ಬಂಟಿ ನಿನ್ನ ಸಾಬೂನು ಸ್ಲೋ ನಾ, ಅಂದಿದ್ದ ಹುಡುಗಿ ಭರಭರ ಬೆಳೆದು ಗಂಡ ಬೇಕಂತಿದ್ದಾಳೆ!

Published : Sep 28, 2025, 11:15 AM IST

Bunty tera sabun slow hai kya 'ಬಂಟಿ ನಿನ್ನ ಸಾಬೂನು ಸ್ಲೋನಾ' ಜಾಹೀರಾತಿನ ಮೂಲಕ ಖ್ಯಾತರಾಗಿದ್ದ ಬಾಲಕಿ ಈಗ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ 'ಲವ್ ಇನ್ ವಿಯಟ್ನಾಂ' ಸಿನಿಮಾದ ಸಹನಟ ಶಾಂತನು ಮಹೇಶ್ವರಿಗೆ, ತಾನೇ ಆ ಜಾಹೀರಾತಿನ ಹುಡುಗಿ ಎಂಬ ವಿಷಯ ಚಿತ್ರೀಕರಣದವರೆಗೂ ತಿಳಿದಿರಲಿಲ್ಲ.

PREV
16
ಬಂಟಿ ನಿನ್ನ ಸಾಬೂನು ಸ್ಲೋ ನಾ

ಬಂಟಿ ನಿನ್ನ ಸಾಬೂನು ಸ್ಲೋನಾ ಎಂದಿದ್ದ ಹುಡುಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಚಿತ್ರದ ಹೀರೋಗೆ ತನ್ನೊಂದಿಗೆ ನಟಿಸುತ್ತಿರೋದು ಆ ಹುಡುಗಿ ಎಂಬ ವಿಷಯವೇ ಗೊತ್ತಿರಲಿಲ್ಲ. ಇದೀಗ ನಟಿಯ ಸಂದರ್ಶನದ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

26
ಅವ್‌ನೀತ್ ಕೌರ್

ಬಂಟಿ ನಿನ್ನ ಸಾಬೂನು ಸ್ಲೋ ಅಂದಿದ್ದ ಹುಡುಗಿ ಹೆಸರು ಅವ್‌ನೀತ್ ಕೌರ್. ಇತ್ತೀಚೆಗೆ ಅವ್‌ನೀತ್ ನಟಿಸಿದ್ದ ಲವ್ ಇನ್ ವಿಯಟ್ನಾಂ ಸಿನಿಮಾ ಬಿಡುಗಡೆಯಾಗಿತ್ತು. ನಾಯಕನಾಗಿ ಗಂಗೂಬಾಯಿ ಸಿನಿಮಾ ಖ್ಯಾತಿಯ ಶಾಂತನು ಮಹೇಶ್ವರಿ ನಟಿಸಿದ್ದಾರೆ.

36
ಲವ್ ಇನ್ ವಿಯಟ್ನಾಂ ಸಿನಿಮಾ

ಲವ್ ಇನ್ ವಿಯಟ್ನಾಂ ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದಂತೆ ಯುಟ್ಯೂಬ್ ಚಾನೆಲ್‌ಗೆ ಅವ್‌ನೀತ್ ಕೌರ್ ಮತ್ತು ಶಾಂತನು ಜೊತೆಯಾಗಿ ಸಂದರ್ಶನ ನೀಡಿದ್ದರು. ಈ ವೇಳೆ ನಿರೂಪಕ, ನಿಮಗೆ ಯಾರಿಗಾದ್ರು ಬಂಟಿ ನಿನ್ನ ಸಾಬೂನು ಸ್ಲೋ ಅಂತ ಹೇಳಿದ್ದಾರಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಂತನು, ಸಿನಿಮಾ ಶೂಟಿಂಗ್ ಶುರುವಾದ್ಮೇಲೆಯೇ ನನಗೂ ಇದು ಗೊತ್ತಾಗಿದೆ ಎಂದರು.

