ಮಹಾವತಾರ ಬಾಬಾಜಿ ಗುಹೆಯಲ್ಲಿ ಧ್ಯಾನಸ್ಥರಾದ ರಜನಿಕಾಂತ್: ಸೂಪರ್‌ಸ್ಟಾರ್ ಸರಳ ಬದುಕು ಟ್ರೆಂಡಿಂಗ್!

Published : Oct 11, 2025, 06:32 PM IST

ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಮಹಾನ್‌ ಯೋಗಿ ಬಾಬಾಜಿ ಸಾಧನೆ ಮಾಡುತ್ತಿದ್ದ ಗುಹೆ ಇದೆ. ಮಹಾವತಾರ ಬಾಬಾಜಿ ಅವರನ್ನು ತನ್ನ ಅಧ್ಯಾತ್ಮ ಗುರು ಎಂದು ರಜನಿಕಾಂತ್‌ ಸ್ವೀಕರಿಸಿದ್ದಾರೆ.

PREV
15
ಬಾಬಾಜಿ ಗುಹೆಯಲ್ಲಿ ಧ್ಯಾನ

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಹಿಮಾಲಯದ ಕಡಿದಾದ ಬೆಟ್ಟದಲ್ಲಿರುವ ಮಹಾವತಾರ ಬಾಬಾಜಿ ಗುಹೆಯಲ್ಲಿ ಧ್ಯಾನ ನಿರತರಾಗಿದ್ದಾರೆ.

25
ಹಿಮಾಲಯ ಪ್ರವಾಸ

ಕಳೆದ ಕೆಲವು ದಿನಗಳಿಂದ ಹಿಮಾಲಯ ಪ್ರವಾಸದಲ್ಲಿರುವ ರಜನಿಕಾಂತ್‌ ಋಷಿಕೇಶದಲ್ಲಿ ಬೀದಿ ಬದಿಯಲ್ಲಿ ತಿಂಡಿ ತಿಂದು ತಮ್ಮ ಸರಳತನದಿಂದ ಸುದ್ದಿಯಾಗಿದ್ದರು.

35
ಬಾಬಾಜಿ ಗುಹೆಗೆ ಭೇಟಿ

ಬಳಿಕ ಅವರು ಪ್ರವಾಸ ಮುಂದುವರಿಸಿ, ಬದರೀನಾಥ ತಲುಪಿದ್ದರು. ಅಲ್ಲಿ ದೇವರ ದರ್ಶನ ಪಡೆದ ಬಳಿಕ ತಮ್ಮ ಅಧ್ಯಾತ್ಮ ಗುರು ಮಹಾವತಾರ ಬಾಬಾಜಿ ಅವರ ಗುಹೆಗೆ ತೆರಳಿದ್ದಾರೆ.

45
ಅಧ್ಯಾತ್ಮ ಗುರು

ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಮಹಾನ್‌ ಯೋಗಿ ಬಾಬಾಜಿ ಸಾಧನೆ ಮಾಡುತ್ತಿದ್ದ ಗುಹೆ ಇದೆ. ಮಹಾವತಾರ ಬಾಬಾಜಿ ಅವರನ್ನು ತನ್ನ ಅಧ್ಯಾತ್ಮ ಗುರು ಎಂದು ರಜನಿಕಾಂತ್‌ ಸ್ವೀಕರಿಸಿದ್ದಾರೆ.

55
ಹೊಸ ಸಿನಿಮಾ ಆರಂಭಕ್ಕೆ ಮುನ್ನ ಭೇಟಿ

ಪ್ರತೀ ಸಿನಿಮಾ ಕೆಲಸ ಸಂಪೂರ್ಣಗೊಂಡ ಬಳಿಕ ಹಾಗೂ ಹೊಸ ಸಿನಿಮಾ ಆರಂಭಕ್ಕೆ ಮುನ್ನ ಬಾಬಾಜಿ ಗುಹೆಗೆ ರಜನಿಕಾಂತ್‌ ಭೇಟಿ ನೀಡುತ್ತಾರೆ. ಅಲ್ಲಿ ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ.

Read more Photos on
click me!

Recommended Stories