ಮದುವೆಯಾಗಿ ಮಧ್ಯರಾತ್ರಿಯಲ್ಲಿ ಮನೆಗೆ ಬಂದ ರೇಖಾ ಅವರಿಗೆ ಹೇಮಾ ಮಾಲಿನಿ ಕೇಳಿದ್ದೇನು ಗೊತ್ತಾ?
First Published | Oct 8, 2022, 4:54 PM ISTಹಿರಿಯ ನಟಿ ಹಾಗೂ ಬಾಲಿವುಡ್‌ನ ಸುಂದರಿಯರಲ್ಲಿ ಒಬ್ಬರಾದ ರೇಖಾ (Rekha) ಅವರಿಗೆ 68 ವರ್ಷಗಳ ಸಂಭ್ರಮ. ಅಕ್ಟೋಬರ್ 10,1954 ರಂದು ಚೆನ್ನೈನಲ್ಲಿ ಜನಿಸಿದ ರೇಖಾ ಅವರ ಜೀವನವು ಬಾಲ್ಯದಿಂದಲೂ, ವಿವಾದಗಳಿಂದ ಸುತ್ತುವರೆದಿದೆ ಮತ್ತು ಇಂದಿಗೂ ಅದು ಮುಂದುವರೆದಿದೆ. ಅಭಿನಯ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾದ ರೇಖಾ ಅವರ ಆಫೇರ್‌ಗಳ ಕಥೆಗಳು ಕಡಿಮೆ ಇರಲಿಲ್ಲ. ಅನೇಕರ ಜೊತೆ ಹೆಸರು ಲಿಕಂಕ್ ಆದ ನಂತರ, ರೇಖಾ ಅಂತಿಮವಾಗಿ ದೆಹಲಿ ಮೂಲದ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು. 1990 ರಲ್ಲಿ, ರೇಖಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದ ಸಮಯದಲ್ಲಿ ಮುಕೇಶನನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು. ಒಂದು ರಾತ್ರಿ ದೇವಸ್ಥಾನದಿಂದ ಮುಖೇಶ್ ಜೊತೆ ರಹಸ್ಯವಾಗಿ ಮದುವೆಯಾಗಿ ಅಲ್ಲಿಂದ ನೇರವಾಗಿ ಹೇಮಾ ಮಾಲಿನಿಯ ಮನೆಗೆ ತಲುಪಿದರು. ರೇಖಾರನ್ನು ಈ ಸ್ಥಿತಿಯಲ್ಲಿ ನೋಡಿದ ಹೇಮಾ ಮಾಲಿನಿ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?