ಶಾರುಖ್ ಖಾನ್ ಜೊತೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರಾ ಕಾಜೋಲ್‌?

Published : Dec 07, 2022, 05:35 PM IST

ಕಾಜೋಲ್ (Kajol) ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ಸಲಾಂ ವೆಂಕಿಯ ಪ್ರಚಾರದಲ್ಲಿದ್ದಾರೆ. ನಿರ್ದೇಶಕಿ ರೇವತಿ ಅವರ ಈ ಚಿತ್ರ ಡಿಸೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ನಡುವೆ ಸಂದರ್ಶನದಲ್ಲಿ, ಕಾಜೋಲ್ ತಮ್ಮ ನೆಚ್ಚಿನ ಸಹನಟ ಶಾರುಖ್ ಖಾನ್ (Shah Rukh Khan) ಅವರೊಂದಿಗೆ ಮತ್ತೆ ಪರದೆಯನ್ನು ಹಂಚಿಕೊಳ್ಳುವ ವಿಷಯವನ್ನು ಬಹಿರಂಗ ಮಾಡಿದರು. ಶಾರುಖ್ ಜೊತೆ ಮತ್ತೆ ಸ್ಕ್ರೀನ್ ಶೇರ್ ಮಾಡುತ್ತೀರಾ ಎಂದು ಕೇಳಿದಾಗ, 'ಈಗ ಏನೂ ಇಲ್ಲ ಮತ್ತು ನನಗೆ ಗೊತ್ತಿಲ್ಲ. ಎಂದು ಹೇಳಿದರು. ಬಹುಶಃ ನಾವು ಅವರನ್ನೇ ಕೇಳಬೇಕು. ಆದರೆ, ಶಾರುಖ್ ಜೊತೆ ಮತ್ತೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

PREV
17
ಶಾರುಖ್ ಖಾನ್ ಜೊತೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರಾ ಕಾಜೋಲ್‌?

ಕಾಜೋಲ್-ಶಾರುಖ್ ಖಾನ್  ಬಾಲಿವುಡ್‌ನ ಸಖತ್‌ ಫೇವರೇಟ್‌ ಆನ್‌ ಸ್ಕ್ರೀನ್‌ ಜೋಡಿಗಳಲ್ಲಿ ಒಂದು. 2015 ರಲ್ಲಿ ರೋಹಿತ್ ಶೆಟ್ಟಿ ಅವರ ದಿಲ್ವಾಲೆ ಚಿತ್ರದಲ್ಲಿ ಇಬ್ಬರೂ ಕೊನೆಯ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು.

27

ಕಾಜೋಲ್ ಮತ್ತು ಶಾರುಖ್ ಖಾನ್ ಅವರನ್ನು ಅಭಿಮಾನಿಗಳು ಪರದೆ ಮೇಲೆ ನೋಡಲು ಇಷ್ಟಪಡುತ್ತಾರೆ. ಬಾಜಿಗರ್ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

37

ಇದಾದ ನಂತರ ಇಬ್ಬರೂ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್, ಮೈ ನೇಮ್ ಈಸ್ ಖಾನ್, ದಿಲ್ವಾಲೆ ಚಿತ್ರಗಳಲ್ಲಿ ಕಾಣಿಸಿಕೊಂಡರು.  

47

ಈ ನಡುವೆ ಕಾಜೋಲ್ ನೀಡಿದ ಸಂದರ್ಶನದಿಂದ ಅವರು ಮತ್ತೆ ಶಾರುಖ್ ಅವರೊಂದಿಗೆ ತೆರೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಸ್ಪಷ್ಟವಾಗಿದೆ.

57

ಅಜಯ್ ದೇವಗನ್ ಅವರನ್ನು ಮದುವೆಯಾದ ನಂತರ ಕಾಜೋಲ್ ಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ತಾಯಿಯಾದ ನಂತರ ಅವರು ಬಹುಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗಲೂ, ಕಾಜೋಲ್ ವರ್ಷಕ್ಕೆ ಒಂದೇ ಒಂದು ಚಿತ್ರ ಮಾಡುತ್ತಾರೆ, ಉಳಿದ ಸಮಯವನ್ನು ಅವರು ತಮ್ಮ ಕುಟುಂಬದೊಂದಿಗೆ ಕಳೆಯಲು ಇಷ್ಟಪಡುತ್ತಾರೆ.
 

67

ಕಾಜೋಲ್ ಅವರು ಪ್ರಸ್ತುತ ರೇವತಿ ಅವರ ಚಿತ್ರ ಸಲಾಮ್ ವೆಂಕಿ ಕಾರಣದಿಂದ ಚರ್ಚೆಯಲ್ಲಿದ್ದಾರೆ. ಚಿತ್ರದಲ್ಲಿ ವಿಶಾಲ್ ಜೇತ್ವಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ.ಇವರಲ್ಲದೆ, ಚಿತ್ರದಲ್ಲಿ ರಾಹುಲ್ ಬೋಸ್, ಅಹಾನಾ ಕುಮ್ರಾ, ರಾಜೀವ್ ಖಂಡೇಲ್ವಾಲ್ ಕೂಡ ನಟಿಸಿದ್ದಾರೆ. 

77

ಇದೇ ಚಿತ್ರದಲ್ಲಿ ಆಮೀರ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿಯಿಂದ ಬಳಲುತ್ತಿರುವ ಮಗ (ವಿಶಾಲ್) ಬದುಕಲು ತನ್ನಿಂದಾಗುವ ಎಲ್ಲವನ್ನೂ ಮಾಡುವ ಕಾಜೋಲ್ ಪಾತ್ರದಲ್ಲಿ ನಟಿಸಿದ ತಾಯಿಯ ನೈಜ ಕಥೆಯ ಸುತ್ತ ಈ ಚಲನಚಿತ್ರವನ್ನು ಹೆಣೆಯಲಾಗಿದೆ. ಸಲಾಮ್ ವೆಂಕಿ ಡಿಸೆಂಬರ್ 9 ರಂದು ಬಿಡುಗಡೆಯಾ

Read more Photos on
click me!

Recommended Stories