ಮದುವೆಯಾದ ನಂತರ ಗಂಡನಿಂದ ದೂರವಾದ ಭಾಗ್ಯಶ್ರೀ ಮತ್ತೆ ಒಂದಾಗಿದ್ದು ಹೇಗೆ?

First Published Feb 23, 2022, 5:44 PM IST

ಮೈನೆ ಪ್ಯಾರ್ ಕಿಯಾ  (Maine Pyar Kiya) ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಭಾಗ್ಯಶ್ರೀ (Bhagyashree) 53ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 23, 1969 ರಂದು ಮುಂಬೈನಲ್ಲಿ ಜನಿಸಿದ ಭಾಗ್ಯಶ್ರೀ ಸಾಂಗ್ಲಿಯ ಪಟವರ್ಧನ್ ರಾಯಲ್ ಮರಾಠಿ ಕುಟುಂಬಕ್ಕೆ ಸೇರಿದವರು. ಹಿಟ್ ಸಿನಿಮಾ ಕೊಟ್ಟ ನಂತರವೂ ಭಾಗ್ಯಶ್ರೀ ಅವರ ಕೆರಿಯರ್ ಫ್ಲಾಪ್ ಆಗಿಯೇ ಉಳಿಯಿತು. ವಾಸ್ತವವಾಗಿ, ತನ್ನ ಚೊಚ್ಚಲ ಚಿತ್ರದ ಶೂಟಿಂಗ್ ಸಮಯದಲ್ಲಿ, ಭಾಗ್ಯಶ್ರೀ ಮನೆಯವರ ವಿರುದ್ಧ ಬಾಯ್‌ಫ್ರೆಂಡ್‌ ಹಿಮಾಲಯ ದಾಸಾನಿಯಿಂದ ಓಡಿ ಹೋಗಿ ಮದುವೆಯಾದರು. ಅವರ ನಿರ್ಧಾರವು ಅವರ ವೃತ್ತಿ ಜೀವನವನ್ನು ಹಾಳುಮಾಡಿತು. ಸುಮಾರು 30 ವರ್ಷಗಳ ದಾಂಪತ್ಯದ ನಂತರ ಅವರು ಇಂತಹ ಆಘಾತಕಾರಿ  ವಿಷಯವನ್ನು ಬಹಿರಂಗ ಮಾಡಿದ್ದಾರೆ.  

ಮೈನೆ ಪ್ಯಾರ್ ಕಿಯಾ (Maine Pyar Kiya) ನಂತರ ಭಾಗ್ಯಶ್ರೀ ಇನ್ನೂ ಕೆಲವು ಚಿತ್ರಗಳನ್ನು ಮಾಡಿದರು. ಆದರೆ ಅವು ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಸಿನಿಮಾದಿಂದ ದೂರವಾಗಿ ವೈಯಕ್ತಿಕ ಜೀವನದಲ್ಲಿ  (Personal Life) ಬಿಜಿಯಾದರು.
 

ಮದುವೆಯಾದ ಕೆಲವು ವರ್ಷಗಳ ನಂತರ, ಪತಿ ಹಿಮಾಲಯ ದಾಸಾನಿಯಿಂದ (Himalay Dasani) ಒಂದೂವರೆ ವರ್ಷಗಳ ಕಾಲ ಬೇರ್ಪಟ್ಟರು ಎಂದು ಅವರೇ ಬಾಯಿ ಬಿಟ್ಟಿದ್ದಾರೆ. ನಂತರ ಇಬ್ಬರ ಸಂಬಂಧ ಸರಿಯಾದರೂ, ಇಂದಿಗೂ ಆ ಅವಧಿಯನ್ನು ನೆನಸಿಕೊಂಡರೆ ಭಯವಾಗುತ್ತದೆ ಎಂದು ಭಾಗ್ಯಶ್ರೀ ಹೇಳಿದ್ದಾರೆ.

Latest Videos


ಹಿಮಾಲಯ ನನ್ನ  ಫಸ್ಟ್‌ ಲವ್‌ (First Love) ಮತ್ತು ಹೌದು ನಾನು ಅವನನ್ನು ಮದುವೆಯಾಗಿದ್ದೇನೆ. ಆದರೆ ಮಧ್ಯದಲ್ಲಿ ನಾವು ಬೇರ್ಪಟ್ಟ ಒಂದು ಸಮಯ ಬಂದಿತು. ಆಗ ನನಗೆ ಅರಿವಾಯಿತು ಅವನು ನನ್ನ ಜೀವನದಲ್ಲಿ ಬರದಿದ್ದರೆ ಮತ್ತು ನಾನು ಬೇರೆಯವರೊಂದಿಗೆ ಮದುವೆಯಾಗಿದ್ದರೆ ಏನಾಗುತ್ತಿತ್ತು ಎಂದು. ಒಂದೂವರೆ ವರ್ಷ ನಾವು ಒಟ್ಟಿಗೆ ಇರದ ಕಾಲವೊಂದಿತ್ತು, vಎಂದು ನಟಿ ಬಹಿರಂಗ ಪಡಿಸಿದರು.

ಭಾಗ್ಯಶ್ರೀ ಮತ್ತು ಹಿಮಾಲಯ ಮೊದಲು ಭೇಟಿಯಾದದ್ದು ಶಾಲೆಯಲ್ಲಿ. ಇಡೀ ತರಗತಿಯಲ್ಲಿ ಹಿಮಾಲಯ ಅತ್ಯಂತ ತುಂಟ ಮತ್ತು ನಾನು ಆ ಕ್ಲಾಸ್‌ನ ಮಾನಿಟರ್ ಆಗಿದ್ದೆ. ತರಗತಿಯ ಒಳಗೂ ಹೊರಗೂ ಆಗಾಗ ಜಗಳವಾಡುತ್ತಿದ್ದೆವು. ಆದರೆ, ಅಲ್ಲಿಯವರೆಗೆ ನಾವು ಪರಸ್ಪರ ಡೇಟಿಂಗ್ (Dating) ಮಾಡಿರಲಿಲ್ಲ. ಶಾಲೆಯ ಕೊನೆಯ ದಿನದಂದು ಅವನು ನನಗೆ ಏನನ್ನೂ ಹೇಳಲಿಲ್ಲ.

ನಂತರ ಒಂದು ದಿನ ಹಿಮಾಲಯ್‌ ನನ್ನೊಂದಿಗೆ ಮಾತನಾಡಲು ಬಯಸುತ್ತೇನೆ, ಎಂದು ಹೇಳಿದನು. ಅವನು ಸುಮಾರು ಒಂದು ವಾರದವರೆಗೆ ನನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದ. ಆದರೆ ಪ್ರತಿ ಬಾರಿ ಅವರು ಹಿಂದೆ ಸರಿಯುತ್ತಿದ್ದ. ಅಂತಿಮವಾಗಿ, ಅವನಿಗೆ ಏನು ಹೇಳಬೇಕೋ ಅದನ್ನು ಹೇಳು ಮತ್ತು ಉತ್ತರವು ಸಕಾರಾತ್ಮಕವಾಗಿರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಭಾಗ್ಯಶ್ರೀ ಹೇಳಿದ್ದರಂತೆ..

ಆ ನಂತರ  ನನ್ನನ್ನು ಇಷ್ಟಪಡುತ್ತಿರುವ ವಿಷಯ ಹೇಳಿದ, ನಮ್ಮ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದೆವು. ಆ ದಿನ ನಾವು ಜೀವನ ಸಂಗಾತಿಯಾಗಬೇಕೋ ಬೇಡವೋ ಎಂಬ ನಿರ್ಧಾರದ ದಿನವಾಗಿತ್ತು. ಇದಾದ ನಂತರ ಮನೆಯಿಂದ ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾದೆವು. ಈ ಮದುವೆಯಲ್ಲಿ, ಹಿಮಾಲಯದ ಪೋಷಕರಲ್ಲದೇ, ಸಲ್ಮಾನ್ ಖಾನ್ (Salman Khan) ಮತ್ತು ಸೂರಜ್ ಬರ್ಜಾತ್ಯಾ ಕೂಡ ಇದ್ದರು.

ಮದುವೆಯ ನಂತರ ಭಾಗ್ಯಶ್ರೀ ಅಭಿನಯದ ಮೊದಲ ಚಿತ್ರ ಮೈನೆ ಪ್ಯಾರ್ ಕಿಯಾ ಸೂಪರ್ ಹಿಟ್ ಆಗಿತ್ತು. ಆದರೆ, ಭಾಗ್ಯಶ್ರೀ ಈಗ ಸಿನಿಮಾಗಳಿಗಿಂತ ಪತಿ ಮತ್ತು ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡುವುದು ಸೂಕ್ತ ಎಂದು ಪರಿಗಣಿಸಿದ್ದರು.   ಮದುವೆಯಾದ ಸ್ವಲ್ಪ ಸಮಯದ ನಂತರ, ಮಗ ಅಭಿಮನ್ಯುಗೆ ಜನ್ಮ ನೀಡಿದರು. ಸಿನಿಮಾ ಬಿಟ್ಟಿದ್ದಕ್ಕೆ ನನಗೆ ಬೇಸರವಿಲ್ಲ, ನಾನು ನನ್ನ ಪತಿ ಮತ್ತು ಕುಟುಂಬದೊಂದಿಗೆ ಇದ್ದೇನೆ ಎನ್ನುತ್ತಾರೆ ನಟಿ.

ಭಾಗ್ಯಶ್ರೀ ಅವರು ಅಮೋಲ್ ಪಾಲೇಕರ್ ನಿರ್ಮಿಸಿದ ಕಚ್ಚಿ ಧೂಪ್ ಎಂಬ ಟೆಲಿ ಧಾರಾವಾಹಿಯೊಂದಿಗೆ ತಮ್ಮ
ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇದರ ನಂತರ, ಅವರು ಹೋನಿ-ಅನ್ಹೋಲಿ, ಕಿಸ್ಸೆ ಮಿಯಾನ್ ಬೀವಿ ಕೆ, ಸಂಝೌತಾ, ಆಂಧಿ ಎಮೋಷನ್ಸ್ ಕಿ, ಸಂಝೌತಾ, ಕಾಗಜ್ ಕಿ ಕಶ್ತಿ, ತನ್ಹಾ ದಿಲ್ ತನ್ಹಾ ಸಫರ್, ಕಭಿ ಕಭಿ ಮತ್ತು ಲೌಟ್ ಆವೋ ತ್ರಿಶಾ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗ್ಯಶ್ರೀ ಅವರು ಕೆಲವು ಭೋಜ್‌ಪುರಿ ಚಿತ್ರಗಳನ್ನೂ ನಿರ್ಮಿಸಿದ್ದಾರೆ.

ಪ್ರಸ್ತುತ  ಪತಿಯೊಂದಿಗೆ, ಅವರು ಮಾಧ್ಯಮ ಕಂಪನಿ ಸೃಷ್ಟಿ ಎಂಟರ್ಟೈನ್ಮೆಂಟ್ ಅನ್ನು ನಡೆಸುತ್ತಿದ್ದಾರೆ. ಅವರ ಪುತ್ರಿ ಆವಂತಿಕಾ ಲಂಡನ್‌ನಲ್ಲಿ ಬಿಸಿನೆಸ್‌ನಲ್ಲಿ ಪದವಿ ಪಡೆದಿದ್ದು, ಮಗ ಅಭಿಮನ್ಯು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

click me!