ಕತ್ರಿನಾ ಕೈಫ್ - ವಿಕ್ಕಿ ಕೌಶಲ್ ದಂಪತಿಗೆ ಕೊಲೆ ಬೆದರಿಕೆ: ದೂರ ದಾಖಲು

Published : Jul 25, 2022, 04:41 PM IST

ಬಾಲಿವುಡ್ ಸೆಲೆಬ್ರಿಟಿಗಳಿಗೆ ಕೊಲೆ ಬೆದರಿಕೆ ಬರುತ್ತಿರುವುದು ಈಗೀಗ ಕಾಮನ್ ಆಗುತ್ತಿವೆ. ಸಲ್ಮಾನ್ ಖಾನ್‌ ನಂತರ ಇದೀಗ ಕತ್ರಿನಾ ಕೈಫ್ (Katrina Kaif)  ಮತ್ತು ಆಕೆಯ ಪತಿ ವಿಕ್ಕಿ (Vicky Kaushal) ಕೌಶಲ್‌ಗೂ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಬಂದಿದೆ. ಈ ಸಂಬಂಧ ದಂಪತಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮತ್ತು ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

PREV
16
ಕತ್ರಿನಾ ಕೈಫ್ - ವಿಕ್ಕಿ ಕೌಶಲ್  ದಂಪತಿಗೆ ಕೊಲೆ ಬೆದರಿಕೆ: ದೂರ ದಾಖಲು

ವ್ಯಕ್ತಿಯೊಬ್ಬ ಕತ್ರಿನಾಳನ್ನು ಬಹಳ ಸಮಯದಿಂದ ಸಾಮಾಜಿಕ ಮಾಧ್ಯಮದಲ್ಲಿ ಅನುಸರಿಸುತ್ತಿದ್ದ. ಅಶ್ಲೀಲ ಕಾಮೆಂಟ್‌ಗಳನ್ನೂ ಕಳುಹಿಸುತ್ತಿದ್ದ. ವಿಕ್ಕಿ ಕೌಶಲ್ ಆ ವ್ಯಕ್ತಿಯ ಮನವೊಲಿಸಲು ಪ್ರಯತ್ನಿಸಿದಾಗ, ಅವರು ಒಪ್ಪಲಿಲ್ಲ ಮತ್ತು ಇದಕ್ಕೆ ವಿರುದ್ಧವಾಗಿ ದಂಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದ.

 

26

ಮಾಧ್ಯಮ ವರದಿಗಳ ಪ್ರಕಾರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಸಾಮಾಜಿಕ ಜಾಲತಾಣಗಳ (Social Media) ಮೂಲಕ ದಂಪತಿಗೆ ಈ ಬೆದರಿಕೆ ಬಂದಿದೆ.

36

ಒಬ್ಬ ವ್ಯಕ್ತಿ ಕತ್ರಿನಾ ಕೈಫ್‌ ಅವರನ್ನು ಬಹಳ ಸಮಯದಿಂದ ಸ್ಟಾಕ್‌ ಮಾಡುತ್ತಿದ್ದನು .ಆದರೆ, ಆತ ಕತ್ರಿನಾರನ್ನು ಹೇಗೆ ಸ್ಟಾಕ್‌ ಮಾಡುತ್ತಿದ್ದ ಮತ್ತು ಸಂದೇಶ ಕಳುಹಿಸುತ್ತಿದ್ದ ಎಂಬುವುದು ಬಹಿರಂಗವಾಗಿಲ್ಲ. 

46

ಕತ್ರಿನಾ ಮತ್ತು ತನ್ನನ್ನು ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿದ ನಂತರ ಬೆದರಿಕೆ ಹಾಕಿದ್ದಾರೆ ಎಂದು ವಿಕ್ಕಿ ಕೌಶಲ್ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

56

ಕತ್ರಿನಾ ಕೈಫ್ ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲಿ ತಮ್ಮ 39ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಹುಟ್ಟು ಹಬ್ಬದ ಆಚರಣೆಯ  ಹಲವು ಫೋಟೋಗಳನ್ನು ದಂಪತಿ ತಮ್ಮ ತಮ್ಮ ಇನ್‌ಸ್ಟಾಗ್ರಾಮ್‌ಗಳಲ್ಲಿ ಹಂಚಿಕೊಂಡಿದ್ದಾರೆ.

66

ಕಬೀರ್ ಖಾನ್, ಮಿನಿ ಮಾಥುರ್, ಸನ್ನಿ ಕೌಶಲ್, ಕತ್ರಿನಾ ಅವರ ಸಹೋದರ-ಸಹೋದರ ಮತ್ತು ಇತರ ಕೆಲವು ಸ್ನೇಹಿತರು ಸಹ ಆಚರಣೆಯಲ್ಲಿ ಭಾಗವಹಿಸಿದ್ದರು. ಕತ್ರಿನಾ ಕೈಫ್‌ ಮುಂದಿನ ದಿನಗಳಲ್ಲಿ ಟೈಗರ್ 3, ಫೋನ್ ಭೂತ್ ಮತ್ತು ಮೆರ್ರಿ ಕ್ರಿಸ್‌ಮಸ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories