Arora-Arjun Kapoor:  ಮುಂದಿನ ವರ್ಷ ಮದುವೆಗೆ ರೆಡಿನಾ ಲವ್‌ಬರ್ಡ್ಸ್‌?

ಕೆಲವು ವಾರಗಳ ಹಿಂದೆ, ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್‌ ಜೊತೆಯಾಗಿ ಹಾಲಿಡೇಗೆ ತೆರಳಿದರು ಮತ್ತು ತಮ್ಮ ಮಾಲ್ಡೀವ್ಸ್ ವೆಕೇಷನ್‌ನ ರೊಮ್ಯಾಂಟಿಕ್ ವೀಡಿಯೊಗಳು ಮತ್ತು ಫೋಟೋಗಳನ್ನು ಈ ಕಪಲ್‌ ಫ್ಯಾನ್ಸ್‌ ಜೊತೆ ಶೇರ್‌ ಮಾಡಿಕೊಂಡಿದ್ದರು.

27

ಮಲೈಕಾ ಹಾಗೂ ಅರ್ಜುನ್‌ ಇಬ್ಬರೂ ಜೊತೆಯಾಗಿ ಸಖತ್‌ ಕ್ಯೂಟ್‌ ಹಾಗೂ ಹಾಟ್ ಆಗಿ ಕಾಣುತ್ತಿದ್ದರು. ಇವರ ಮಾಲ್ಡೀವ್ಸ್‌ನ ರೋಮ್ಯಾಂಟಿಕ್‌ ಹಾಲಿಡೇ ಫೋಟೋಗಳಿಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ ಮತ್ತು ಫೋಟೋಗಳು ಸಖತ್‌ ವೈರಲ್‌ ಆಗಿವೆ ಕೂಡ

37

ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಪ್ರಕಾರ, ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್‌ ಮುಂದಿನ ವರ್ಷ 2022 ರಲ್ಲಿ ಮದುವೆಯಾಗಬಹುದು. ಅವರು ಈ ಸಂಬಂಧದ ಬಗ್ಗೆ ಕೆಲವು ತಮ್ಮ ಎಕ್ಸ್‌ಪರ್ಟ್‌ ಅಭಿಪ್ರಾಯವನ್ನು ನೀಡಿದ್ದಾರೆ. 

47

2022 ರ ವೇಳೆಗೆ ಇಬ್ಬರೂ ಮದುವೆಯಾಗಬಹುದು ಮತ್ತು ನಟ ಅರ್ಜುನ್ ಭಾವನಾತ್ಮಕ ವ್ಯಕ್ತಿ ಹಾಗೂ ಮಲೈಕಾಗೆ ಅವರು ಪಾರ್ಟ್‌ನರ್‌. ಆದಾಗ್ಯೂ, ಮಲೈಕಾ ಹೆಚ್ಚು ಪ್ರಾಕ್ಟಿಕಲ್‌ ಮತ್ತು ಸ್ಟ್ರಾಂಗ್‌ ಮೈಂಡೆಡ್‌ ಎಂದು ಪಂಡಿತ್ ಹೇಳಿದ್ದಾರೆ.

57

'ಅವರಲ್ಲಿ ಯಾರೊಬ್ಬರೂ ಸಹ ದುರ್ಬಲ ಮನಸ್ಸಿನವರಲ್ಲ, ಅದಕ್ಕಾಗಿಯೇ ಅವರ ಸಂಬಂಧವು ಆರಂಭಿಕ ಟೀಕೆಗಳ ಹೊರತಾಗಿಯೂ (ವಯಸ್ಸಿನ ಅಂತರ ಮತ್ತು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್‌ ಮಲೈಕಾರ ವಿಚ್ಛೇದನ ) ಮತ್ತು ದಂಪತಿಗಳು ಎದುರಿಸಿದ ಇತರ ಸಮಸ್ಯೆಗಳ ಹೊರತಾಗಿಯೂ ಅವರ ಸಂಬಂಧವು ಗಟ್ಟಿಯಾಗಿದೆ' ಎಂದು ಜ್ಯೋತಿಷಿ ಹೇಳಿದರು.

67

'ಮದುವೆಯ ನಂತರ ಮಲೈಕಾ ಮತ್ತು ಅರ್ಜುನ್ ಅವರು ಚಲನಚಿತ್ರ ನಿರ್ಮಾಣ ಕಚೇರಿಯನ್ನು ತೆರೆದು ದೊಡ್ಡ ವ್ಯಾಪಾರ ಮಾಡಬೇಕು ಎಂದು ಜ್ಯೋತಿಷಿ ಇನ್ನಷ್ಟೂ ಹೇಳಿದ್ದಾರೆ. ನಿರ್ಮಾಪಕರಾಗಿ ಅರ್ಜುನ್ ಇನ್ನಷ್ಟು ದಾರಿಗಳನ್ನು ಅನ್ವೇಷಿಸಬೇಕು. ಮಲೈಕಾ ಕೂಡ ಅವರ ಜೊತೆ  ಹೋಗುತ್ತಾರೆ' ಎಂದು ಅವರು ಹೇಳಿದರು.

77

'ಈ ಸಂಯೋಜನೆಯು (ಮಲೈಕಾ ಮತ್ತು ಅರ್ಜುನ್ ಅವರ ಸ್ವಭಾವ) ಅವರ ಪರವಾಗಿ ಕೆಲಸ ಮಾಡುತ್ತದೆ ಮತ್ತು ಅವರ ಬಂಧವನ್ನು ಗಟ್ಟಿಗೊಳಿಸುತ್ತದೆ. ಅವರ ಸಂಬಂಧದ ಮತ್ತೊಂದು ಸಕಾರಾತ್ಮಕ ಅಂಶವೆಂದರೆ ಅವರು ದುರ್ಬಲ ಮನಸ್ಸಿನವರಲ್ಲ. ಅವರ ಡೈನಾಮಿಕ್‌ ಕನೆಕ್ಷನ್‌ ಕಾರಣದಿಂದ  ಅವರು ಗಟ್ಟಿಯಾಗಿದ್ದಾರೆ'ಎಂದು ಜ್ಯೋತಿಷಿ ಹೇಳಿದರು.

Read more Photos on
click me!

Recommended Stories