ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಜನಪ್ರಿಯರಾಗಿರುವ ದುಲ್ಕರ್ ಸಲ್ಮಾನ್, ಒಬ್ಬ ವಾರಸುದಾರ ನಟ ಎಂಬ ಹಣೆಪಟ್ಟಿಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರೂ, ಕಡಿಮೆ ಅವಧಿಯಲ್ಲಿ ಮಲಯಾಳಂ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ನಟಿಸಿ ಮುಂಚೂಣಿಯ ನಟರಾಗಿದ್ದಾರೆ. ಈಗ 'ಲಕ್ಕಿ ಭಾಸ್ಕರ್' ಚಿತ್ರ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಸಂದರ್ಶನವೊಂದರಲ್ಲಿ ಅವರು ಹೇಳಿದ ವಿಷಯಗಳು ಅಭಿಮಾನಿಗಳ ಗಮನ ಸೆಳೆದಿವೆ.