ದೀಪಿಕಾ ಪಡುಕೋಣೆ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ನಟಿ. ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ದೀಪಿಕಾ ಮತ್ತು ರಣ್ವೀರ್ ಸಿಂಗ್ ದಂಪತಿ ನಡುವೆ ಬ್ರೇಕಪ್ ಸುದ್ದಿ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು.
ದೀಪಿಕಾ ಮತ್ತು ರಣ್ವೀರ್ ಜೋಡಿ ಬೇರೇ ಬೇರೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಸಹ ಶಾಕ್ ಆಗಿದ್ದರು. ಆದರೆ ಈ ಬಗ್ಗೆ ದೀಪಿಕಾ ಆಗಲಿ ಅಥವಾ ರಣ್ವೀರ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಅಷ್ಟರಲ್ಲೇ ದೀಪಿಕಾ ತನ್ನ ತಾಯಿ ಜೊತೆ ಪ್ಯಾರಿಷ್ ಹಾರಿದ್ದರು.
ಪತಿ ಬಿಟ್ಟು ದೀಪಿಕಾ ತಾಯಿ ಜೊತೆ ಹೊರಟಿದ್ದನ್ನು ನೋಡಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿತ್ತು. ಆದರೆ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುತ್ತಿದ್ದಂತೆ ಪತಿ ರಣ್ವೀರ್ ಸಿಂಗ್ 'ನನ್ನ ಕ್ವೀನ್' ಎಂದು ಕಾಮೆಂಟ್ ಮಾಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದರು.
ಇದೀಗ ದೀಪಿಕಾ ಪ್ಯಾರಿಸ್ ಫ್ಯಾಷನ್ ವೀಕ್‌ನಿಂದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಿನಿ ಧರಿಸಿ ಫ್ಯಾಷನ್ ವೀಕ್ ನಲ್ಲಿ ವಾಕ್ ಮಾಡಿದ ದೀಪಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಫೋಟೋಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿವೆ.
ದೀಪಿಕಾ ಫೋಟೋಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡಿ, ಹಾರ್ಟ್ ಇಮೋಜಿ ಇರಿಸುತ್ತಿದ್ದಾರೆ. ರಣ್ವೀರ್ ಸಿಂಗ್ ಕೂಡ ಕಾಮೆಂಟ್ ಮಾಡಿದ್ದಾರೆ. ಇಮೋಜಿ ಇರಿಸಿರುವ ರಣ್ವಿರ್ ಸಿಂಗ್ಗೆ ಅಭಿಮಾನಿಗಳು ದೀಪಿಕಾ ಯಾವತ್ತಿದ್ರು ನಿಮ್ಮರೇ ಎನ್ನುತ್ತಿದ್ದಾರೆ.
ಅಂದಹಾಗೆ ದೀಪಿಕಾ ತನ್ನ ತಾಯಿ ಅಜ್ವಲಾ ಮತ್ತು ತಂದೆ ಪ್ರಕಾಶ್ ಜೊತೆ ಪ್ಯಾರಿಷ್‌ಗೆ ಹಾರಿದ್ದಾರೆ. ಮಗಳ ಜೊತೆ ಇರುವ ದೀಪಿಕಾ ಪೋಷಕರ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನು ದೀಪಿಕಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಇತ್ತೀಚಿಗಷ್ಟೆ ದೀಪಿಕಾ ಜವಾನ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಶಾರುಖ್ ಖಾನ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾ ಜೊತೆಗೆ ದೀಪಿಕಾ ತೆಲುಗು ಸ್ಟಾರ್ ಪ್ರಭಾಸ್ ಜೊತೆಯೂ ನಟಿಸುತ್ತಿದ್ದಾರೆ.