ಬೇಡಿಯವರ ಮೊದಲ ವಿವಾಹವು ನರ್ತಕಿ ಪ್ರೊತಿಮಾ ಬೇಡಿ ಅವರೊಂದಿಗೆ 1969 ರಲ್ಲಿ ಆಗಿತ್ತು. ಪ್ರೋತಿಮಾ-ಕಬೀರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಪೂಜಾ ಬೇಡಿ ಮತ್ತು ಮಗ ಸಿದ್ಧಾರ್ಥ್. ಇಬ್ಬರೂ ಸುಮಾರು 5 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಅವರು 1974 ರಲ್ಲಿ ವಿಚ್ಛೇದನ ಪಡೆದರು. ಈ ಮಧ್ಯೆ, ಪುತ್ರ ಸಿದ್ಧಾರ್ಥ್ ಆತ್ಮಹತ್ಯೆಯಿಂದ ಕಬೀರ್ ಮತ್ತು ಪ್ರೋತಿಮಾ ಇಬ್ಬರೂ ಆಘಾತಕ್ಕೊಳಗಾಗಿದ್ದರು. ಆದಾಗ್ಯೂ, ಸ್ವಲ್ಪ ಸಮಯದ ನಂತರ ಪ್ರೋತಿಮಾ ಕೂಡ ಅಪಘಾತದಲ್ಲಿ ನಿಧನರಾದರು.