ಸಿನಿಮಾ, ಸೀರಿಯಲ್‌ನಲ್ಲಿ ಕಿಸ್‌ ಮಾಡೋದು ನಿಜಾನಾ? ಇದರ ಹಿಂದಿದ್ದಾರೆ ನಡುಕ ಹುಟ್ಟಿಸೋ ಕಿಲಾಡಿ! ಯಾರದು?

Published : Jun 02, 2026, 03:29 PM IST

ಸಿನಿಮಾದಲ್ಲಿ ಕಿಸ್‌ ಮಾಡೋ ದೃಶ್ಯ ಕಾಣಿಸುವುದು. ಹಾಗಿದ್ರೆ ಕಲಾವಿದರು ಕಿಸ್‌ ಮಾಡ್ತಾರಾ ಎಂದು ಅನೇಕರು ಅಂದುಕೊಳ್ತಾರೆ. ಆದರೆ ಇದರ ಹಿಂದಿನ ಕಥೆ ಏನು? ಈಗ ಕಾಲ ಬದಲಾಗಿದ್ದು, ಎಲ್ಲವೂ ರಿಯಲ್‌ ಎನ್ನೋ ಥರ ತೋರಿಸ್ತಾರೆ. 

PREV
15
ಮೊದಲೆಲ್ಲ ಎರಡು ಹೂವು ತೋರಸ್ತಿದ್ರು

ಹಿಂದಿನ ಕಾಲದಲ್ಲಿ ಕೇವಲ ಎರಡು ಹೂವುಗಳು ಒಂದಾಗೋದು ಅಥವಾ ಇನ್ನೊಂದು ರೀತಿ ಚಿತ್ರಕತೆ ಮಾಡಿ ವೀಕ್ಷಕರಿಗೆ ಕಿಸ್‌ ಮಾಡುತ್ತಿದ್ದಾರೆ ಎಂದು ಅರಿವು ಮೂಡಿಸೋ ಥರ ಮಾಡುತ್ತಿದ್ದರು.

25
ಇವೆಲ್ಲ ಕ್ಯಾಮೆರಾ ಟ್ರಿಕ್

ಸ್ಕ್ರೀನ್‌ ಮೇಲೆ ಕಾಣಿಸೋದೆಲ್ಲ ನಿಜಕ್ಕೂ ಅಸಲಿ ಕಿಸ್‌ ಆಗಿರೋದಿಲ್ಲ. ಕ್ಯಾಮರಾ ಆಂಗಲ್‌ನ್ನು ಆ ರೀತಿ ತೋರಿಸ್ತಾರೆ, ಯಾವಾಗಲೂ ತಬ್ಬಿಕೊಂಡು ಇರೋ ಥರ, ಅಥವಾ ತುಂಬ ಹತ್ತಿರ ಇದ್ದಂತೆ ಕಂಡರೂ ಕೂಡ ನಿಜಕ್ಕೂ ಅಷ್ಟು ಹತ್ತಿರ ಇರೋದಿಲ್ಲ.

35
ಪ್ರಾಸ್ಥೆಟಿಕ್ಸ್, ಸಿಜಿಐ (CGI) ಕೆಲಸ

ಇಂದು ತಂತ್ರಜ್ಞಾನ ತುಂಬ ಮುಂದುವರಿದಿದೆ. ಕೆಲವರು ಹೀರೋಯಿನ್‌ಗಳನ್ನು ಮುಟ್ಟೋದೆ ಇಲ್ಲ, ಗ್ರೀನ್‌ ಸ್ಕ್ರೀನ್‌ ಮುಂದೆ ನಟಿಸ್ತಾರೆ, ಕಿಸ್ಸಿಂಗ್‌ ಸೀನ್‌ನಲ್ಲಿ ಇಬ್ಬರ ಮಧ್ಯೆ ಗಾಜು ಕೂಡ ಇಡಲಾಗುವುದು. ಆಮೇಲೆ VFX ತಂತ್ರಜ್ಞಾನ ಮಾಡಿ, ಕಿಸ್‌ ಮಾಡೋ ಥರ ಎಡಿಟ್‌ ಮಾಡ್ತಾರೆ. ಇನ್ನೂ ಕೆಲವು ಬಾರಿ ನಟರ ಮುಖ ಹೋಲುವ ಸಿಲಿಕಾನ್ ಮಾಸ್ಕ್, ಪ್ರಾಸ್ಥೆಟಿಕ್ಸ್ ಬಳಸುತ್ತಾರೆ.

45
ಇಂಟಿಮಸಿ ಕೋಆರ್ಡಿನೇಟರ್ಸ್

ಇಂಟಿಮಸಿ ಕೋಆರ್ಡಿನೇಟರ್ಸ್ ಎಂಬ ಸಪರೇಟ್‌ ಕೆಲಸ ಮಾಡೋರು ಇರುತ್ತಾರೆ. ಈ ರೀತಿ ಸೀನ್‌ ಇದ್ದಾಗ ಯಾರಿಗೂ ಮುಜುಗರ ಆಗದೆ ಇರೋ ಥರ ಮಾಡ್ತಾರೆ. ಕಿಸ್ಸಿಂಹ್‌ ಸೀನ್‌ ಮಾಡೋಕೆ ಓಕೆನಾ ಎಂದು ಮೊದಲು ಕೇಳಿಕೊಂಡು ಅದರಂತೆ ಕೆಲಸ ಮಾಡುತ್ತಾರೆ.

55
ರಿಯಲ್‌ ಆಗಿರುತ್ತವೆ

ಕೆಲವೊಮ್ಮೆ ಕಲಾವಿದರ ಬೆಂಬಲ ಇದ್ದಾಗ ಲಿಪ್‌ ಲಾಕ್‌ ಮಾಡೋದುಂಟು. ಅದು ಜಸ್ಟ್‌ ಪ್ರೊಫೆಷನಲ್ ಆಕ್ಟಿಂಗ್ ಆಗಿರುತ್ತದೆ. ಅಲ್ಲಿ ಯಾರಿಗೂ ಯಾರ ಮೇಲೆ ಯಾವುದೇ ಭಾವನೆ ಇರೋದಿಲ್ಲ. ಎಲ್ಲವೂ ಪ್ರೊಫೆಶನಲ್‌ ಆಗಿ ನಡೆದಿರುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories