ನಾಲ್ಕು ಸೆಕೆಂಡ್ ಹೀಗೆ ಕಾಣಿಸಿಕೊಂಡು ಚಿತ್ರರಂಗವನ್ನೇ ಶೇಕ್​ ಮಾಡಿದ್ದ Aishwarya Rai: ಆ ವಿಡಿಯೋ ವೈರಲ್​

Published : Nov 03, 2025, 01:42 PM IST

ನಟಿ ಐಶ್ವರ್ಯ ರೈ ಅವರು ಮಿಸ್ ಇಂಡಿಯಾ ಆಗುವ ಮುನ್ನ, ಆಮೀರ್ ಖಾನ್ ಜೊತೆಗಿನ ತಂಪು ಪಾನೀಯದ ಜಾಹೀರಾತಿನಲ್ಲಿ ಕೇವಲ ನಾಲ್ಕು ಸೆಕೆಂಡುಗಳ ಕಾಲ ಕಾಣಿಸಿಕೊಂಡಿದ್ದರು. 'ಸಂಜು' ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ಆಕೆ ರಾತ್ರೋರಾತ್ರಿ ಫೇಮಸ್​ ಆದರು. ಆ ವಿಡಿಯೋದಲ್ಲಿ ಏನಿದೆ? 

PREV
17
52ರ ಹರೆಯದಲ್ಲಿಯೂ ಚಾರ್ಮಿಂಗ್​ ತಾರೆ

ಇದೇ ನವೆಂಬರ್​ 1ರಂದು ನಟಿ ಐಶ್ವರ್ಯ ರೈ (Ashwarya Rai) 52 ವರ್ಷಗಳನ್ನು ಪೂರ್ಣಗೊಳಿಸಿದರು. ಅನಾರೋಗ್ಯ ಕಾರಣದಿಂದ ನಟಿಯ ತೂಕ ಏರಿಕೆ ಆಗಿರುವುದು ಬಿಟ್ಟರೆ, ಇದುವರೆಗೂ ಅದೇ ಚಾರ್ಮ್​ ಹಾಗೂ ಅಷ್ಟೇ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ ಈ ವಿಶ್ವ ಸುಂದರಿ. ಇಂದಿಗೂ ಸೌಂದರ್ಯದ ಬಗ್ಗೆ ಮಾತನಾಡುವವರು ಅವಳೇನು ಐಶ್ವರ್ಯ ರೈನಾ ಕೇಳುವಷ್ಟರದ ಮಟ್ಟಿಗೆ ಐಶ್ವರ್ಯ ಇಂದಿಗೂ ಅದೇ ವರ್ಚಸ್ಸನ್ನು ಉಳಿಸಿಕೊಂಡವರು.

27
ಚಿತ್ರರಂಗವೇ ತಲ್ಲಣ

ಆದರೆ, ಇದೀಗ ಅವರ ಆ ನಾಲ್ಕು ಸೆಕೆಂಡ್​ಗಳ ವಿಡಿಯೋ ಒಂದು ವೈರಲ್​ ಆಗಿದೆ. ಹೇಗೆ ಆ 4 ಸೆಕೆಂಡ್​ಗಳ ವಿಡಿಯೋ ಇಡೀ ಚಿತ್ರರಂಗವನ್ನೇ ತಲ್ಲಣಗೊಳಿಸಿ, ಐಶ್ವರ್ಯ ರೈ ಎನ್ನುವ ಬ್ಯೂಟಿಯನ್ನು ಸಿನಿ ಜಗತ್ತಿಗೆ ಪರಿಚಯಿಸಿತ್ತು.

37
ಜಾಹೀರಾತಿನ ವಿಡಿಯೋ

ಅಷ್ಟಕ್ಕೂ ಅದು 1990 ರ ದಶಕದ ಜಾಹೀರಾತಿನ ವಿಡಿಯೋ. ಅದರಲ್ಲಿ ನಟಿಸಿದ್ದು ಆಮೀರ್​ ಖಾನ್​ ಮತ್ತು ಬಾಲಿವುಡ್​ ನಟಿ ಮಹಿಮಾ ಪಟೇಲ್​. ಆಗಿನ್ನೂ ಐಶ್ವರ್ಯ ರೈ ಸಿನಿ ಜಗತ್ತಿಗೆ ಪರಿಚಯವೇ ಆಗಿರಲಿಲ್ಲ. ಅದು ತಂಪು ಪಾನೀಯದ ಜಾಹೀರಾತು.

