ಹುಡುಗನಿಂದ ಹುಡುಗಿಯಾಗಿ ಬದಲಾದ ಅನಯಾ ಬಂಗಾರ್ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್!
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಲಿಂಗ ಪರಿವರ್ತಿತ ಪುತ್ರಿಯ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರ ಆರ್ಯನ್ ಬಂಗಾರ್, ಕೆಲ ಸಮಯದ ಹಿಂದಷ್ಟೇ ತಮ್ಮ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು.
ಆರ್ಯನ್ ಬಂಗಾರ್ 2023ರಲ್ಲಿ ಹಾರ್ಮೊನ್ ರೀಪ್ಲೇಸ್‌ಮೆಂಟ್ ಥೆರಪಿ ಮಾಡಿಸಿಕೊಳ್ಳುವ ಮೂಲಕ ಇದೀಗ ಅನಯಾ ಬಂಗಾರ್ ಆಗಿ ಬದಲಾಗಿದ್ದಾರೆ.
ಆರ್ಯನ್ ಉರುಫ್ ಅನಯಾ ಬಂಗಾರ್ ಇದೀಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ. ಅನಯಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದೀಗ ಅನಯಾ ಬಂಗಾರ್, ಕಡುಗೆಂಪು ಬಣ್ಣದ ಲೆಹಂಗಾ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿವೆ.
ಲಿಂಗಪರಿವರ್ತನೆ ಮಾಡಿಕೊಂಡ ಬಳಿಕ ಅಪ್ಪಟ ಸುಂದರಿಯಂತೆ ಅನಯಾ ಕಾಣುತ್ತಿದ್ದು, ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ಯನ್ ಉರುಫ್ ಅನಯಾ ಕೂಡಾ ತಂದೆಯಂತೆ ಓರ್ವ ಕ್ರಿಕೆಟರ್ ಆಗಿದ್ದಾರೆ. ಅವರು ಮುಂಬೈನ ಪ್ರಖ್ಯಾತ ಕ್ರಿಕೆಟ್ ಕ್ಲಬ್ ಆಗಿರುವ ಇಸ್ಲಾಮ್ ಜಿಮ್ಖಾನಾ ಪರ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.
ಲಿಂಗ ಪರಿವರ್ತನೆ ಮಾಡಿಕೊಂಡಿರುವ ಅನಯಾ ಬಂಗಾರ್ ಭಾರತ ಮಹಿಳಾ ಕ್ರಿಕೆಟ್ ತಂಡದ ಪರ ಕಣಕ್ಕಿಳಿಯಲು ಆಸಕ್ತಿ ತೋರಿದ್ದರು. ಆದರೆ ಹಾಲಿ ನಿಯಮಗಳ ಪ್ರಕಾರ ಅದು ಸಾಧ್ಯವಿಲ್ಲ.
ಐಸಿಸಿ ನಿಯಮಾವಳಿಗಳ ಪ್ರಕಾರ, ಟ್ರಾನ್ಸ್‌ವುಮನ್ ಕ್ರಿಕೆಟರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಅಂದಹಾಗೆ ಲಿಂಗಪರಿವರ್ತನೆ ಬಳಿಕ ಹೆಚ್ಚು ಜನಪ್ರಿಯವಾಗಿರುವ ಅನಯಾ ಬಂಗಾರ್‌ಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.