ಸ್ಟಾರ್ ನಟರು, ಹೀರೋಗಳ ಬಗ್ಗೆ ನಟಿಯರು ಮಾತಾಡಿದ ಕೂಡಲೇ ಅದು ದೊಡ್ಡ ಸುದ್ದಿಯಾಗುತ್ತದೆ, ಇಂಥಾ ಡಬಲ್ ಸ್ಟಾಂಡರ್ಡ್ ಯಾಕೆ? ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ನೇರ ಪ್ರಶ್ನೆ.
ಬಳಿಕ ‘ಕಲ್ಕಿ’ ಚಿತ್ರತಂಡವೂ ‘ಬದ್ಧತೆ’ಯ ಕಾರಣ ನೀಡಿ ಅವರನ್ನು ಚಿತ್ರದಿಂದ ಹೊರಗಿಟ್ಟಿತ್ತು. ಇದು ದೇಶಾದ್ಯಂತ ಪರ ವಿರೋಧದ ಚರ್ಚೆಗೆ ಕಾರಣವಾಗಿತ್ತು.
56
ವೀಕೆಂಡ್‌ನಲ್ಲಿ ಕೆಲಸ ಮಾಡೋದಿಲ್ಲ
ಈ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿರುವ ದೀಪಿಕಾ, ಹಲವು ನಾಯಕ ನಟರು 8 ಗಂಟೆಯಷ್ಟೇ ಕೆಲಸ ಮಾಡುತ್ತಾರೆ. ಜೊತೆಗೆ ಅವರ ಕೆಲಸ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಇರುತ್ತದೆ. ವೀಕೆಂಡ್‌ನಲ್ಲಿ ಅವರು ಕೆಲಸ ಮಾಡೋದಿಲ್ಲ.
66
ಯಾರೂ ತಕರಾರು ತೆಗೆಯೋದಿಲ್ಲ
ಆ ಬಗ್ಗೆ ಯಾಕೆ ಯಾರೂ ತಕರಾರು ತೆಗೆಯೋದಿಲ್ಲ ಎಂದೂ ಪ್ರಶ್ನೆ ಮಾಡಿದ್ದಾರೆ. ಸದ್ಯ ಶಾರೂಖ್ ಖಾನ್ ಜೊತೆಗೆ ‘ಕಿಂಗ್’, ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಾಯಕನಾಗಿರುವ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ.