ಕೋಟಿಗಟ್ಟಲೆ ಚಾರ್ಜ್‌ ಮಾಡೋ ಈ ಸೂಪರ್‌ಸ್ಟಾರ್ಸ್ ಫಸ್ಟ್ ಸ್ಯಾಲರಿ ಕೇಳಿದರೆ ಶಾಕ್‌ ಆಗುತ್ತೆ

First Published Dec 7, 2022, 5:52 PM IST

ಬಾಲಿವುಡ್‌ನ ಅನೇಕ ಸ್ಟಾರ್ಸ್‌ ತಮ್ಮ ಒಂದು ಸಿನಿಮಾಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಚಲನಚಿತ್ರಗಳ ಹೊರತಾಗಿ, ಈ ಸ್ಟಾರ್‌ಗಳು ಇತರ ಮೂಲಗಳಿಂದಲೂ ಸಾಕಷ್ಟು ಗಳಿಸುತ್ತಾರೆ. ಇಂದು ಕೋಟಿಯಲ್ಲಿ ಚಾರ್ಜ್‌ ಮಾಡುತ್ತಿರುವ ಟಾಪ್‌ ನಟರ ಮೊದಲ ಸಂಭಾವನೆ ಕೇಳಿದರೆ ಬೆಚ್ಚಿ ಬೀಳುತ್ತೀರಿ. ಬಾಲಿವುಡ್ ಸೂಪರ್‌ಸ್ಟಾರ್‌ಗಳ ಮೊದಲ ಸಂಬಳದ ಬಗ್ಗೆ ಇಲ್ಲಿದೆ ವಿವರ

ಅಕ್ಷಯ್ ಕುಮಾರ್‌

ಇವರ ಮೊದಲ ಸಂಬಳ 1200 ರೂಪಾಯಿ. ಆದರೆ ಇಂದು ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಈ ವರ್ಷ ಅಕ್ಷಯ್‌ಕುಮಾರ್‌ ಅವರ ಒಂದು ಚಿತ್ರವೂ ಕೆಲಸ ಮಾಡಲಿಲ್ಲ ಮತ್ತು ಮುಂಬರುವ ಸಮಯದಲ್ಲಿ ಅವರ OMG 2, ಸೆಲ್ಫಿ, ಬಡೇ ಮಿಯಾನ್ ಚೋಟೆ ಮಿಯಾನ್ ಮುಂತಾದ ಚಿತ್ರಗಳು ಬಿಡುಗಡೆಯಾಗಲಿವೆ.

ಸಲ್ಮಾನ್ ಖಾನ್

ಇಂದು ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿರುವ ಬಾಲಿವುಡ್ ನಲ್ಲಿ ದಬಾಂಗ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ಮೊದಲ ಸಂಭಾವನೆಯಾಗಿ ಪಡೆದಿದ್ದು ಕೇವಲ 57 ರೂಪಾಯಿ.  2023 ರಲ್ಲಿ, ಅವರ ಎರಡು ಚಿತ್ರಗಳು ಕಿಸಿ ಕಾ ಭಾಯಿ ಕಿಸಿ ಜಾನ್ ಮತ್ತು ಟೈಗರ್ 3 ಬಿಡುಗಡೆಯಾಗುತ್ತವೆ

ಶಾರುಖ್ ಖಾನ್

ಬಾಲಿವುಡ್ ಕಿಂಗ್ ಅಂದರೆ ಶಾರುಖ್ ಖಾನ್ ಅವರ ಬಳಿ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಅವರಿಗೆ ಮೊದಲ ಸಂಬಳವಾಗಿ ಸಿಕ್ಕಿದ್ದು ಕೇವಲ 50 ರೂಪಾಯಿ ಮಾತ್ರ.. ಶಾರುಖ್‌ ಕಳೆದ 4 ವರ್ಷಗಳಿಂದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡರು. ಆದಾಗ್ಯೂ, 2023 ರಲ್ಲಿ, ಅವರ ಚಿತ್ರಗಳಾದ ಪಠಾಣ್, ಜವಾನ್ ಮತ್ತು ಡಾಂಕಿ ಬಿಡುಗಡೆಯಾಗಲಿದೆ.
 

ಪ್ರಿಯಾಂಕಾ ಚೋಪ್ರಾ

ಬಹಳ ದಿನಗಳಿಂದ ಯಾವುದೇ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಚೋಪ್ರಾ ಮೊದಲ ಸಂಭಾವನೆಯಾಗಿ ಪಡೆದದ್ದು 5000 ರೂ. ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕಾ ಬಾಲಿವುಡ್‌ಗಿಂತ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂಬರುವ ದಿನಗಳಲ್ಲಿ  ಫರ್ಹಾನ್ ಅಖ್ತರ್ ಅವರ ಚಲನಚಿತ್ರ ಜೀ ಲೇ ಜರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೃತಿಕ್ ರೋಷನ್

 ಹೃತಿಕ್ ರೋಷನ್ ಕೂಡ ಟಾಪ್‌ ನಟರಲ್ಲಿ ಒಬ್ಬರು.ಆದರೆ ಅವರ ಮೊದಲ ಸಂಬಳ ಕೇವಲ 100 ರೂಪಾಯಿ ಎಂದು ತಿಳಿದರೆ  ಆಶ್ಚರ್ಯವಾಗುತ್ತದೆ. ಈ ವರ್ಷ ಹೃತಿಕ್ ರೋಷನ್ ಅವರ ಏಕೈಕ ಚಿತ್ರ ವಿಕ್ರಮ್ ವೇದ ಬಿಡುಗಡೆಯಾಯಿತು. ಅದು ಫ್ಲಾಪ್ ಎಂದು ಸಾಬೀತಾಯಿತು. ಅವರ ಮುಂಬರುವ ಚಿತ್ರ ಫೈಟರ್, ಇದು 2023 ರಲ್ಲಿ ಬಿಡುಗಡೆಯಾಗಲಿದೆ.

ನಾಸಿರುದ್ದೀನ್ ಶಾ

ಶಾ ಅವರು ಮೊದಲ ಸಂಬಳವಾಗಿ ಪಡೆದದ್ದು ಕೇಮಲ  7.50 ರೂ. ಈ ವರ್ಷ, ಒಟಿಟಿಯಲ್ಲಿ ಬಿಡುಗಡೆಯಾದ ಧೂಮ್ಯಯಾನ್ ಚಿತ್ರದಲ್ಲಿ ನಾಸೀರ್ ಕಾಣಿಸಿಕೊಂಡರು. ಇದಲ್ಲದೇ ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ.

ಅಮಿತಾಭ್ ಬಚ್ಚನ್

ಪ್ರಸ್ತುತ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಸೀಸನ್ 14 ಅನ್ನು ಹೋಸ್ಟ್ ಮಾಡುತ್ತಿರುವ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೋಟ್ಯಂತರ ರೂಪಾಯಿ ಆಸ್ತಿ ಮಾಲೀಕರು. ಮತ್ತೊಂದೆಡೆ, ಅವರು ಮೊದಲ ಸಂಬಳವಾಗಿ ಕೇವಲ 500 ರೂಪಾಯಿಗಳನ್ನು ಪಡೆದರು.  ಈ ವರ್ಷ ಬಂದ ಅವರ 5 ಚಿತ್ರಗಳಲ್ಲಿ 2 ಮಾತ್ರ ಹಿಟ್ ಆಗಿವೆ. 

ಇತ್ತೀಚೆಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂದರೆ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಂಭಾವನೆ 1000 ರೂ ಆಗಿತ್ತು ಎಂದು ಬಹಿರಂಗಪಡಿಸಿದ್ದರು.

click me!