Inspirational Real Story: ಹಣಕ್ಕಾಗಿ ರೈಲಿನಲ್ಲಿ ಹಾಡುತ್ತಿದ್ದರು ಬಾಲಿವುಡ್‌ನ ಈ ಟಾಪ್‌ ನಟ!

Published : Sep 14, 2022, 05:38 PM IST

ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ಮತ್ತು ಹ್ಯಾಂಡ್‌ಸಮ್‌ ನಟ ಆಯುಷ್ಮಾನ್ ಖುರಾನಾ (Ayushmann Khurrana) ಅವರ ಜನ್ಮದಿನ ಇಂದು ಅಂದರೆ ಸೆಪ್ಟೆಂಬರ್ 14 ರಂದು. ಅವರು ತಮ್ಮ ಮಧುರ ಧ್ವನಿ ಮತ್ತು ಸ್ಟ್ರಾಂಗ್‌ ನಟನೆಗೆ ಹೆಸರುವಾಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಭಾವುಕರಾಗಿ ನಟ ತಮ್ಮ ಹೋರಾಟದ ದಿನಗಳ ಬಗ್ಗೆ ಮಾತನಾಡಿದರು. ಇವರ ಜೀವನಕ್ಕೆ ಸಂಬಂಧಿಸಿದ ಕೇಳಿರದ ರಹಸ್ಯಗಳು ಇಲ್ಲಿವೆ.

PREV
17
Inspirational Real Story: ಹಣಕ್ಕಾಗಿ ರೈಲಿನಲ್ಲಿ ಹಾಡುತ್ತಿದ್ದರು ಬಾಲಿವುಡ್‌ನ ಈ ಟಾಪ್‌ ನಟ!

ಆಯುಷ್ಮಾನ್ ಖುರಾನಾ ಅವರು ತಮ್ಮ 'ಮೇರಿ ಪ್ಯಾರಿ ಬಿಂದು' ಚಿತ್ರದ 'ಯೇ ಜವಾನಿ ತೇರಿ' ಹಾಡಿನ ಬಿಡುಗಡೆ ಸಮಾರಂಭದಲ್ಲಿ ಅವರ ಹೋರಾಟದ ಕಥೆಯನ್ನು ಹಂಚಿಕೊಂಡಿದ್ದಾರೆ.
 

27

ದೆಹಲಿಯಿಂದ ಮುಂಬೈ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಮಿಮಿಕ್ರಿ ಮಾಡುತ್ತಿದ್ದರು ಮತ್ತು  ಅವರು ತಮ್ಮ ಕಾಲೇಜು ದಿನಗಳಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು  ನಟ ಈ ಸಮಯದಲ್ಲಿ ಹೇಳಿದ್ದರು.

37

ಕಾಲೇಜು ದಿನಗಳಲ್ಲಿ ನಾನು ಸಾಕಷ್ಟು ಥಿಯೇಟರ್, ಲೈವ್ ಶೋ, ಬೀದಿ ನಾಟಕಗಳನ್ನು ಮಾಡುತ್ತಿದ್ದೆ. ಹಾಗಾಗಿ ಹುಡುಗಿಯರ ಹಿಂದೆ ಓಡಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾವು ರೈಲಿನಲ್ಲಿ ಹಾಡುತ್ತಿದ್ದೆವು ಮತ್ತು ಮಿಮಿಕ್ರಿ ಮಾಡುತ್ತಿದ್ದೆವು ಎಂದು ನಾನು ಹಂಚಿಕೊಳ್ಳಲು ಬಯಸುತ್ತೇನೆ' ಎಂದಿದ್ದಾರೆ ನಟ.

47

ನನ್ನ ಕಾಲೇಜು ದಿನಗಳಲ್ಲಿ ದೆಹಲಿಯಿಂದ ಮುಂಬೈಗೆ ಹೋಗುತ್ತಿದ್ದ ‘ಪಶ್ಚಿಮ್ ಎಕ್ಸ್ ಪ್ರೆಸ್’ ಹೆಸರಿನ ರೈಲು ಇತ್ತು. ಇದರಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದೆ. ಪ್ರಯಾಣಿಕರಿಗೆ ಮನರಂಜನೆ ನೀಡಲು ಈ ರೈಲಿನಲ್ಲಿ ಪ್ರತಿ ಕೋಚ್‌ಗೆ ಹೋಗುತ್ತಿದ್ದೆವು. ಅಲ್ಲಿ ಅ ಹಾಡುಗಳನ್ನು ಹಾಡುತ್ತಿದ್ದೇವು ಪ್ರಯಾಣಿಕರು ನಾವು ಸಂಗ್ರಹಿಸುವ ಹಣವನ್ನು ನಮಗೆ ನೀಡುತ್ತಿದ್ದರು'ಎಂದು  ಹೇಳಿಕೊಂಡಿದ್ದರು ಆಯಷ್ಮಾನ್‌ ಖುರಾನಾ.
 

57

ಇದರಿಂದ ನಾವು ತುಂಬಾ ಸಂಪಾದಿಸುತ್ತಿದ್ದೆವು ಮತ್ತು ನಮ್ಮ ಗೋವಾ ಪ್ರವಾಸವನ್ನು ಉತ್ತಮ ರೀತಿಯಲ್ಲಿ ಪ್ರಾಯೋಜಿಸಲು ಸಾಧ್ಯವಾಯಿತು. ನಾನು ಟ್ರೈನ್ ಸಿಂಗರ್ ಅಂತ ಹೇಳಿದರೆ ತಪ್ಪಾಗುವುದಿಲ್ಲ ಎಂದು ಸಂದರ್ಶನದಲ್ಲಿ ಖುರಾನಾ ಹೇಳಿದ್ದರು.

67

ಆಯುಷ್ಮಾನ್ ಖುರಾನಾ ಅವರು ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನವನ್ನು ಹಂಚಿಕೊಂಡಿದ್ದಾರೆ. ಇವರು ಉತ್ತಮ ಗಾಯಕರಾಗಿ, ಮಿಮಿಕ್ರಿ ಕಲಾವಿದರಾಗಿ, ಕಂಠದಾನ ಕಲಾವಿದರಾಗಿ, ಗೀತರಚನೆಕಾರರಾಗಿ,ನಟರಾಗಿ ಚಿರಪರಿಚಿತರು.


 

77

ಆಯುಷ್ಮಾನ್ ಖುರಾನಾ ಹೀರೋ ಆಗಲು ಮುಂಬೈಗೆ ಹೋದಾಗ, ಅವರು ತಮ್ಮ ಅಡುಗೆಯವರನ್ನು ಮುಂಬೈಗೆ ಕರೆತಂದರು. ವಾಸ್ತವವಾಗಿ, ಅವರು ಆಹಾರದ ವಿಷಯದಲ್ಲಿ ತುಂಬಾ  ಕಟ್ಟುನಿಟ್ಟು. ಒಂದೇ ರೂಮ್‌ ಇದ್ದ ಕಾರಣ ಅವರು ಮತ್ತು ಅವರ ಅಡುಗೆಯವರು  ಒಂದೇ ಕೋಣೆಯಲ್ಲಿ ಮಲಗಿದ್ದರು.

Read more Photos on
click me!

Recommended Stories