ಮೊಮ್ಮಗನಿಗೆ ಜಗ್ಗೇಶ್ ಕೊಟ್ರು ಗಿಫ್ಟ್; 5 ಪೈಸೆಯನ್ನು ನೆನೆದು ಭಾವುಕರಾದ್ರು ನವರಸ ನಾಯಕ

Published : Jun 02, 2026, 12:55 PM IST

ನವರಸ ನಾಯಕ ಜಗ್ಗೇಶ್ ತಮ್ಮ ಮೊಮ್ಮಗ ಅರ್ಜುನ್‌ನ 11ನೇ ಹುಟ್ಟುಹಬ್ಬಕ್ಕೆ ಲ್ಯಾಪ್‌ಟಾಪ್ ಉಡುಗೊರೆಯಾಗಿ ನೀಡಿದ್ದಾರೆ. ಮೊಮ್ಮಗನ ಸಂತೋಷವನ್ನು ಕಂಡು, ತಮ್ಮ ಬಾಲ್ಯದಲ್ಲಿ ತಾತ ನೀಡುತ್ತಿದ್ದ 5 ಪೈಸೆಯನ್ನು ನೆನೆದು ಜಗ್ಗೇಶ್ ಭಾವುಕರಾಗಿದ್ದಾರೆ. 

PREV
14
ಮೊಮ್ಮಗನಿಗೆ ಬರ್ತ್ ಡೇ ಗಿಫ್ಟ್

ಚಂದನವನದ ಹಿರಿಯ ಕಲಾವಿದರಾಗಿರುವ ನವರಸ ನಾಯಕ ಜಗ್ಗೇಶ್‌, ಮೊಮ್ಮಗನಿಗೆ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ. ಮೊಮ್ಮಗ ಸಂತೋಷದಿಂದ ಗಿಫ್ಟ್ ಓಪನ್ ಮಾಡುತ್ತಿರುವ ವಿಡಿಯೋ ಸೆರೆ ಹಿಡಿದುಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಕೆಲವೊಂದು ವಿಷಯಗಳನ್ನು ಸಹ ಬರೆದುಕೊಂಡಿದ್ದಾರೆ.

24
ಹುಟ್ಟುಹಬ್ಬಕ್ಕೆ ಜಗ್ಗೇಶ್‌ಗೆ ಸಿಗ್ತಿತ್ತು 5 ಪೈಸೆ

ಮೊಮ್ಮಗ ಅರ್ಜುನ್ ಹುಟ್ಟುಹಬ್ಬಕ್ಕೆ ತಾತ ಪ್ರೀತಿಯ ಕಾಣಿಕೆ ನೀಡಿದಾಗ ಅವನ ಸಂತೋಷ ಕಂಡು ಹಾಗೂ ನನ್ನ ತಾತ 50 ವರ್ಷದ ಹಿಂದೆ ನನ್ನ ಹುಟ್ಟುಹಬ್ಬಕ್ಕೆ ನೀಡುತ್ತಿದ್ದ 5 ಪೈಸೆ ನೆನೆದು ಭಾವುಕನಾದೆ. ಅಂದು ನನ್ನ ತಾತ ನನಗೆ ಹೇಳಿ ಹರಸಿದ ಬೀಜಮಂತ್ರ ಕಂದ ವಂಶಕ್ಕೆ ನೆನೆಪಿಡುವಂತ ಧಾತನಾಗು ಈಶನಾಗು ಎಂದು ದೇವರ ದಯೆಯಿಂದ ತಾತ ಅಪ್ಪ ಅಮ್ಮನ ಆಸೆಯಂತೆ ಆಗಿದ್ದೇನೆ.

34
ಗಿಫ್ಟ್ ರೂಪದಲ್ಲಿ ಸಿಕ್ಕಿದ್ದು ಲ್ಯಾಪ್‌ಟಾಪ್

ಇಂದು ನಾನು ನನ್ನ ಮೊಮ್ಮಗನಿಗೆ ಗುಣವಿರುವ ವಿದ್ಯಾವಂತನಾಗು,ಎಲ್ಲದರಲ್ಲು ದೇವರಕಾಣು,ದೇವರು ಮೆಚ್ಚುವಂತೆ ಬಾಳು ಎಂದು ಹರಸಿದೆ. ಮಕ್ಕಳಿರುವ ಮನೆಯೇ ಮಂತ್ರಾಲಯ ಎಂದು ಜಗ್ಗೇಶ್ ಹೇಳಿದ್ದಾರೆ. ಮೊಮ್ಮಗನಿಗೆ ಜಗ್ಗೇಶ್ ಅವರು ಲ್ಯಾಪ್‌ಟಾಪ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಅಂದು ರಾಯರಿಗೆ ಮಾಡಿದ್ದ ಅಪಮಾನವೇ ಸಿದ್ದರಾಮಯ್ಯಗೆ ಮುಳುವಾಯ್ತಾ? ಜಗ್ಗೇಶ್​ ಭವಿಷ್ಯ ನಿಜವಾಯ್ತಾ

44
ಅಜ್ಜನನ್ನು ತಬ್ಬಿಕೊಂಡ ಮೊಮ್ಮಗ

ಮೊಮ್ಮಗ ಅರ್ಜುನ್‌ಗೆ ಇದು 11ನೇ ವರ್ಷದ ಹುಟ್ಟುಹಬ್ಬ. ಈ ವರ್ಷ ಅರ್ಜುನ್ ಶಾಲೆಯಲ್ಲಿ ಕಂಪ್ಯೂಟರ್ ಬಳಕೆ ಮಾಡಬೇಕು. ಹಾಗಾಗಿ ಅರ್ಜುನ್‌ಗೆ ಅವನಿಷ್ಟದ ಲ್ಯಾಪ್‌ಟಾಪ್ ನ್ನು ಬರ್ತ್ ಡೇ ಗಿಫ್ಟ್ ರೂಪದಲ್ಲಿ ಜಗ್ಗೇಶ್ ನೀಡಿದ್ದಾರೆ. ಲ್ಯಾಪ್‌ಟಾಪ್ ನೋಡುತ್ತಿದ್ದಂತೆ ಖುಷಿಯಿಂದ ಅಜ್ಜನನ್ನು ಅರ್ಜುನ್ ತಬ್ಬಿಕೊಂಡಿರೋದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಜಾತಕದಲ್ಲಿದ್ದಂತೆ ಆಗೋಯ್ತು; ರಾಯರ ಮಠದಲ್ಲಿ ಕಸ ಗುಡಿಸಿದ ಅಸಲಿ ಕಾರಣ ಬಿಚ್ಚಿಟ್ಟ ನಟ ಜಗ್ಗೇಶ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories