Deepveer In Airport: ಕೈ ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ದೀಪಿಕಾ ರಣವೀರ್‌, ಈ ಜೋಡಿ ಪ್ರೀತಿಗೆ ಫ್ಯಾನ್ಸ್‌ ಫಿದಾ!

Published : Jan 16, 2022, 05:59 PM ISTUpdated : Jan 16, 2022, 06:05 PM IST

ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ (Deepiak Padukone) ಮತ್ತು ರಣವೀರ್ ಸಿಂಗ್ (Ranveer Singh) ಎಲ್ಲಿಗೆ ಹೋದರೂ ಎಲ್ಲರ ಕಣ್ಣು ಅವರ ಮೇಲೆಯೇ ಇರುತ್ತದೆ. ಈ ಜೋಡಿ ಸಾರ್ವಜನಿಕ ಸ್ಥಳಗಳಲ್ಲಿಯೂ ಇಬ್ಬರೂ ತಮ್ಮ ಪ್ರೀತಿಯನ್ನು ಒಬ್ಬರಿಗೊಬ್ಬರು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ದೀಪಿಕಾ ರಣವೀರ್‌ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕೈಕೈ ಹಿಡಿದು ಕಾಣಿಸಿಕೊಂಡಿದ್ದಾರೆ.ಇವರ ಫೋಟೋಗಳು ವೈರಲ್‌ ಆಗಿವೆ. 

PREV
16
Deepveer In Airport: ಕೈ ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ದೀಪಿಕಾ ರಣವೀರ್‌, ಈ ಜೋಡಿ ಪ್ರೀತಿಗೆ ಫ್ಯಾನ್ಸ್‌ ಫಿದಾ!

ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಕೈಕೈ ಹಿಡಿದು ನಡೆಯುತ್ತಿರುವುದು ಕಂಡುಬಂದಿದೆ. ಒಂದು ಕ್ಷಣವೂ ಇಬ್ಬರೂ ತಮ್ಮ ಕೈ ಬಿಟ್ಟಿರಲಿಲ್ಲ.

26

ದೀಪಿಕಾ ಪಡುಕೋಣೆ ಡೀಪ್ ನೆಕ್ ಹೊಂದಿರುವ ಬಿಳಿ ಟಿ-ಶರ್ಟ್ ಮತ್ತು ಬ್ಯಾಗಿ ಡೆನಿಮ್ ಪ್ಯಾಂಟ್‌ ಧರಿಸಿದ್ದರು. ಅವರು ತುಂಬಾ ಸೆಕ್ಸಿಯಾಗಿ ಕಾಣುತ್ತಿದ್ದರು. ಮತ್ತೊಂದೆಡೆ, ರಣವೀರ್ ಸಿಂಗ್ ಬೂದು ಬಣ್ಣದ ಟೀ ಶರ್ಟ್ ಮತ್ತು ನೀಲಿ ಡೆನಿಮ್‌ನಲ್ಲಿ   ಕೂಲ್ ಆಗಿ ಕಾಣುತ್ತಿದ್ದರು.


 

36

ಹೊಸ ವರ್ಷದ ಸೆಲೆಬ್ರೆಷನ್‌  ನಂತರ ಈಗ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಂಬೈಗೆ ಹಿಂತಿರುಗಿದ್ದಾರೆ. ಕೊರೋನಾ ಪ್ರೋಟೋಕಾಲ್ ಅನುಸರಿಸಿ, ಇಬ್ಬರೂ ಮಾಸ್ಕ್ ಧರಿಸಿದ್ದರು. ಪಾಪರಾಜಿ ಕ್ಯಾಮರಕ್ಕೂ ಇಬ್ಬರೂ ತಮ್ಮ ಮಾಸ್ಕ್‌ ತೆಗೆಯಲಿಲ್ಲ.
 

46

ಇತ್ತೀಚೆಗೆ ದೀಪಿಕಾ ಮತ್ತು ರಣವೀರ್ ಸಿಂಗ್ '83' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಇದಲ್ಲದೆ, ದೀಪಿಕಾ ಪಡುಕೋಣೆ 'ಗೆಹ್ರಾಯನ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾನ್ ಅಬ್ರಹಾಂ ನಟಿಸಿರುವ 'ಪಠಾಣ್' ಸಿನಿಮಾದಲ್ಲೂ ಶಾರುಖ್ ಖಾನ್ ಎದುರು ನಟಿ ಕಾಣಿಸಿಕೊಳ್ಳಲಿದ್ದಾರೆ.  ಅದೇ ಸಮಯದಲ್ಲಿ, ರಣವೀರ್ ಸಿಂಗ್ ಕರಣ್ ಜೋಹರ್ ಅವರ ಮುಂಬರುವ ಪ್ರಾಜೆಕ್ಟ್‌ಗಳಾದ 'ರಾಕಿ' ಮತ್ತು 'ರಾಣಿ ಕಿ ಪ್ರೇಮ್ ಕಹಾನಿ' ನಲ್ಲಿ ಕೆಲಸ ಮಾಡುತ್ತಿದ್ದಾರೆ.

56

ಮಲೈಕಾ ಅರೋರಾ ತನ್ನ ಮಗ ಅರ್ಹಾನ್ ಖಾನ್ ಮತ್ತು ಸ್ನೇಹಿತರೊಂದಿಗೆ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಮಯದಲ್ಲಿ ನಟಿ ನೀಲಿ ಬಣ್ಣದ ಟಾಪ್ ಮತ್ತು ಕಂದು ಬಣ್ಣದ ಡೆನಿಮ್ ಧರಿಸಿದ್ದರು. ಅದೇ ಸಮಯದಲ್ಲಿ, ಅರ್ಹಾನ್ ಚೆಕ್ ಶರ್ಟ್ ಮತ್ತು ನೀಲಿ ಡೆನಿಮ್ ಧರಿಸಿದ್ದರು. 

66

ಟಿವಿಯಿಂದ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರು ಗುರ್ಮೀತ್ ಸಿಂಗ್ ಆನಂದ್ ಪಂಡಿತ್ ಅವರ ಆಫೀಸ್‌ ಹೊರಗೆ  ಸಖತ್‌ ಕೂಲ್‌ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸದ ಮುಂಭಾಗದಲ್ಲಿ, ಗುರ್ಮೀತ್ ಚೌಧರಿ ಅವರು ಸರ್ಮದ್ ಖಾನ್ ನಿರ್ದೇಶನದ ದಿ ವೈಫ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.

Read more Photos on
click me!

Recommended Stories