Goodbye Box Office: ರಶ್ಮಿಕಾ ಮಂದಣ್ಣರ ಬಾಲಿವುಡ್‌ ಡೆಬ್ಯೂವಿನ ಮೊದಲ ದಿನ ಗಳಿಕೆ ಎಷ್ಟು ಗೊತ್ತಾ

Published : Oct 08, 2022, 04:56 PM ISTUpdated : Oct 08, 2022, 05:13 PM IST

ಅಮಿತಾಬ್ ಬಚ್ಚನ್ (Amitabh Bachchan) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಗುಡ್ ಬೈ' (Goodbye) ನಿನ್ನೆ ಅಂದರೆ ಆಕ್ಟೋಬರ್‌ 7ರಂದು ಬಿಡುಗಡೆಯಾಗಿದೆ. ಈ ವರ್ಷ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ  65-70 ಚಿತ್ರಗಳು ಬಿಡುಗಡೆಯಾಗಿದ್ದು, ಅವುಗಳಿಗೆ ಹೋಲಿಸಿದರೆ  'ಗುಡ್ ಬೈ' ಆರಂಭಿಕ ಕಲೆಕ್ಷನ್‌ನಲ್ಲಿ ಹೆಚ್ಚಾಗಿದೆ. ಅದೇ ಸಮಯದಲ್ಲಿ, 45-47 ಚಿತ್ರಗಳ ಜೀವಿತಾವಧಿಯ ಕಲೆಕ್ಷನ್ ಕೂಡ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರದ ಮೊದಲ ದಿನದ ಕಲೆಕ್ಷನ್‌ಗಿಂತ ಕಡಿಮೆಯಾಗಿದೆ. ಹಾಗಾದರೆ ರಶ್ಮಿಕಾರ ಬಾಲಿವುಡ್‌ ಡೆಬ್ಯೂ ಸಿನಿಮಾ ಮೊದಲ ದಿನ ಎಷ್ಟು ಗಳಿಸಿದೆ ನೋಡಿ. 

PREV
17
Goodbye Box Office: ರಶ್ಮಿಕಾ ಮಂದಣ್ಣರ ಬಾಲಿವುಡ್‌ ಡೆಬ್ಯೂವಿನ ಮೊದಲ ದಿನ ಗಳಿಕೆ ಎಷ್ಟು ಗೊತ್ತಾ

ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಗುಡ್ ಬೈ' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ನಿಧಾನವಾಗಿ ಆರಂಭವಾಗಿದೆ. ವರದಿಗಳ ಪ್ರಕಾರ, ಮೊದಲ ದಿನ, ಚಿತ್ರವು ಕೇವಲ 1.30-1.50 ಕೋಟಿ ರೂಪಾಯಿಗಳ ನೆಟ್‌ ಕಲೆಕ್ಷನ್‌ ಮಾಡಿದೆ.
 

27
Goodbye

ಆದರೆ, ಇಷ್ಟು ಕಡಿಮೆ ಗಳಿಕೆ ಮಾಡಿದರೂ ಹಲವು ಜನಪ್ರಿಯ ಚಿತ್ರಗಳ ಆರಂಭಿಕ ಕಲೆಕ್ಷನ್‌ಗಿಂತ  ರಶ್ಮಿಕಾ ಮಂದಣ್ಣ ಅವರ ಗುಡ್‌ಬೈ ಸಿನಿಮಾದ ಮೊದಲ ದಿನದ ಗಳಿಕೆಯ ಪ್ರಮಾಣ ಹೆಚ್ಚಿದೆ. 

37

ಆರ್ ಮಾಧವನ್ ಅಭಿನಯದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್', ತಾಪ್ಸಿ ಪನ್ನು ಅಭಿನಯದ'ದೊಬಾರಾ', ಕಮಲ್ ಹಾಸನ್ ಅಭಿನಯದ 'ವಿಕ್ರಮ್' (ಹಿಂದಿ ಆವೃತ್ತಿ) ಅಥವಾ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋನಾ'. ಮುಂತಾದ ಕೆಲವು ಜನಪ್ರಿಯ ಚಲನಚಿತ್ರಗಳ ಮುಂದೆ  ಗುಡ್‌ಬೈ ಚಿತ್ರದ ಮೊದಲ ದಿನದ ಕಲೆಕ್ಷನ್ ಚೆನ್ನಾಗಿದೆ. 

47

ಅಕ್ಟೋಬರ್ 7 ರಂದು ಬಿಡುಗಡೆಯಾದ 'ಗುಡ್ ಬೈ' ಚಿತ್ರದ ಮೌತ್ ಪಬ್ಲಿಸಿಟಿ ಅತ್ಯಂತ ಸಕಾರಾತ್ಮಕವಾಗಿದ್ದು, ಚಿತ್ರದ ಶನಿವಾರ ಮತ್ತು ಭಾನುವಾರದ ಕಲೆಕ್ಷನ್‌ನಲ್ಲಿ ಅದರ ಗಳಿಕೆ ಗೋಚರಿಸುತ್ತದೆ ಎಂದು ಊಹಿಸಲಾಗಿದೆ.

57

ವಾರಾಂತ್ಯದ ಈ ಎರಡು ದಿನಗಳಲ್ಲಿ ಚಿತ್ರದ ಕಲೆಕ್ಷನ್ ನಲ್ಲಿ ಉತ್ತಮ ಬೆಳವಣಿಗೆ ಕಾಣಬಹುದಾಗಿದೆ. ಇದು ರಶ್ಮಿಕಾ ಮಂದಣ್ಣ ಅವರ ಮೊದಲ ಬಾಲಿವುಡ್‌ ಸಿನಿಮಾವಾಗಿದೆ.

67

ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರೊಂದಿಗೆ ದಕ್ಷಿಣದ ಸೆನ್ಸೇಷನ್ ರಶ್ಮಿಕಾ ಮಂದಣ್ಣ  ಅವರು  'ಗುಡ್ ಬೈ'  ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. 
 

77

ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ನೀನಾ ಗುಪ್ತಾ, ಸುನಿಲ್ ಗ್ರೋವರ್, ಪಾವೈಲ್ ಗುಲಾಟಿ, ಸಾಹಿಲ್ ಮೆಹ್ತಾ, ಆಶಿಶ್ ವಿದ್ಯಾರ್ಥಿ ಮತ್ತು ಶಿವಿನ್ ನಾರಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಕ್ಟೋಬರ್ 7 ರಂದು ಜಗತ್ತಿಗೆ ವಿದಾಯ ಹೇಳಿದ ಅರುಣ್ ಬಾಲಿ ಅವರ ಕೊನೆಯ ಚಿತ್ರ ಇದಾಗಿದೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories