ಶಿವಾಜಿ ಮಹಾರಾಜರಿಗಿಂತ ಮೊದಲು ಅಕ್ಷಯ್ ಕುಮಾರ್ ನಿರ್ವಹಿಸಿದ ರಿಯಲ್ ಹೀರೊ ಪಾತ್ರಗಳು

First Published Dec 7, 2022, 6:34 PM IST

ಅಕ್ಷಯ್ ಕುಮಾರ್ (Akshay Kumar) ತಮ್ಮ ಮೊದಲ ಮರಾಠಿ ಚಿತ್ರ 'ವೇದತ್ ಮರಾಠೆ ವೀರ್ ದೌಡಲೇ ಸಾತ್' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಚಿತ್ರದಲ್ಲಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಚಿತ್ರದ ಫಸ್ಟ್ ಲುಕ್ ಕೂಡ ಹೊರ ಬಂದಿದೆ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದು ರಿಲೀಸ್ ಆದ ನಂತರವೇ ಗೊತ್ತಾಗಲಿದೆ. ಆದರೆ ಅಕ್ಷಯ್ ಕುಮಾರ್ ಅವರು ಇದಕ್ಕೂ ಮೊದಲು ಕೂಡ ನಿಜ ಜೀವನದ ನಾಯಕರಾಗಿ ಅಥವಾ ಅವರಿಂದ ಸ್ಫೂರ್ತಿ ಪಡೆದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವುಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿವೆ.

ಅಕ್ಷಯ್ ಕುಮಾರ್ 2016 ರಲ್ಲಿ ಮೊದಲ ಜೀವನಚರಿತ್ರೆ 'ಏರ್‌ಲಿಫ್ಟ್' ಮಾಡಿದರು. ನೈಜ ಘಟನೆಗಳನ್ನು ಆಧರಿಸಿ, ಅಕ್ಷಯ್ ಕುಮಾರ್ ಚಿತ್ರದಲ್ಲಿ ರಂಜಿತ್ ಕತ್ಯಾಲ್ ಪಾತ್ರ ನಿರ್ವಹಿಸಿದ್ದಾರೆ. ಇದು ಟೊಯೊಟಾ ಸನ್ನಿ ಎಂದು ಕರೆಯಲ್ಪಡುವ ಕುವೈತ್ ಮೂಲದ ಉದ್ಯಮಿ ಮಾತುನ್ನಿ ಮ್ಯಾಥ್ಯೂ ಅವರಿಂದ ಸ್ಫೂರ್ತಿ ಪಡೆದಿದೆ. 1990ರಲ್ಲಿ ಇರಾಕಿನ ಆಕ್ರಮಣದ ಸಮಯದಲ್ಲಿ, ಮ್ಯಾಥ್ಯೂ ಅಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 123 ಕೋಟಿ ಗಳಿಸಿ ಸೂಪರ್ ಹಿಟ್ ಆಗಿತ್ತು.

2016ರಲ್ಲಿ, ಅಕ್ಷಯ್ ಕುಮಾರ್ ಮತ್ತೊಂದು ಜೀವನ ಚರಿತ್ರೆಯ ಆಧಾರಿತ ಚಿತ್ರವನ್ನು ಮಾಡಿದರು. ಹೆಸರು 'ರುಸ್ತಂ'. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ನೌಕಾಪಡೆ ಅಧಿಕಾರಿ ರುಸ್ತಮ್ ಪಾವ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ನೌಕಾಪಡೆಯ ಅಧಿಕಾರಿ ಕೆ.ಎಂ. ನಾನಾವತಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರದ ಕಲೆಕ್ಷನ್ ಸುಮಾರು 124 ಕೋಟಿ ಆಗಿತ್ತು ಮತ್ತು ಅದು ಸೂಪರ್ ಹಿಟ್ ಆಗಿತ್ತು

Latest Videos


2018 ರಲ್ಲಿ, ಅಕ್ಷಯ್ ಪ್ಯಾಡ್‌ಮ್ಯಾನ್ ಎಂಬ ಶೀರ್ಷಿಕೆಯ ಚಲನಚಿತ್ರ ಮಾಡಿದರು, ಇದರಲ್ಲಿ ಅವರ ಪಾತ್ರ ಲಕ್ಷ್ಮೀಕಾಂತ್ ಚೌಹಾಣ್, ಇದು ತಮಿಳುನಾಡಿನ ಒಂದು ಸಣ್ಣ ಹಳ್ಳಿಯ ಸಾಮಾಜಿಕ ಕಾರ್ಯಕರ್ತ ಅರುಣಾಚಲಂ ಮುರುಗನಾಥನ್ ಅವರನ್ನು ಆಧರಿಸಿದೆ. ಅಗ್ಗದ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲು ಸುಲಭವಾಗಿ ಮತ್ತು ಕೈಗೆಟುಕುವ ಯಂತ್ರ ಕಂಡುಹಿಡಿದ ಅರುಣಾಚಲಂ ಮುರುಗನಾಥನ್ ಅವರ ಪಾತ್ರದಲ್ಲಿ ನಟ ಕಾಣಿಸಿಕೊಂಡರು. ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿ ಪ್ರದರ್ಶನ ನೀಡಿದ ಚಿತ್ರವು ಸುಮಾರು 78 ಕೋಟಿ ರೂ ಕಲೆಕ್ಷನ್‌ ಮಾಡಿತ್ತು.

2018 ರಲ್ಲಿ, ಅಕ್ಷಯ್ ಕುಮಾರ್ ಮತ್ತೊಂದು ನೈಜ ಘಟನೆಯನ್ನು ಆಧರಿಸಿದ 'ಗೋಲ್ಡ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ, 1948 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಹಾಕಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದ ತಪನ್ ದಾಸ್ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಪ್ರದರ್ಶನ ಸಾಧಾರಣವಾಗಿತ್ತು. ಇದರ ಸಂಗ್ರಹ ಸುಮಾರು 101 ಕೋಟಿ.
 

ಅಕ್ಷಯ್ ಕುಮಾರ್ 2019 ರಲ್ಲಿ 'ಕೇಸರಿ' ಹಿಟ್ ಚಿತ್ರ ನೀಡಿದರು. ಚಿತ್ರದ ಕಥೆಯು 1897 ರ ಸರಗರ್ಹಿ ಯುದ್ಧ ಆಧರಿಸಿದೆ ಮತ್ತು ಅಕ್ಷಯ್ ಕುಮಾರ್ ಹವಾಲ್ದಾರ್ ಇಶಾರ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ, ಅವರು ತಮ್ಮ 20 ಸಿಖ್ ಸೈನಿಕರೊಂದಿಗೆ ಸುಮಾರು 10,000 ಪಶ್ತೂನ್ ಹೋರಾಟಗಾರರನ್ನು ಎದುರಿಸುತ್ತಾರೆ. ಚಿತ್ರವು ಸುಮಾರು 150 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.

2019 ರ ಅಕ್ಷಯ್ ಕುಮಾರ್ ಅಭಿನಯದ ಚಿತ್ರ 'ಮಿಷನ್ ಮಂಗಲ್' ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ ಮಂಗಳಯಾನ ಮಿಷನ್ ಅನ್ನು ಆಧರಿಸಿದೆ. ಚಿತ್ರದಲ್ಲಿ, ಅಕ್ಷಯ್ ಕುಮಾರ್ ಮಿಷನ್ ಮಂಗಲ್‌ನ ನಿರ್ದೇಶಕ ರಾಕೇಶ್ ಧವನ್ ಪಾತ್ರವನ್ನು ನಿರ್ವಹಿಸಿದ್ದಾರೆ, ಅವರು ಮಂಗಳಯಾನ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಬ್ಬಯ್ಯ ಅರುಣನ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 192 ಕೋಟಿ ಗಳಿಸಿತು ಮತ್ತು ಸೂಪರ್ ಹಿಟ್ ಆಗಿತ್ತು.

2022 ರಲ್ಲಿ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದರು, ಭಾರತದ ವೀರ ಯೋಧ ಪೃಥ್ವಿರಾಜ್ ಚೌಹಾಣ್, ಕಣ್ಣುಗಳನ್ನು ಕಳೆದುಕೊಂಡರೂ ಮೊಹಮ್ಮದ್ ಘೋರಿಯನ್ನು ನರಕಕ್ಕೆ ಕಳುಹಿಸಿದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಎಂದು ಸಾಬೀತಾಯಿತು. ಚಿತ್ರದ ಕಲೆಕ್ಷನ್ ಸುಮಾರು 68 ಕೋಟಿ ಆಗಿತ್ತು.

click me!