ಈ ಕಾರಣಕ್ಕಾಗಿ ಆಲಿಯಾ ಭಟ್‌ ಪತಿ ರಣಬೀರ್ ಕಪೂರ್‌ ಮೇಲೆ ಅಸಮಾಧಾನಗೊಳ್ತಾರಂತೆ

Published : Jul 25, 2022, 06:00 PM ISTUpdated : Jul 25, 2022, 06:02 PM IST

ಬಾಲಿವುಡ್ ನಟಿ ಆಲಿಯಾ ಭಟ್  (Alia Bhatt)  ತಮ್ಮ ಮುಂಬರುವ ಚಿತ್ರ 'ಡಾರ್ಲಿಂಗ್ಸ್' (Darlings) ಮೂಲಕ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ನಟಿ ಚೊಚ್ಚಲ ನಿರ್ಮಾಣ ಉದ್ಯಮವನ್ನು ಶಾರುಖ್ ಖಾನ್ (Shahrukh Khan) ಅವರ 'ರೆಡ್ ಚಿಲ್ಲಿಸ್ ಸಹ-ನಿರ್ಮಾಣ ಮಾಡುತ್ತಿದೆ.ಈ ಸಂಧರ್ಭದಲ್ಲಿ ಆಲಿಯಾ ತಮ್ಮ ಪತಿ ರಣಬೀರ್‌ ಕಪೂರ್‌ (Ranbir Kapoor)ಬಗ್ಗೆ ಶಾಕಿಂಗ್‌ ವಿಷಯವನ್ನು ಬಹಿರಂಗಪಡಿಸಿದ್ದಾರೆ.

PREV
19
ಈ ಕಾರಣಕ್ಕಾಗಿ ಆಲಿಯಾ ಭಟ್‌ ಪತಿ ರಣಬೀರ್ ಕಪೂರ್‌ ಮೇಲೆ ಅಸಮಾಧಾನಗೊಳ್ತಾರಂತೆ

'ಡಾರ್ಲಿಂಗ್ಸ್'  ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ, ಆಲಿಯಾ ಒಂದು ವಿಷಯವನ್ನು ಬಹಿರಂಗಪಡಿಸಿದರು. ಅವರು ಪತಿ ರಣಬೀರ್ ಕಪೂರ್ ಬಗ್ಗೆ ಹೆಚ್ಚು ಅಸಮಾಧಾನವನ್ನು ಉಂಟುಮಾಡಬಹುದಾದ ವಿಷಯವನ್ನು ರೀವಿಲ್‌ ಮಾಡಿದ್ದಾರೆ.

29

ಈವೆಂಟ್‌ನಲ್ಲಿ ಮಾತನಾಡಿದ ಆಲಿಯಾ ಭಟ್, ತನ್ನ ನಿರ್ಮಾಣದ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್' ಮೂಲಕ 'ಡಾರ್ಲಿಂಗ್ಸ್' ನಿರ್ಮಾಣ ಮಾಡುತ್ತಿರುವ ಆಲಿಯಾ ಭಟ್ ಅವರು ರಣಬೀರ್ ಕಪೂರ್ ಅವರ ಚೊಚ್ಚಲ ನಿರ್ದೇಶನದ ಚಿತ್ರವನ್ನು ನಿರ್ಮಿಸಲು ಇಷ್ಟಪಡುತ್ತೇನೆ ಆದರೆ ಅವರು ಭಾಗವಾಗಲು ಪತಿ ರಣಬೀರ್‌ ನಿರಾಕರಿಸಿದರೆ  ತುಂಬಾ ಅಸಮಾಧಾನ ಉಂಟು ಮಾಡುತ್ತದೆ ಎಂದು ಹೇಳಿದರು. 

39

ಇತ್ತೀಚೆಗಷ್ಟೇ ‘ಶಂಶೇರಾ’ ಚಿತ್ರದ ಪ್ರಚಾರದ ವೇಳೆ ರಣಬೀರ್ ಕಪೂರ್ ಅವರು ಚಲನಚಿತ್ರ ನಿರ್ದೇಶಿಸುವ ಬಯಕೆಯನ್ನು ತೋರಿಸಿದ್ದರು.  ಅವರ ನಿರ್ದೇಶನದ ಚೊಚ್ಚಲ ಚಿತ್ರಕ್ಕಾಗಿ ಅವರು ಈಗಾಗಲೇ ಕಥೆಯನ್ನು ಬರೆದಿದ್ದಾರೆ ಮತ್ತು ಬರಹಗಾರರನ್ನು ಹುಡುಕುತ್ತಿದ್ದಾರೆ ಎಂದು ಅವರು ಹೇಳಿದರು.

49

ರಣಬೀರ್ ಕಪೂರ್ ಅವರ ಚೊಚ್ಚಲ ನಿರ್ದೇಶನದ ನಿರ್ಮಾಣದ ಯೋಜನೆಯಲ್ಲಿ ನೀವು ಇದ್ದೀರಾ ಎಂದು ಆಲಿಯಾ ಭಟ್ ಅವರನ್ನು ಕೇಳಿದಾಗ,  'ನಾವು ಅದನ್ನು ಚರ್ಚಿಸಿದ್ದೇವೆ, ವಾಸ್ತವವಾಗಿ,  ಅದನ್ನು ನಿರ್ಮಿಸುವ ಅವಕಾಶ ನನಗೆ ನೀಡದಿದ್ದರೆ, ನಾನು ತುಂಬಾ ಅಸಮಾಧಾನಗೊಳ್ಳುತ್ತೇನೆ ಎಂದು ನಾನು ಅವರಿಗೆ ಹೇಳಿದ್ದೇನೆ ಎಂದು ಆಲಿಯಾ ಹೇಳಿದ್ದಾರೆ.

59

'ನನ್ನನ್ನು ನಟಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಅದು ಸಂಪೂರ್ಣವಾಗಿ ಒಳ್ಳೆಯದು ಎಂದು ನಾನು ಅವರಿಗೆ ಹೇಳಿದೆ,  ಆದರೆ ಇಲ್ಲ, ನನಗೆ ನೀನು ಬೇಕು, ನೀನು ರೂಲರ್‌' ಎಂದು ಹೇಳಿದ್ದಾರೆ' ಎಂದು ಅಲಿಯಾ ಬಹಿರಂಗ ಪಡಿಸಿದ್ದಾರೆ.

69

'ನನ್ನನ್ನು ನಟಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಅದು ಸಂಪೂರ್ಣವಾಗಿ ಒಳ್ಳೆಯದು ಎಂದು ನಾನು ಅವರಿಗೆ ಹೇಳಿದೆ,  ಆದರೆ ಇಲ್ಲ, ನನಗೆ ನೀನು ಬೇಕು, ನೀನು ರೂಲರ್‌' ಎಂದು ಹೇಳಿದ್ದಾರೆ' ಎಂದು ಅಲಿಯಾ ಬಹಿರಂಗ ಪಡಿಸಿದ್ದಾರೆ.

79

ನೆಟ್‌ಫ್ಲಿಕ್ಸ್ ಈ ಚಲನಚಿತ್ರವು ಆಗಸ್ಟ್ 5 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಮುಂಬೈ-ಸೆಟ್ ಡಾರ್ಕ್ ಕಾಮಿಡಿಯಲ್ಲಿ ನಟರಾದ ಶೆಫಾಲಿ ಶಾ, ವಿಜಯ್ ವರ್ಮಾ ಮತ್ತು ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

89

'ಡಾರ್ಲಿಂಗ್ಸ್' ಆಲಿಯಾ ಭಟ್ ಅವರ 2022 ರ ವರ್ಷದ ಮೂರನೇ ಬಿಡುಗಡೆಯಾಗಿದೆ. ಇದಕ್ಕೂ ಮೊದಲು, ಅವರು ಸಂಜಯ್ ಲೀಲಾ ಬನ್ಸಾಲಿ ಅವರ 'ಗಂಗೂಬಾಯಿ ಕಥಿವಾಡಿ' ಮತ್ತು ಎಸ್‌ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್" ನಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 

99

ಪ್ರಸ್ತುತ, ಆಲಿಯಾ ಭಟ್ ಹಾಲಿವುಡ್‌ನ ಮೊದಲ ಪ್ರಾಜೆಕ್ಟ್ 'ಹಾರ್ಟ್ ಆಫ್ ಸ್ಟೋನ್', ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮತ್ತು ಫರ್ಹಾನ್ ಅಖ್ತರ್ ಅವರ 'ಜೀ ಲೇ ಜರಾ' ಸಿನಿಮಾಗಳನ್ನು ಅವರ ಆಕೌಂಟ್‌ನಲ್ಲಿ ಹೊಂದಿದ್ದಾರೆ.

Read more Photos on
click me!

Recommended Stories