ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯಲ್ಲಿ ಮಾತ್ರವಲ್ಲ, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದೀಗ ಅಕ್ಷಯ್ ಕುಮಾರ್ ಶ್ರೀರಾಮನ ಜನ್ಮಸ್ಥಳ ಆಯೋಧ್ಯೆಯ ಮಂಗಳಿಗೆ ಆಹಾರ ನೀಡುವ ಯೋಜನೆಗೆ ನೆರವು ನೀಡಿದ್ದಾರೆ. ಮಂಗಳಿಗೆ ಭಾರತೀಯ ಪುರಾಣ ಹಾಗೂ ರಾಮಾಯಾಣಧಲ್ಲಿರುವ ಮಹತ್ವ ಬಿಡಿಸಿ ಹೇಳಬೇಕಿಲ್ಲ. ಆಯೋಧ್ಯೆಯಲ್ಲಿರುವ ಮಂಗಳ ರಕ್ಷಣೆ ಹಾಗೂ ಆಹಾರ ನೀಡು ಮಹತ್ವದ ಕಾರ್ಯಕ್ಕೆ ಅಕ್ಷಯ್ ಕೈಜೋಡಿಸಿದ್ದಾರೆ.
ಆಯೋಧ್ಯೆ ಮಂಗಗಳಿಗೆ ಆಹಾರ ನೀಡುವ ಯೋಜನೆಯನ್ನು ಅಂಜನೇಯ ಸೇವಾ ಟ್ರಸ್ಟ್ ಆಯೋಜಿಸಿದೆ. ಟ್ರಸ್ಟ್‌ನ ಮುಖ್ಯಸ್ಥರಾದ ಜಗದ್ಗುರು ಸ್ವಾಮಿ ರಾಘವಾಚಾರ್ಯ ಜೀ ಮಹಾರಾಜರು ಅಕ್ಷಯ್ ಸಂಪರ್ಕಿಸಿದ್ದಾರೆ. ಈ ವೇಳೆ ಅಕ್ಷಯ್ ಕುಮಾರ್ 1 ಕೋಟಿ ರೂಪಾಯಿ ದೇಣಿಗೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಕ್ಷಯ್ ಕುಮಾರ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅಕ್ಷಯ್ ಅವರು ತಮ್ಮ ಹೆತ್ತವರಾದ ಹರಿ ಓಂ ಭಾಟಿಯಾ ಮತ್ತು ಅರುಣಾ ಭಾಟಿಯಾ ಹಾಗೂ ತಮ್ಮ ಮಾವ ರಾಜೇಶ್ ಖನ್ನಾ ಅವರ ಗೌರವಾರ್ಥವಾಗಿ ಆಗಾಗ್ಗೆ ದೇಣಿಗೆ ನೀಡುತ್ತಾರೆ. ಅಕ್ಷಯ್ ಕೇವಲ ಉದಾರ ದಾನಿ ಮಾತ್ರವಲ್ಲ, ಸಾಮಾಜಿಕವಾಗಿ ಜಾಗೃತ ನಾಗರಿಕರೂ ಹೌದು ಎಂದು ಜಗದ್ಗುರು ಸ್ವಾಮಿ ರಾಘವಾಚಾರ್ಯ ಜೀ ಹೇಳಿದರು. ಅವರು ಅಯೋಧ್ಯೆಯ ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಯಾವುದೇ ಅನಾನುಕೂಲತೆ ಅಥವಾ ಕಸ ಹಾಕದೆ ಮಂಗಗಳಿಗೆ ಆಹಾರ ನೀಡುವ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು ಸ್ವಾಮಿಜಿ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಹಲವು ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೊರೋನಾ ಪರಿಹಾರ ನಿಧಿ ಆರಂಭಿಸಿತ್ತು. ಈ ವೇಳೆ ನಾಯಕರು, ಸೆಲೆಬ್ರೆಟಿಗಳು ಸೇರಿದಂತೆ ಹಲವರು ದೇಣಿಗೆ ನೀಡಿದ್ದರು. ಈ ವೇಳೆ ಅಕ್ಷಯ್ ಕುಮಾರ್ 25 ಕೋಟಿ ರೂಪಾಯಿ ಮೊತ್ತ ಕೋವಿಡ್ ಪರಿಹಾರ ನಿಧಿಗಿ ದೇಣಿಗೆಯಾಗಿ ನೀಡಿದ್ದರು. ಈ ಮೂಲಕ ಗರಿಷ್ಠ ದೇಣಿಗೆ ನೀಡಿದ ಸಿನಿಮಾ ಸೆಲೆಬ್ರೆಟಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಚಲನಚಿತ್ರಗಳ ವಿಷಯದಲ್ಲಿ, ಅಕ್ಷಯ್ ಕುಮಾರ್ ಅವರು ರೋಹಿತ್ ಶೆಟ್ಟಿ ಅವರ ಪೊಲೀಸ್ ವಿಶ್ವದ ಇತ್ತೀಚಿನ ಚಿತ್ರ "ಸಿಂಗಮ್ ಅಗೈನ್" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಚಿತ್ರದಲ್ಲಿ ಸೂರ್ಯವಂಶಿಯಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ, ಇದರಲ್ಲಿ ಅಜಯ್ ದೇವಗನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಇತರ ತಾರೆಯರೂ ಇದ್ದಾರೆ. ಚಿತ್ರವು ನವೆಂಬರ್ 1 ರಂದು ಬಿಡುಗಡೆಯಾಗಲಿದೆ.