Shah Rukh Khan: 5 ವರ್ಷಗಳ ನಂತರ ತೆರೆಗೆ ಹಿಂತಿರುಗುತ್ತಿರುವ ಶಾರುಖ್ ಖಾನ್‌ ನರ್ವಸ್‌?

Published : Jan 24, 2023, 03:42 PM IST

ಶಾರುಖ್ ಖಾನ್ (Shah Rukh Khan) 5 ವರ್ಷಗಳ ನಂತರ ಪಠಾಣ್ ( Pathaan) ಮೂಲಕ ತೆರೆಗೆ ಮರಳುತ್ತಿದ್ದಾರೆ. ಪಠಾಣ್ ಬಿಡುಗಡೆಗೂ ಮುನ್ನ ಅವರ ಆತಂಕ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ದಿನಗಳಲ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ  ಸಕ್ರಿಯರಾಗಿದ್ದಾರೆ ಮತ್ತು ಪ್ರತಿದಿನ ಚಿತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

PREV
18
Shah Rukh Khan: 5 ವರ್ಷಗಳ ನಂತರ ತೆರೆಗೆ ಹಿಂತಿರುಗುತ್ತಿರುವ ಶಾರುಖ್ ಖಾನ್‌ ನರ್ವಸ್‌?

ಶಾರುಖ್ ಖಾನ್ 5 ವರ್ಷಗಳ ಹಿಂದೆ ಅಂದರೆ 2018 ರಲ್ಲಿ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ  ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದಾಗಿ ಸೋತಿತು. ಚಿತ್ರದಲ್ಲಿ ಇವರೊಂದಿಗೆ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದರು.
 

28

ಶಾರುಖ್ ಖಾನ್ ಅವರ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಝೀರೋ ಚಿತ್ರವನ್ನು ಆನಂದ್ ಅನಿಲ್ ರೈ ನಿರ್ದೇಶಿಸಿದ್ದರು. ಶಾರುಖ್ ಈ ಸಿನಿಮಾದಲ್ಲಿ ಹೊಸ ಸಬ್ಜೆಕ್ಟ್ ತೋರಿಸಿದ್ದರಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.

38

ಶಾರುಖ್ ಖಾನ್ ಝೀರೋ ಚಿತ್ರದ ನಂತರ ಸ್ವಲ್ಪ ವಿರಾಮ ತೆಗೆದುಕೊಂಡು ನಟನೆಯಿಂದ ದೂರವಾದರು. ನಂತರ ಅವರು ಯಶ್ ರಾಜ್ ಫಿಲ್ಮ್ಸ್‌ನ ಪಠಾಣ್‌ಗೆ ಸಹಿ ಹಾಕಿದರು.

48

ಪಠಾಣ್ ಚಿತ್ರ ಜನವರಿ 25 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಶಾರುಖ್ ಖಾನ್ ಆತಂಕ ಸ್ಪಷ್ಟವಾಗಿ ಗೋಚರಿಸುತ್ತಿದೆ. ಚಿತ್ರವನ್ನು ಹಿಟ್ ಮಾಡಲು ಶಾರುಕ್ ವಿಭಿನ್ನ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. 

58

ಇತ್ತೀಚಿನ ದಿನಗಳಲ್ಲಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಅವರು Askmeanything ಸೆನ್ಸೇಶನ್ ಅನ್ನು ಹಲವಾರು ಬಾರಿ ನಡೆಸಿದ್ದಾರೆ ಇಷ್ಟೇ ಅಲ್ಲ, ಶಾರುಖ್ ಖಾನ್ ಇನ್ಸ್ಟಾಗ್ರಾಮ್‌ನಲ್ಲೂ  ಪಠಾಣ್ ಬಿಡುಗಡೆಯ ಬಗ್ಗೆ  ಮತ್ತು ಇತರ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. 
 

68

ಕೆಲವು ನಿಮಿಷಗಳ ಹಿಂದೆ, ಅವರು ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡು ' ಆಕ್ಷನ್-ಪ್ಯಾಕ್ಡ್ ರೈಡ್ ಅನ್ನು ಸೇರಿಕೊಳ್ಳಿ #ಪಠಾಣ್. ಈ ಬುಧವಾರ, ಜನವರಿ 25 ರಂದು @IMAX ನಲ್ಲಿ ಅದನ್ನು ಅನುಭವಿಸಿ. ಚಿತ್ರಕ್ಕಾಗಿ ಮುಂಗಡವಾಗಿ ಟಿಕೆಟ್‌ಗಳನ್ನು ಎಲ್ಲಿಂದ ಬುಕ್ ಮಾಡಬಹುದು ಎಂಬುದನ್ನು ಅವರು ಪೋಸ್ಟ್ ಮೂಲಕ ತಿಳಿಸಿದ್ದಾರೆ. 


 

78

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ 250 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ  ಪಠಾಣ್  ಚಿತ್ರದ ನಿರ್ದೇಶಕರು ಸಿದ್ಧಾರ್ಥ್ ಆನಂದ್ ಮತ್ತು ನಿರ್ಮಾಪಕರು ಆದಿತ್ಯ ಚೋಪ್ರಾ. ಚಿತ್ರದಲ್ಲಿ ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

88

ವರದಿಗಳ ಪ್ರಕಾರ ಪಠಾಣ್  ಸಿನಿಮಾದ  ಮುಂಗಡ ಬುಕ್ಕಿಂಗ್ ಭರದಿಂದ ಸಾಗುತ್ತಿದೆ. ಹೊರಬಿದ್ದಿರುವ ಅಂಕಿಅಂಶಗಳನ್ನು ನೋಡಿದರೆ ಇಲ್ಲಿಯವರೆಗೆ ಸುಮಾರು 4.19 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಈ ಮೂಲಕ ಪಠಾಣ್ ಹೊಸ ದಾಖಲೆ ಬರೆಯಲ್ಲಿದೆ ಎಂದು ಊಹಿಸಲಾಗುತ್ತಿದೆ.

Read more Photos on
click me!

Recommended Stories