46
11 ವರ್ಷದವಳಾಗಿದ್ದ ಮಾಡಿದ್ದ ಜಾಹೀರಾತು

ಒಂದು ಬಾರಿ ಶೂಟಿಂಗನ್‌ಲ್ಲಿ ಬಂಟಿ ಡೈಲಾಗ್ ಹೇಳಿ ಎಲ್ಲರನ್ನು ತಮಾಷೆ ಮಾಡುತ್ತಿದ್ದೆ. ಆಗ ನನ್ನ ಸ್ಟಾಫ್ ಬಂದು ಅವ್‌ನೀತ್‌ಗೆ ಹೇಳಬೇಡಿ. ಆ ಜಾಹೀರಾತಿನಲ್ಲಿದ್ದು ಅವರೇ ಎಂದರು. ನನಗೆ ಒಂದು ಕ್ಷಣ ಶಾಕ್ ಆಯ್ತು ಎಂದು ಶಾಂತನು ಮಹೇಶ್ವರಿ ಹೇಳಿದರು. ಅದು ನಾನು 11 ವರ್ಷದವಳಾಗಿದ್ದ ಮಾಡಿದ್ದ ಜಾಹೀರಾತು ಎಂದು ಅವ್‌ನೀತ್ ಹೇಳಿದ್ದಾರೆ.

ಇದನ್ನೂ ಓದಿ: 40 ವರ್ಷದ ವಿವಾಹಿತ ನಟನ ಮೇಲೆ 19 ವರ್ಷದ ನಟಿಗೆ ಪ್ರೇಮಾಂಕುರ, ಶಾಕ್ ನ್ಯೂಸ್ ಕೊಟ್ಟ ಸ್ಟಾರ್ ಕಿಡ್!

56
23 ವರ್ಷದ ಅವ್‌ನೀತ್ ಕೌರ್

ಸದ್ಯ 23 ವರ್ಷದ ಅವ್‌ನೀತ್ ಕೌರ್, ಮದುವೆಗಾಗಿ ಸಂಗಾತಿಯನ್ನು ಹುಡುಕುತ್ತಿದ್ದಾರಂತೆ. ಸಂಗಾತಿ ಚಲನಚಿತ್ರೋದ್ಯಮದವರು ಆಗಿರಬೇಕು. ಹಾಗಾದ್ರೆ ಮಾತ್ರ ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವ್‌ನೀತ್ ಹೇಳುತ್ತಾರೆ. ನಾನು ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿರುವ ಕಾರಣ ಸಂಗಾತಿ ನನ್ನನ್ನು ಅರ್ಥ ಮಾಡಿಕೊಳ್ಳೋದು ಪ್ರಮುಖವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೊತ್ತಿಲ್ಲ ಶಿವನೇ ಅನ್ನುತ್ತಲೇ ಭಕ್ತಿಭಾವದ ಸುಧೆ ಹರಿಸಿದ ಕಾಂತಾರದ ಬ್ರಹ್ಮಕಳಶ!

66
31.5 ಮಿಲಿಯನ್ ಫಾಲೋವರ್ಸ್‌

ಅವ್‌ನೀತ್ ಕೌರ್ ಇನ್‌ಸ್ಟಾಗ್ರಾಂನಲ್ಲಿ 31.5 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಅವ್‌ನೀತ್, ವೃತ್ತಿಜೀವನಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಲವ್ ಇನ್ ವಿಯಟ್ನಾಂ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಂತನು ಜೊತೆಗಿನ ಕೆಮಿಸ್ಟ್ರಿ ನೋಡುಗರಿಗೆ ಇಷ್ಟವಾಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಕೇಡುಗಾಲ..? ಕತ್ರಿನಾ ಕೈಫ್ ಕಾರಣದಿಂದ 'ಬಿಗ್ ಬಾಸ್'ನಲ್ಲಿ ಬೆಂಕಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories