ಫ್ಯಾಮಿಲಿ ಜೊತೆ ಗರ್ಲ್‌ಫ್ರೆಂಡ್‌ ಯುಲಿಯಾ ಬರ್ತ್‌ಡೇಗೆ ಸಲ್ಮಾನ್‌ ಖಾನ್‌ ಹಾಜರು!

Published : Jul 25, 2022, 05:20 PM IST

ರೊಮೇನಿಯನ್ ಮಾಡೆಲ್ ಮತ್ತು ನಟಿ ಮತ್ತು ಸಲ್ಮಾನ್ ಖಾನ್ (Salamn Khan) ಅವರ ರೂಮರ್ಡ್‌ ಗರ್ಲ್‌ಫ್ರೆಂಡ್‌ ಯುಲಿಯಾ ವಂಟೂ (Lulia Vantur) ಜುಲೈ 24 ರ ಭಾನುವಾರದಂದು ತಮ್ಮ 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ತಮ್ಮ ಆಪ್ತರಿಗೆ ಪಾರ್ಟಿ ನೀಡಿದ್ದು, ಅದರಲ್ಲಿ ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬದ ಕೆಲವರೂ ಕಾಣಿಸಿಕೊಂಡಿದ್ದಾರೆ. ಫೋಟೂಗಳು ಸಖತ್‌ ವೈರಲ್‌ ಆಗುತ್ತಿವೆ.

PREV
16
ಫ್ಯಾಮಿಲಿ ಜೊತೆ ಗರ್ಲ್‌ಫ್ರೆಂಡ್‌  ಯುಲಿಯಾ  ಬರ್ತ್‌ಡೇಗೆ  ಸಲ್ಮಾನ್‌ ಖಾನ್‌ ಹಾಜರು!

ಈ  ಪಾರ್ಟಿಯಲ್ಲಿ ಸಲ್ಮಾನ್ ಅವರ ಸಹೋದರ ಸೋಹೈಲ್ ಖಾನ್, ಅವರ ಸೋದರ ಮಾವ ಆಯುಷ್ ಶರ್ಮಾ, ಸಲ್ಮಾನ್ ಅವರ ಅಂಗರಕ್ಷಕ ಶೇರಾ, ಗಾಯಕ ಪಾಯಲ್ ದೇವ್ ಮತ್ತು ವಸ್ತ್ರ ವಿನ್ಯಾಸಕಿ ಆಶ್ಲೇ ರೆಬೆಲ್ಲೊ ಸೇರಿದಂತೆ ಅನೇಕರು ಇದ್ದಾರೆ. 
 

26

ಸ್ವತಃ ಯೂಲಿಯಾ ಅವರ ಹುಟ್ಟುಹಬ್ಬದ ಆಚರಣೆ ಮತ್ತು ಕೇಕ್ ಕತ್ತರಿಸುವ ಸಮಾರಂಭದ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಯೂಲಿಯಾ ಅವರು ಸಲ್ಮಾನ್ ಖಾನ್‌ರ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.

36

'ನನ್ನ ಪ್ರೀತಿಯ ಜನರೇ, ನಾನು ಇಂದು ತುಂಬಾ ಸಂತೋಷವಾಗಿದ್ದೇನೆ. ಪ್ರೀತಿಸಲು ತುಂಬಾ ಸಂತೋಷವಾಗಿದೆ ಮತ್ತು ಈ ಪ್ರೀತಿಯನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಜೀವನದಲ್ಲಿ ಒಳ್ಳೆಯ ಜನರನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಸ್ನೇಹಿತರು, ನಾನು ಪ್ರೀತಿಸುವ ಕುಟುಂಬ, ನಾನು ನಂಬುವ ಈ ಜನರು. ನನ್ನ ಜನ್ಮದಿನವನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು ಗೆಳೆಯರೇ... ನಿಮ್ಮೆಲ್ಲರಿಗೂ ಬಹಳ ಪ್ರೀತಿ.' ಎಂದು  ವೀಡಿಯೊ ಜೊತೆ ಯೂಲಿಯಾ ಬರೆದಿದ್ದಾರೆ, 

46

 ಈ ಪಾರ್ಟಿಯ ಹೊರತಾಗಿ, ಸಲ್ಮಾನ್‌ ಅವರ ತಂಗಿ ಅರ್ಪಿತಾ ಪತಿ  ಆಯುಷ್ ಶರ್ಮಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಯುಲಿಯಾಗೆ ಶುಭ ಹಾರೈಸಿದ್ದಾರೆ. ನಿಮಗೆ ಜನ್ಮದಿನದ ಶುಭಾಶಯಗಳು ಯುಲಿಯಾ. ನೀವು ಯಾವಾಗಲೂ ನಗುತ್ತಿರಿ ಮತ್ತು ಸಂತೋಷವನ್ನು ಹಂಚಿಕೊಳ್ಳುತ್ತಿರಿ' ಎಂದು ಬರೆದಿದ್ದಾರೆ.

56

ಆಯುಷ್ ಹಂಚಿಕೊಂಡ ಚಿತ್ರದಲ್ಲಿ, ಸಲ್ಮಾನ್ ಯುಲಿಯಾ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು.ಕಳೆದ ಹಲವು ವರ್ಷಗಳಿಂದ ಸಲ್ಮಾನ್ ಮತ್ತು ಯುಲಿಯಾ ಸಂಬಂಧದ ಚರ್ಚೆ ನಡೆಯುತ್ತಿದೆ.

66

ಆದರೆ ಇಬ್ಬರೂ ಈ ಸಂಬಂಧವನ್ನು ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ.ಕುಟುಂಬ ಪಾರ್ಟಿಗಳು ಮತ್ತು ಸಮಾರಂಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇದಲ್ಲದೇ ಸಲ್ಮಾನ್ ಅಭಿನಯದ ‘ರಾಧೆ’ ಚಿತ್ರದ ‘ಸೀ ಮಾರ್’ ಹಾಡಿಗೂ ಯೂಲಿಯಾ ಧ್ವನಿ ನೀಡಿದ್ದಾರೆ.

Read more Photos on
click me!

Recommended Stories