ಹಿರಿಯ ನಟಿ ಕೆಪಿಎಸಿ ಲಲಿತಾ (KPAC Lalitha) ಅವರು ತಮ್ಮ ಸಿನಿಮಾಗಳ ಪರಂಪರೆಯನ್ನು ತಮ್ಮ ಅಭಿಮಾನಿಗಳಿಗಾಗಿ ಬಿಟ್ಟು ಹೋಗಿದ್ದಾರೆ. ಮಲಯಾಳಂ ಚಲನಚಿತ್ರರಂಗ 74ನೇ ವಯಸ್ಸಿನ ಹಿರಿಯ ನಟಿ KPAC ಲಲಿತಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ. ಅವರ ಎವರ್‌ಗ್ರೀನ್ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ ಇಲ್ಲಿದೆ.
ಮಲಯಾಳಂ ಚಲನಚಿತ್ರರಂಗ 74ನೇ ವಯಸ್ಸಿನ ಹಿರಿಯ ನಟಿ KPAC ಲಲಿತಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ. ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ನಟಿ ಐದು ದಶಕಗಳ ಕಾಲ ಯಶಸ್ವಿ ವೃತ್ತಿ ಜೀವನ ಹೊಂದಿದ್ದರು; ಅವರು 550 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
211
ಕೆಪಿಎಸಿ ಲಲಿತಾ ಅವರು ಕೇವಲ 10 ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರು ನಾಟಕಗಳನ್ನು ಮಾಡಲು ಪ್ರಾರಂಭಿಸಿದರು ಮತ್ತು ಕೇರಳ ಪೀಪಲ್ಸ್ ಆರ್ಟ್ಸ್ ಕ್ಲಬ್ (ಕೆಪಿಎಸಿ) ಸೇರಿಕೊಂಡರು. ಅದೇ ಕ್ಲಬ್ ಅವರಿಗೆ 'ಕೆಪಿಎಸಿ' ಲಲಿತಾ ಎಂಬ ಹೆಸರನ್ನು ತಂದುಕೊಟ್ಟಿತು.
311
ಲಲಿತಾ ಚಿತ್ರರಂಗದಲ್ಲಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದಾಗ, ಅದೇ ಲಲಿತಾ ಎಂಬ ಹೆಸರಿನ ಇನ್ನೊಬ್ಬ ನಟಿ ಈಗಾಗಲೇ ಇದ್ದರು. ಹೀಗಾಗಿ ಇಬ್ಬರು ನಟಿರನ್ನು ಸುಲಭವಾಗಿ ಗುರುತಿಸಲು, ಲಲಿತಾ ಅವರ ಹೆಸರಿಗೆ ‘ಕೆಪಿಎಸಿ’ ಸೇರಿಸಲಾಯಿತು ಮತ್ತು ಅವರು ಕೆಪಿಎಸಿ ಲಲಿತಾ ಆದರು. ಈ ನಟಿ ಕೆಲವು ಕ್ಲಾಸಿಕ್ ಸಿನಿಮಾಗಳು ಇಲ್ಲಿವೆ.
411
ಆಕಾಶಂ:
ಸುಂದರ್ ದಾಸ್ ನಿರ್ದೇಶನದ ಈ ಚಿತ್ರವು 2007ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ನಟಿ ಕೆಪಿಎಸಿ ಲಲಿತ ಅವರ ಜೊತೆ ಹರಿಶ್ರೀ ಅಶೋಕನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
511
ಅಮರಂ:
ಈ ಸಿನಿಮಾವು ಮೂರು ದಶಕಗಳ ಹಿಂದೆ, 1991 ರಲ್ಲಿ ಬಿಡುಗಡೆಯಾಯಿತು. ಭರತನ್ ನಿರ್ದೇಶಿಸಿದ ಮತ್ತು ಎ.ಕೆ. ಲೋಹಿತದಾಸ್ ಬರೆದ ಈ ಚಲನಚಿತ್ರದಲ್ಲಿ ನಟರಾದ ಮಮ್ಮುಟ್ಟಿ, ಮಾತು, ಕೆಪಿಎಸಿ ಲಲಿತ, ಮುರಳಿ, ಅಶೋಕನ್, ಚಿತ್ರ ಮತ್ತು ಕುಠೀರವಟ್ಟಂ ಪಪ್ಪು ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಕೆಪಿಎಸಿ ಲಲಿತಾ ಅವರು ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ (National Award) ಪಡೆದರು.
