ಹೂವಿನ ಬಾಣದಂತೆ ಹುಡುಗಿ ಅಮ್ಮುಗೆ ಅಪಘಾತ; ತುಂಬಾ ದೃಷ್ಟಿ ಆಯ್ತೆಂದ ನೆಟ್ಟಿಗರು
'ಹೂವಿನ ಬಾಣದಂತೆ' ಹಾಡಿನ ಮೂಲಕ ವೈರಲ್ ಆಗಿದ್ದ ಸಿಂಗರ್ ಅಮ್ಮು ಅಲಿಯಾಸ್ ನಿತ್ಯಶ್ರೀ ಅವರಿಗೆ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಹಣೆಗೆ ಬ್ಯಾಂಡೇಜ್ ಹಾಕಿರುವ ಅವರ ಫೋಟೋ ವೈರಲ್ ಆಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕದ ಟ್ರೆಂಡಿಂಗ್ ಗರ್ಲ್
ತನ್ನದೇ ಶೈಲಿಯಲ್ಲಿಯೇ ಹಾಡು ಹೇಳಿ ಕರ್ನಾಟಕದ ಟ್ರೆಂಡಿಂಗ್ ಗರ್ಲ್ ಆಗಿದ್ದ ವೈರಲ್ ಸಿಂಗರ್ ಅಮ್ಮು ಅಲಿಯಾಸ್ ನಿತ್ಯಶ್ರೀ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಹಣೆಗೆ ಬ್ಯಾಂಡೇಜ್ ಹಾಕಿರುವ ಅಮ್ಮು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅಪಘಾತ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಸಣ್ಣ ಪ್ರಮಾಣದಲ್ಲಿ ಗಾಯ
ಹಣೆ, ಕೈಗಳು ಮತ್ತು ಕಣ್ಣಿನ ಭಾಗಕ್ಕೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಾಣಾಪಾಯದಿಂದ ಅಮ್ಮುಗೌಡ ಪಾರಾದಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರೀಲ್ಸ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು ಅಮ್ಮುಗೆ ದೃಷ್ಟಿಯಾಗಿದೆ ಅಂದ್ರೆ, ಕೆಲವರು ಹೂ ಬಾಡಿತು ಎಂದು ಹೇಳಿದ್ದಾರೆ.
ಹೂವಿನ ಬಾಣದಂತೆ ಹಾಡು ವೈರಲ್
ಹೂವಿನ ಬಾಣದಂತೆ ಹಾಡು ವೈರಲ್ ಬಳಿಕ ಅಮ್ಮು ಜನಪ್ರಿಯತೆ ಹೆಚ್ಚಾಗಿತ್ತು. ಹಲವು ಕಾರ್ಯಕ್ರಮಗಳಿಗೆ ಅಮ್ಮು ಅವರನ್ನು ಆಹ್ವಾನಿಸಲಾಗಿತ್ತು. ಇತ್ತೀಚೆಗೆ ಅಂಗಡಿಯ ಉದ್ಘಾಟನೆಗೂ ಅಮ್ಮು ತೆರಳಿದ್ದರು. ಈ ವಿಡಿಯೋ ಸಹ ವೈರಲ್ ಆಗಿತ್ತು.
ಯಾರು ಈ ಹೂವಿನ ಬಾಣದಂತೆ ಹುಡುಗಿ?
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ನಿವಾಸಿಯಾಗಿರುವ ಅಮ್ಮು, ಬಿರುಗಾಳಿ ಚಿತ್ರದ ಶ್ರೇಯಾ ಘೋಷಲ್ ಹಾಡಿದ ಹಾಡನ್ನು ತಮಾಷೆಯಾಗಿ ಹಾಡಿದ್ದರು. ಸ್ನೇಹಿತರಿಗಾಗಿ ಹಾಡು ಹೇಳಿದ್ದೆ. ಆದ್ರೆ ಅದು ಇಷ್ಟು ವೈರಲ್ ಆಗುತ್ತೆ ಅಂತ ತಿಳಿದಿರಲಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಈ ಹುಡುಗಿ ನೋಡಿ ಮಲೇಷ್ಯಾದ ಆ ದಿನಗಳು ನೆನಪಾದ್ವು... ಹೂವಿನ ಬಾಣದ ಹುಡುಗಿಗೆ ನಟ ಚೇತನ್ ರಿಯಾಕ್ಷನ್
ಕ್ಷಮೆ ಕೇಳಿರುವ ನಿತ್ಯಶ್ರೀ
ಮೊದಲಿಗೆ ಹೂವಿನ ಬಾಣದಂತೆ ಹಾಡಿದ್ದು ತಮಾಷೆಗಾಗಿ ಎನ್ನುತ್ತಲೇ ಗಾಯಕಿ ಶ್ರೇಯಾ ಘೋಷಲ್ ಅವರ ಕ್ಷಮೆ ಕೋರಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ನಾನು ಉದ್ದೇಶಪೂರ್ವಕವಾಗಿ ಹಾಡಲಿಲ್ಲ. ಹೀಗೆ ಸ್ನೇಹಿತೆಯರ ಜೊತೆ ತಮಾಷೆಗಾಗಿ ಹಾಡಿದ್ದು ಅಷ್ಟೇ ಎಂದು ಹೇಳಿದ್ದರು. ಇದಾದ ಬಳಿಕ ನಿತ್ಯಶ್ರೀ ಅವರ ಹಲವು ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ಸುಮ್ಸುಮ್ನೆ ಇದ್ರೂ ರಾತ್ರೋರಾತ್ರಿ ಫೇಮಸ್ ಆಗೋದು ಹೇಗೆ? ಜಾತಕ ಹೀಗಿರ್ಬೇಕು ನೋಡಿ
ಟ್ರೋಲ್ ಬಗ್ಗೆ ಮಾತು
ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ . ವೈರಲ್ ಆದನಿಂದ ತಮ್ಮನ್ನು ಎಲ್ಲರೂ ಗುರುತಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಅದರಿಂದ ನನಗೆ ಖುಷಿಯಾಗುತ್ತೆ ಎಂದು ಹೇಳಿದ್ದರು. ತಮಾಷೆಗಾಗಿ ಮಾಡಿದ್ದರಿಂದ ಯಾರ ಕ್ಷಮೆ ಕೇಳಬಾರದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು.
ಇದನ್ನೂ ಓದಿ: ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರೋ ಹುಡುಗನ ಡಾನ್ಸ್.. ಸಾಥ್ ಕೊಟ್ಟ ಮೈಸೂರ್ ಹುಡ್ಗಿ... ವೀಡಿಯೋ ಭಾರಿ ವೈರಲ್