ರಾಜಸ್ಥಾನ ರಾಯಲ್ಸ್ ಡಿವೋರ್ಸ್ ಕ್ರಿಕೆಟಿಗ ನನಗೆ ಮೆಸೇಜ್ ಮಾಡುತ್ತಿದ್ದ, ಬಾಂಬ್ ಸಿಡಿಸಿದ ನಟಿ ನೆಹಾಲ್

Published : Jun 01, 2026, 09:54 PM IST

ರಾಜಸ್ಥಾನ ರಾಯಲ್ಸ್ ತಂಡದ ವಿಚ್ಚೇದಿತ ಕ್ರಿಕೆಟಿಗನೊಬ್ಬ ನನ್ನ ಫೋಟೋಗಳಿಗೆ ಹಾಟ್ ಎಂದು ಮೆಸೇಜ್ ಮಾಡುತ್ತಿದ್ದ. ಹಲವು ಸಂದೇಶ ಕಳುಹಿಸಿದ್ದಾನೆ ಎಂದು ನಟಿ ನೆಹಾಲ್ ನೀಡಿದ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ.

PREV
15
ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗನ ಮೇಲೆ ಗಂಭೀರ ಆರೋಪ

ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಆರ್‌ಸಿಬಿ ಟ್ರೋಫಿ ಗೆದ್ದರೆ, ಇತ್ತ ರಾಜಸ್ಥಾನ ರಾಯಲ್ಸ್ 3ನೇ ಸ್ಥಾನ ಪಡೆದುಕೊಂಡಿದೆ. ಇದೀಗ ಟೂರ್ನಿ ಮುಗಿದ ಬೆನ್ನಲ್ಲೇ ನಟಿ ನೆಹಾಲ್ ವಡೋಲಿಯಾ ಸ್ಫೋಟಕ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ. ರಾಜಸ್ಥಾನ ರಾಯಲ್ಸ್ ಕ್ರಿಕೆಟಿನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

25
ಆತ ಮೇಸೇಜ್ ಮಾಡುತ್ತಿದ್ದ, ಪ್ರತಿ ಕಮೆಂಟ್‌ನಲ್ಲಿತ್ತು ಹಾಟ್

ರಾಜಸ್ಥಾನ ರಾಯಲ್ಸ್ ತಂಡದ ವಿಚ್ಛೇದಿತ ಕ್ರಿಕೆಟಿಗನೊಬ್ಬ ನನ್ನ ಪ್ರತಿ ಪೋಸ್ಟ್‌ಗೆ ಮೆಸೇಜ್ ಮಾಡುತ್ತಿದ್ದ, ಕಮೆಂಟ್ ಮಾಡುತ್ತಿದ್ದ. ಪ್ರತಿ ಕಮಂಟ್‌ನಲ್ಲಿ ಹಾಟ್ ಎಂದು ಹೇಳುತ್ತಿದ್ದ. ಸುಂದರವಾಗಿ ಕಾಣುತ್ತಿದ್ದೀಯಾ, ಬ್ಯೂಟಿಫುಲ್ ಎಂದೆಲ್ಲಾ ಆತ ಮೆಸೇಜ್ ಮಾಡುತ್ತಿದ್ದ ಎಂದಿದ್ದಾರೆ.

35
ಯಾರು ಆ ಕ್ರಿಕೆಟಿಗ

ಸುನೋ ಇಂಡಿಯಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ನೆಹಾಲ್, ಕ್ರಿಕೆಟಿಗ ರಾಜಸ್ಥಾನ ರಾಯಲ್ಸ್ ಆಟಗಾರ, ಆತನಿಗೆ ಡಿವೋರ್ಸ್ ಆಗಿದೆ ಎಂದಿದ್ದಾರೆ. ಆದರೆ ಯಾರು ಎಂದು ಹೆಸರು ಹೇಳಿಲ್ಲ. ನಾನು ಆತನ ಜೊತೆ ಜಾಟ್ ಮಾಡಲು, ಕಮೆಂಟ್‌ಗೆ ರಿಪ್ಲೇ ಕೊಡಲು ಹೋಗಿಲ್ಲ. ಕಾರಣ ನನಗೆ ಮಾತನಾಡುವ ಆಸಕ್ತಿ ಇರಲಿಲ್ಲ ಎಂದಿದ್ದಾರೆ.

45
ಕಮೆಂಟ್ ವಿಪರೀತವಾದಾಗ ಬ್ಲಾಕ್

ಕ್ರಿಕೆಟಿಗನ ಕಮೆಂಟ್, ಮೆಸೇಜ್ ಹೆಚ್ಚಾಗಿತ್ತು. ಡೈರೆಕ್ಟ್ ಮೆಸೇಜ್ ಮಾಡುತ್ತಿದ್ದ. ಹೀಗಾಗಿ ಇದು ಮುಂದುವರಿದರೆ ಆಪತ್ತು ಎದುರಾಗಲಿದೆ ಎಂದು ಕ್ರಿಕೆಟಿಗನನ್ನು ಸೋಶಿಯಲ್ ಮೀಡಿಯಾಗಳಲ್ಲಿ ಬ್ಲಾಕ್ ಮಾಡಿದೆ ಎಂದು ನೆಹಾಲ್ ಹೇಳಿದ್ದಾರೆ. ನೆಹಾಲ್ ಹೇಳಿಕ ಬಳಿಕ ಹಲವರು ಇದೀಗ ರಾಜಸ್ಥಾನ ರಾಯಲ್ಸ್ ತಂಡದ ಕ್ರಿಕೆಟಿಗ ಯಾರು ಎಂದು ಹುಡುಕುತ್ತಿದ್ದಾರೆ.

55
ಹೆಸರು ಹೇಳುವುದಿಲ್ಲ ಎಂದ ನೆಹಾಲ್

ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ, ಆದರೆ ಹೆಚ್ಚು ಜನಪ್ರಿಯ ಆಟಗಾರನಲ್ಲ. ಈಗ ಬೇಕಾದರೆ ನಾನು ಒಂದು ಮೆಸೇಜ್ ಮಾಡಿದರೆ ಸಾಕು ನನಗೆ ಖಚಿತವಿದೆ, ತಕ್ಷಣವೇ ಆತನ ಮೆಸೇಜ್ ಬರುತ್ತೆ. ಸದ್ಯಕ್ಕೆ ನಾನು ಹೆಸರು ಹೇಳುವುದಿಲ್ಲ ಎಂದು ನೆಹಾಲ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories