Cancer ಗೆದ್ದು ಮತ್ತೆ ಕೆಲಸಕ್ಕೆ ಮರಳಿದ ಕಿರಣ್‌ ಖೇರ್‌!

First Published Nov 12, 2021, 4:32 PM IST

ಬಾಲಿವುಡ್‌ನ (Bollywod )ಖ್ಯಾತ ನಟಿ ಕಿರಣ್ ಖೇರ್ (Kirron Kher) ಕ್ಯಾನ್ಸರ್ (Cancer) ಅನ್ನು ಸೋಲಿಸಿ, ಕೆಲಸಕ್ಕೆ ಮರಳುತ್ತಿದ್ದಾರೆ.  ಶಿಲ್ಪಾ ಶೆಟ್ಟಿ, ಬಾದ್‌ಶಾ ಅವರೊಂದಿಗೆ ಕಾರ್ಯಕ್ರಮದ ಜಡ್ಜ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಿರಣ್ ಖೇರ್ ಅವರು ಟಿವಿ ರಿಯಾಲಿಟಿ ಶೋ India got talentನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಖ್ಯಾತ ನಟಿ ಕಿರಣ್ ಖೇರ್  ಕ್ಯಾನ್ಸರ್ ಕಾರಣ ಕೆಲಸದಿಂದ ದೂರವಿದ್ದರು. ಅದೇ ಸಮಯದಲ್ಲಿ ಅವರ ಪತಿ ಅನುಪಮ್ ಖೇರ್ ತಮ್ಮ ಪತ್ನಿಯ ಆರೋಗ್ಯದ ಬಗ್ಗೆ ಆಗಾಗ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಈ ನಡುವೆ ಕಿರಣ್ ಖೇರ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.

 ಅವರು ಟಿವಿಯ ಅತ್ಯಂತ ಜನಪ್ರಿಯ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ತೀರ್ಪುಗಾರರಾಗಿ ಮರಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅನುಪಮ್ ಖೇರ್ ಅವರು ತಮ್ಮ ಪತ್ನಿ ಮಲ್ಟಿಪಲ್ ಮೈಲೋಮಾದಿಂದ ಬಳಲುತ್ತಿರುವ ಬಗ್ಗೆ ತಿಳಿಸಿದ್ದರು ಹಾಗೂ  ಅವರ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು. 

ಅವರ ಮಗ ಸಿಕಂದರ್ ಕೂಡ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ ಮತ್ತು  ಕಿರಣ್ ಖೇರ್ ಅವರ ಆರೋಗ್ಯದ ಅಪ್‌ಡೇಟ್ಸ್‌  ನೀಡಿದ್ದಾರೆ. .  

ಇಂಡಿಯಾಸ್ ಗಾಟ್ ಟ್ಯಾಲೆಂಟ್ ಎಂಬ ರಿಯಾಲಿಟಿ ಶೋನಲ್ಲಿ ಕಿರಣ್ ಖೇರ್ ಶಿಲ್ಪಾ ಶೆಟ್ಟಿ ಮತ್ತು ರಾಪರ್ ಬಾದ್‌ಶಾ ಅವರೊಂದಿಗೆ ಕಾರ್ಯಕ್ರಮವನ್ನು  ಜಡ್ಜ್‌ ಮಾಡಲಿದ್ದಾರೆ.  ಇದಕ್ಕೂ ಮುನ್ನ ಸಹ ಅವರು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಅವರು 2009 ರಿಂದ ಈ ಶೋನಲ್ಲಿದ್ದಾರೆ.

Kirron Kher

'ಈ ಕಾರ್ಯಕ್ರಮ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇದು ನನ್ನ 9ನೇ ವರ್ಷ. ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ತೀರ್ಪುಗಾರರ ಸದಸ್ಯರಾಗಿ ಮರಳಿ ಬಂದಿರುವುದು ಸಂತಸ ತಂದಿದೆ. ಮನೆಗೆ ಬಂದಂತೆ ಅನಿಸುತ್ತಿದೆ. ಈ ಪ್ರದರ್ಶನದಲ್ಲಿ ಉತ್ತಮ ಪ್ರತಿಭೆಯನ್ನು ಕಾಣಬಹುದು' ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ವಾಸ್ತವವಾಗಿ, ನವೆಂಬರ್ 11, 2020 ರಂದು, ಕಿರಣ್ ಖೇರ್ ಚಂಡೀಗಢದ ತನ್ನ ಮನೆಯಲ್ಲಿ ಬಿದ್ದಿದ್ದರು, ಇದರಿಂದ ಆಕೆಯ ಎಡಗೈ ಗಾಯಗೊಂಡಿತ್ತು. ಇದರ ನಂತರ, ಪರೀಕ್ಷೆಯಲ್ಲಿ, ಅವರಿಗೆ ಮಲ್ಟಿಪಲ್ ಮೈಲೋಮಾ ಇರುವುದು ಕಂಡುಬಂದಿದೆ. ಅಂದಿನಿಂದ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಅವರು ಮೇ 2021 ರಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮೂಳೆ ಮಜ್ಜೆಯ ಸರ್ಜರಿಯನ್ನು ಸಹ ಮಾಡಿದರು. ಈ ಶಸ್ತ್ರಚಿಕಿತ್ಸೆಯಲ್ಲಿ, ಮೂಳೆ ಮಜ್ಜೆಯಿಂದ ಕ್ಯಾನ್ಸರ್ ಮೂಳೆಯನ್ನು ತೆಗೆದುಹಾಕಲು ಪ್ರಯತ್ನಿಸಲಾಯಿತು.

ಕಿರಣ್ ಖೇರ್ ತನ್ನ ವೃತ್ತಿಜೀವನವನ್ನು 1983 ರಲ್ಲಿ ಪಂಜಾಬಿ ಚಲನಚಿತ್ರ ಆಸ್ರಾ ಪ್ಯಾರ್ ದಾ ಮೂಲಕ ಪ್ರಾರಂಭಿಸಿದರು. ಇದರ ನಂತರ, ಅವರು 1996 ರಲ್ಲಿ ಶ್ಯಾಮ್ ಬೆನಗಲ್ ಅವರ ಚಲನಚಿತ್ರ ಸರ್ದಾರಿ ಬೇಗಂನಲ್ಲಿ ಕಾಣಿಸಿಕೊಂಡರು.
 

ಅವರು ದೇವದಾಸ್, ಮೈ ಹೂ ನಾ, ಹಮ್ ತುಮ್, ವೀರ್-ಜಾರಾ, ಮಂಗಲ್ ಪಾಂಡೆ, ರಂಗ್ ದೇ ಬಸಂತಿ, ಬ್ಯೂಟಿಫುಲ್, ದೋಸ್ತಾನಾ, ಫನಾ, ಓಂ ಶಾಂತಿ ಓಂ, ಅಪ್ನೆ, ಸಿಂಗ್ ಈಸ್ ಕಿಂಗ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

click me!