ಬಾಬಿ ಕೋಲಿ ನಿರ್ದೇಶನದ ಈ ಆಕ್ಷನ್ ಕಾಮಿಡಿ ಡ್ರಾಮಾದಲ್ಲಿ ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳನ್ನು ನಂಬುವುದಾದರೆ, ಅವರು ಚಿತ್ರಕ್ಕಾಗಿ ಸುಮಾರು 50 ಕೋಟಿ ರೂ ಚಾರ್ಜ್ ಮಾಡಿದ್ದಾರೆ.
ಈ ಚಿತ್ರದಲ್ಲಿ ರವಿತೇಜ ಎರಡನೇ ಪ್ರಮುಖ ಪಾತ್ರದಲ್ಲಿದ್ದು, ಎಸಿಪಿ ವಿಕ್ರಮ್ ಸಾಗರ್ ಪಾತ್ರ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಾಸ್ ಮಹಾರಾಜ ಎಂದೇ ಖ್ಯಾತರಾಗಿರುವ ರವಿ ಈ ಚಿತ್ರಕ್ಕಾಗಿ ಸುಮಾರು 17 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ.
ಚಿತ್ರದ ನಾಯಕಿ ಶ್ರುತಿ ಹಾಸನ್. ಅವರು RAW ಏಜೆಂಟ್ ಆಗಿದ್ದಾರೆ. ಈ ಚಿತ್ರಕ್ಕಾಗಿ ಶೃತಿ ಹಾಸನ್ ಅವರು ಸುಮಾರು 2.5 ಕೋಟಿ ಪಡೆದಿದ್ದಾರೆ.
'ವಾಲ್ಟರ್ ವೀರಯ್ಯ' ಚಿತ್ರದಲ್ಲಿ ಪ್ರಕಾಶ್ ರಾಜ್ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ಮೈಕೆಲ್ ಸೀಸರ್. ಈ ಪಾತ್ರಕ್ಕಾಗಿ ಪ್ರಕಾಶ್ ರಾಜ್ ಸುಮಾರು 1.5 ಕೋಟಿ ರೂ ಫೀಸ್ ಚಾರ್ಜ್ ಮಾಡಿದ್ದಾರೆ
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು 'ವಾಲ್ಟರ್ ವೀರಯ್ಯ' ಚಿತ್ರದಲ್ಲಿ ಐಟಂ ನಂಬರ್ ಮಾಡಿದ್ದಾರೆ ಮತ್ತು ಈ ಹಾಡಿಗೆ ಸುಮಾರು 2 ಕೋಟಿ ರೂ ವರದಿಯಾಗಿದೆ. ಈ ಹಾಡು ಕೇವಲ 3 ನಿಮಿಷಗಳಷ್ಟು ಉದ್ದವಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಬಾಬಿ ಸಿಂಹ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರು ಚಿತ್ರಕ್ಕಾಗಿ ಸುಮಾರು 85 ಲಕ್ಷ ಸಂಬಾವನೆ ಪಡೆದಿರುತ್ತಾರೆ
Catherine Tresa in Bimbisara Pre Release Event
ಕ್ಯಾಥರೀನ್ ತೆರೇಸಾ ಈ ಚಿತ್ರದಲ್ಲಿ ಡಾ.ನಿತ್ಯ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಈ ಪಾತ್ರಕ್ಕಾಗಿ ಅವರು ಸುಮಾರು 75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗಿದೆ.
ಈ ಚಿತ್ರಕ್ಕೆ ರಾಜೇಂದ್ರ ಪ್ರಸಾದ್ ಸುಮಾರು 40 ಲಕ್ಷ ರೂಪಾಯಿ ಪಡೆದಿದ್ದಾರೆ. ಚಿತ್ರದಲ್ಲಿ ಅವರು ಎಸ್ ಐ ಸೀತಾಪತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.