ಪ್ರಭಾಸ್ ಕೂಡ ಸಿದ್ಧಾರ್ಥ್ ಜೊತೆ ಸಿನಿಮಾ ಮಾಡೋಕೆ ರೆಡಿ ಇದ್ದಾರೆ. ಆದ್ರೆ ಒಳ್ಳೆ ಕಥೆ ಇರಬೇಕು, ತಮ್ಮ ಡೇಟ್ಸ್ ಗೆ ಸರಿ ಹೊಂದುವಂಗೆ ಇರಬೇಕು, ಬಲ್ಕ್ ಡೇಟ್ಸ್ ಕೊಡೋದು ಕಷ್ಟ ಅಂತ ಹೇಳ್ತಿದ್ದಾರೆ. ಅದಕ್ಕೆ ಸಿದ್ಧಾರ್ಥ್ ಈ ಸಲ ಮಲ್ಟಿಸ್ಟಾರ್ ಕಥೆ ತಂದಿದ್ದಾರೆ. ಒಬ್ಬ ಹೀರೋ ಶಾರುಖ್, ಇನ್ನೊಬ್ಬ ಹೀರೋ ಪ್ರಭಾಸ್ ಅಂತ ಸಿದ್ಧಾರ್ಥ್ ಪ್ಲಾನ್. ಆದ್ರೆ ಪ್ರಭಾಸ್ ಮಲ್ಟಿಸ್ಟಾರ್ ಸಿನಿಮಾ ಬೇಡ, ಸೋಲೋ ಹೀರೋ ಆಗಿ ಕಥೆ ಹೇಳಿದ್ರೆ ಸಿನಿಮಾ ಮಾಡ್ತೀನಿ ಅಂತ ಹೇಳಿ ಕಳಿಸಿದ್ದಾರಂತೆ.