ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?ಸ್ಮೃತಿ ಇರಾನಿ ಉತರಕ್ಕೆ ಒಂದು ಕ್ಷಣ ಶಾರುಖ್ ಖಾನ್ ತಬ್ಬಿಬ್ಬಾಗಿದ್ದರು. ಖುದ್ದು ಸ್ಮೃತಿ ಇರಾನಿ ಮೊದಲ ಭೇಟಿಯ ಮಾತುಕತೆ ವಿವರ ಬಹಿರಂಗಪಡಿಸಿದ್ದಾರೆ.
ಬಿಜೆಪಿ ನಾಯಕಿ, ಮಾಜಿ ಸಚಿವೆ ಸ್ಮೃತಿ ಇರಾನಿ ರಾಜಕೀಯದಲ್ಲಿ ಯಶಸ್ವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಚುನಾವಣೆ ಸೋತರೂ ಸ್ಮೃತಿ ಇರಾನಿ ಬಿಜೆಪಿ ಪ್ರಮುಖ ನಾಯಕಿ. ಸ್ಮೃತಿ ಇರಾನಿ ತಮ್ಮ ಕರಿಯರ್ ಆರಂಭಿಸಿದ್ದು ಕಿರುತೆರೆ ಮೂಲಕ, ಧಾರವಾಹಿಗಳಲ್ಲಿ ನಟನೆ ಮೂಲಕ ಕಿರುತೆರೆಗೆ ಬಂದಿದ್ದ ಸ್ಮೃತಿ ಬಳಿಕ ರಾಜಕೀಯದಲ್ಲಿ ಮಿಂಚಿದ್ದಾರೆ. ಆರಂಭಿಕ ದಿನಗಳ ಕುರಿತು ಸ್ಮೃತಿ ಇರಾನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಶಾರುಖ್ ಖಾನ್ ಜೊತೆಗಿನ ಮೊದಲ ಭೇಟಿಯ ಮಾತುಕತೆ ವಿವರವನ್ನು ಬಹಿರಂಗಪಡಿಸಿದ್ದಾರೆ.
25
ಸ್ಮೃತಿ ಇರಾನಿ-ಶಾರುಖ್ ಮೊದಲ ಭೇಟಿಯಾಗಿದ್ದೆಲ್ಲಿ?
ಸ್ಮೃತಿ ಇರಾನಿ-ಶಾರುಖ್ ಮೊದಲ ಭೇಟಿಯಾಗಿದ್ದೆಲ್ಲಿ?
ಮಶಾಬ್ಲೆ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸ್ಮಿೃತಿ ಇರಾನಿ ಹಲವು ವಿಚಾರ ಬಹಿರಂಗಪಡಿಸಿದ್ದಾರೆ. ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಮೂಲಕ ಸ್ಮೃತಿ ಇರಾನಿ ಭಾರಿ ಜನಪ್ರಿಯರಾಗಿದ್ದರು. ಹೀಗಾಗಿ ಕಾರ್ಯಕ್ರಮ ಒಂದರಲ್ಲಿ ಸ್ಮೃತಿ ಇರಾನಿ ಹಾಗೂ ಶಾರುಖ್ ಖಾನ್ ಮೊದಲ ಭೇಟಿಯಾಗಿದ್ದರು.
35
ಮದುವೆ ಮಾತ್ರ ಆಗಬೇಡ
ಮದುವೆ ಮಾತ್ರ ಆಗಬೇಡ
ಶಾರುಖ್ ಖಾನ್ ಭೇಟಿಯಾದ ಸ್ಮೃತಿ ಇರಾನಿ ಹಳೇ ನೆನಪು ಬಿಚ್ಚಿಟ್ಟಿದ್ದಾರೆ. ನೋಡು ನಾನು ಹೇಳುತ್ತಿದ್ದೇನೆ, ಮದುವೆ ಮಾತ್ರ ಆಗಬೇಡ, ನಾನು ಹೇಳ್ತಾ ಇದ್ದೀನಿ, ಮದುವೆ ಆಗಬೇಡ ಎಂದು ಸ್ಮೃತಿ ಇರಾನಿಗೆ ಶಾರುಖ್ ಖಾನ್ ಸಲಹೆ ನೀಡಿದ್ದರು. ತಕ್ಷಣವೇ ಸ್ಮೃತಿ ಇರಾನಿ ಆದರೆ ನೀವು ಹೇಳಿದ್ದು ಬಹಳ ಲೇಟ್ ಆಯ್ತು ಎಂದು ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ಮೃತಿ ಇರಾನಿ ಉತ್ತರ ಕೇಳಿ ಶಾರುಖ್ ಖಾನ್ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.
ಸ್ಮೃತಿ ಇರಾನಿಗೆ ಶಾರುಖ್ ಖಾನ್ ಭೇಟಿಯಾಗುವ ಅವಕಾಶ ಸಿಕ್ಕಿದ್ದು, ಸ್ಮೃತಿ ಇರಾನಿ ಪತಿ ಜುಬೈನ್ ಇರಾನಿ ಮೂಲಕ. ಶಾರುಖ್ ಭೇಟಿ ವೇಳೆ ಸ್ಮೃತಿ ಇರಾನಿ ಮದುವೆಯಾಗಿದ್ದರು. ಹೀಗಾಗಿ ತಕ್ಷವೇ ಸ್ಮೃತಿ ಇರಾನಿ, ನೀವು ಸಲಹೆ ನೀಡುವಾಗ ಕಾಲ ಮಿಂಚಿ ಹೋಗಿದೆ ಎಂದು ಹೇಳಿದ್ದರು.
55
ಶಾರುಖ್ ಖಾನ್, ಜೂಹಿ ಚಾವ್ಲ ಜೊತೆಗೆ ಸಿನಿಮಾ
ಶಾರುಖ್ ಖಾನ್, ಜೂಹಿ ಚಾವ್ಲ ಜೊತೆಗೆ ಸಿನಿಮಾ
ಶಾರುಖ್ ಖಾನ್, ಜೂಹ್ಲಿ ಚಾವ್ಲ ಜೊತೆಗೆ ಸಿನಿಮಾದಲ್ಲಿ ಸ್ಮೃತಿ ಇರಾನಿ ಕೂಡ ನಟಿಸಿದ್ದಾರೆ. ಅಜೀಜ್ ಮಿರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದು ಸುಂದರ ನೆನಪು, ಅವಕಾಶಗಳು ಹೊಸ ಪ್ರಪಂಚವನ್ನೇ ತೆರೆದಿತ್ತು. ಬಳಿಕ ರಾಜಕೀಯದಲ್ಲಿ ಆಸಕ್ತಿ ಬೆಳೆಯಿತು ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.