ಮುಂದಿನ ದಿನಗಳಲ್ಲಿ ಶಿಲ್ಪಾ ಶೆಟ್ಟಿ 'ನಿಕಮ್ಮ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೇಥಿಯಾ ಜೊತೆ ಶಿಲ್ಪಾ ತೆರೆ ಹಂಚಿಕೊಳ್ಳಲಿದ್ದಾರೆ. ಕೆಲ ಸಮಯದ ಹಿಂದೆ ಅವರ 'ಹಂಗಾಮಾ 2' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ಮೂಲಕ ನಟಿ ಮತ್ತೆ ನಟನೆಗೆ ಮರಳಿದರು, ಆದರೆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಹೆಸರು ಮಾಡಲು ಸಾಧ್ಯವಾಗಲಿಲ್ಲ.