47
ನಾಲ್ಕು ಸೆಕೆಂಡ್​ಗಳು...

ಜಾಹೀರಾತಿನಲ್ಲಿ ಆ ಕೋಲ್ಡ್​ಡ್ರಿಂಕ್ಸ್​ ಬಗ್ಗೆ ಆಮೀರ್ ಖಾನ್​ ಮತ್ತು ಮಹಿಮಾ ಪಟೇಲ್​ ಮಾತನಾತನಾಡುತ್ತಿರುವಾಗ ಐಶ್ವರ್ಯ ರೈ ಎಂಟ್ರಿಯಾಗುತ್ತದೆ. ಅವಳನ್ನು ನೋಡಿ ಆಮೀರ್​ ಖಾನ್​ ಸಂಜು ಎಂದು ಸಂಬೋಧಿಸುತ್ತಾನೆ. ಅಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದು ನಾಲ್ಕೇ ಸೆಕೆಂಡು ಅಷ್ಟೇ.

57
5 ಸಾವಿರ ಕರೆಗಳು

ಆದರೆ, ಈ ಜಾಹೀರಾತು ಬಿಡುಗಡೆಯಾಗುತ್ತಲೇ ಐದು ಸಾವಿರಕ್ಕೂ ಅಧಿಕ ಕರೆಗಳು ಈ ಸಂಜುವನ್ನು ವಿಚಾರಿಸಿ ಚಿತ್ರರಂಗದವರಿಂದ ಬಂದಿತ್ತಂತೆ. ಈ ಬಗ್ಗೆ ಜಾಹೀರಾತು ತಯಾರಕರಾಗಿರುವ ಪ್ರಹ್ಲಾದ್ ಕಕ್ಕರ್ ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. (ಅಂದಹಾಗೆ ಈ ಜಾಹೀರಾತು ಐಶ್ವರ್ಯಾ ರೈ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲುವ ಮೊದಲು ಬಿಡುಗಡೆಯಾಗಿತ್ತು).

67
ಪ್ರಹ್ಲಾದ್​ ಕುಕ್ಕರ್​ ನೆನಪು...

ಈ ಜಾಹೀರಾತು ಬಿಡುಗಡೆಯಾದ ದಿನವನ್ನು ನೆನಪಿಸಿಕೊಳ್ಳುತ್ತಾ, ಪ್ರಹ್ಲಾದ್ ಕಕ್ಕರ್, "ಜಾಹೀರಾತು ಬಿಡುಗಡೆಯಾದ ದಿನ, ಮರುದಿನ ಬೆಳಿಗ್ಗೆ ನನಗೆ 5,000 ಫೋನ್ ಕರೆಗಳು ಬಂದವು, 'ಸಂಜು ಯಾರು ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಅದರಲ್ಲಿಯೂ ಆಕೆಯ ಆಕರ್ಷಕ ಕಣ್ಣುಗಳು ಎಲ್ಲರವನ್ನೂ ಆಕರ್ಷಿಸಿದ್ದವರು ಎಂದಿದ್ದಾರೆ.

77
ಕಣ್ಣುಗಳ ಆಕರ್ಷಣೆ

ಒಂದೊಂದು ಭಾವನೆಯಲ್ಲಿಯೂ ಆಕೆಯ ಕಣ್ಣುಗಳ ಬಣ್ಣ ಒಂದೊಂದು ರಂಗನ್ನು ಪಡೆಯುತ್ತಿದ್ದವು. ಆ ಜಾಹೀರಾತಿನಲ್ಲಿ ಆಕೆಯನ್ನು ಆಯ್ಕೆ ಮಾಡಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಗೆಲುವಾಗಿತ್ತು. ಇಂದು ನಾನು ಈ ಮಟ್ಟದಲ್ಲಿ ಬೆಳೆದು ನಿಲ್ಲಲು ಐಶ್ವರ್ಯ ರೈ ಕಣ್ಣುಗಳೇ ಕಾರಣ. ಅದೇ ರೀತಿ, ಈ ಜಾಹೀರಾತಿನ ಬಳಿಕ ಇಡೀ ಬಾಲಿವುಡ್​ ತಲ್ಲಣಗೊಂಡಿತ್ತು. ಆ ಚೆಲುವೆಗಾಗಿ ನಿರ್ದೇಶಕರು ಕ್ಯೂ ನಿಂತಿದ್ದರು ಎನ್ನುವುದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ವಿಡಿಯೋ ಇಲ್ಲಿದೆ ನೋಡಿ

Read more Photos on
click me!

Recommended Stories