611
ಶಾಂತಮ್:
ಜಯರಾಜ್ ನಿರ್ದೇಶನದ ಈ ಮಲಯಾಳಂ (Malayalam) ಚಲನಚಿತ್ರದಲ್ಲಿ ಐಎಂ ವಿಜಯನ್, ಸೀಮಾ ಬಿಸ್ವಾಸ್ (Seema Biswas), ಎಂಜಿ ಶಶಿ ಮತ್ತು ಕೆಪಿಎಸಿ ಲಲಿತಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹೆಸರಾಂತ ಕಥಕ್ಕಳಿ ಕಲಾವಿದ ಕಲಾಮಂಡಲಂ ಗೋಪಿ ಮತ್ತು ಮಲಯಾಳಂ ಬರಹಗಾರ ಮದಾಂಬು ಕುಂಜುಕುಟ್ಟನ್ ಕೂಡ ನಟಿಸಿದ್ದಾರೆ. 2001 ರಲ್ಲಿ ಬಿಡುಗಡೆಯಾದ ಈ ಚಿತ್ರವು ಮತ್ತು ಕೆಪಿಎಸಿ ಲಲಿತಾ ಕೂಡಾ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು .
711
ಗಾಡ್‌ಫಾದರ್:
ಆಕ್ಷನ್ ಕಾಮಿಡಿ-ಡ್ರಾಮಾ ಚಿತ್ರ, ಗಾಡ್‌ಫಾದರ್ 1991 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವನ್ನು ಸಿದ್ದಿಕಿ-ಲಾಲ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಎನ್‌ಎನ್ ಪಿಳ್ಳೈ, ಜಗದೀಶ್, ಮುಖೇಶ್, ಇನೋಸೆಂಟ್, ಸಿದ್ದಿಕಿ, ಕೆಪಿಎಸಿ ಲಲಿತಾ, ಕನಕ, ರಘು ಮುಂತಾದವರ ದೊಡ್ಡ ತಂಡವೇ ಇತ್ತು.
811
ಕಡಿಂಜೂಲ್ ಕಲ್ಯಾಣಂ:
1991 ರಲ್ಲಿ ಬಿಡುಗಡೆಯಾದ ರಾಜಸೇನನ್ ಅವರ ಫ್ಯಾಮಿಲಿ ಡ್ರಾಮಾ ಕಡಿಂಜೂಲ್ ಕಲ್ಯಾಣಂದಲ್ಲಿ ನಟರಾದ ಜಯರಾಮ್, ಊರ್ವಶಿ, ಕೆಪಿಎಸಿ ಲಲಿತಾ ಮತ್ತು ಇನ್ನೋಸೆಂಟ್ ನಟಿಸಿದ್ದಾರೆ. ಇದು ರಾಜಸೇನನ್ ಮತ್ತು ಜಯರಾಮ್ ನಡುವಿನ ಮೊದಲ ಸಹಯೋಗವಾಗಿತ್ತು.
911
ನೀಲಪೊನ್ಮಾನ್:
ಕುಂಚಾಕೊ ನಿರ್ದೇಶಿಸಿದ ಮತ್ತು ನಿರ್ಮಿಸಿದ ನೀಲಪೊನ್ಮಾನ್ ಚಲನಚಿತ್ರವು 1975 ರಲ್ಲಿ ಬಿಡುಗಡೆಯಾಯಿತು. ಪ್ರೇಮ್ ನಜೀರ್, ಕೆಪಿಎಸಿ ಲಲಿತಾ, ಅಡೂರ್ ಭಾಸಿ ಮತ್ತು ಶ್ರೀಲತಾ ನಂಬೂತಿರಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಲೀಲ್ ಚೌಧರಿ ಸಂಗೀತ ನೀಡಿದ್ದಾರೆ.
1011
ಸಂದೇಸಂ:
1991 ರಲ್ಲಿ ಬಿಡುಗಡೆಯಾದ ಕೆಪಿಎಸಿಯ ಮತ್ತೊಂದು ಚಿತ್ರ ಸತ್ಯನ್ ಅಂತಿಕಾಡ್ ಅವರ ರಾಜಕೀಯ ವಿಡಂಬನೆಯ ಹಾಸ್ಯ ಚಿತ್ರ 'ಸಂದೇಶಂ'. ಈ ಚಿತ್ರವು ನಟರಾದ ತಿಲಕನ್, ಜಯರಾಮ್, ಶ್ರೀನಿವಾಸನ್, ಸಿದ್ದಿಕಿ ಮತ್ತು ಮಾತು ಸೇರಿದಂತೆ ಇತರರನ್ನು ಒಳಗೊಂಡಿದ್ದು, ಕೇರಳದ ರಾಜಕೀಯ ಚಟುವಟಿಕೆಯನ್ನು ಆಧರಿಸಿದೆ.
1111
ಸ್ನೇಹವೀಡು:
2011ರಲ್ಲಿ ಬಿಡುಗಡೆಯಾದ ಸ್ನೇಹವೀಡು ಮೋಹನ್ ಲಾಲ್ (Mohanlal), ಶೀಲಾ ಮತ್ತು ರಾಹುಲ್ ಪಿಳ್ಳೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸತ್ಯನ್ ಅಂತಿಕಾಡ್ ನಿರ್ದೇಶಿಸಿದ್ದರೆ, ಆಂಟನಿ ಪೆರುಂಬವೂರ್ ಇದನ್ನು ನಿರ್ಮಿಸಿದ್ದಾರೆ.