ಜೇಹ್ Birthday ದಿನ ಒಂದೇ ಫ್ರೇಮ್‌ನಲ್ಲಿ ಸೈಫ್ 4 ಮಕ್ಕಳು ಸೆರೆಯಾಗಿದ್ಹೀಗೆ!
First Published | Feb 22, 2022, 6:45 PM ISTಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಕಿರಿಯ ಮಗ ಜೆಹ್ (Jeh Ali Khan) ಮೊದಲ ಹುಟ್ಟುಹಬ್ಬವನ್ನು ಫೆಬ್ರವರಿ 21 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ, ಜೆಹ್ ಅವರ ತಾಯಿಯ ಅಜ್ಜ ರಣಧೀರ್ ಕಪೂರ್ ಅವರ ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿಯನ್ನು ನಡೆಸಲಾಯಿತು, ಇದರಲ್ಲಿ ಸೈಫ್ ಅಲಿಖಾನ್ ಅವರ ಎಲ್ಲಾ ನಾಲ್ಕು ಮಕ್ಕಳು ಒಟ್ಟಿಗೇ ಕಾಣಿಸಿಕೊಂಡರು. ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಸೈಫ್ ಅವರ ನಾಲ್ವರು ಮಕ್ಕಳಾದ ಸಾರಾ, ಇಬ್ರಾಹಿಂ, ತೈಮೂರ್ ಮತ್ತು ಜೆಹ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.