ನಟ ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು, ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಅನುಪಮ್ ಖೇರ್ ಅವರ ಶೋನಲ್ಲಿ 'ನಾನೇ ಕೊನೆಯ ಸ್ಟಾರ್' ಎಂದು ಹೇಳಿಕೊಂಡಿದ್ದು, ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಟ ಕಾರ್ತಿಕ್ ಆರ್ಯನ್ ಕೂಡ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಅರ್ಥಾತ್ ನವೆಂಬರ್ 2 ನಟ ಶಾರುಖ್ ಖಾನ್ ಅವರಿಗೆ 60ನೇ ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲಿ ಶಾರುಖ್ ಖಾನ್ ಅವರು ನನ್ನನ್ನು ಖ್ಯಾತಿ ಬೇರೆಯವರಿಗೆ ಸಿಗುವುದಿಲ್ಲ. ನಾನೇ ಕೊನೆಯ ಸ್ಟಾರ್ ಎಂದಿದ್ದಾರೆ!
26
ಬಿರುದು ಕೊಡೋರು ಯಾರು?
ಅಷ್ಟಕ್ಕೂ, ಸಿನಿ ತಾರೆಯರಿಗೆ ಕೆಲವೊಂದು ಬಿರುದುಗಳನ್ನು ಅವರ ಅಭಿಮಾನಿಗಳೇ ಕೊಡುತ್ತಾರೆ. ಅವು ಆ ನಟ ನಟಿಯರ ಜೊತೆಗೆ ಮಿಳಿತವಾಗಿ ಬಿಡುತ್ತವೆ. ಅದೇ ಹೆಸರಿನಿಂದ ಅವರು ಸದಾ ಕರೆಯಲ್ಪಡುತ್ತಾರೆ. ಆದರೆ ಕೆಲವೊಂದು ಬಿರುದುಗಳು ಒಬ್ಬರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವು ಕಾಲಕ್ಕೆ ತಕ್ಕಂತೆ ಬೇರೆ ಬೇರೆ ನಟ ನಟಿಯರಿಗೂ ಅನ್ವಯ ಆಗುತ್ತಾ ಹೋಗುತ್ತದೆ. ಅಂಥವುಗಳಲ್ಲಿ ಒಂದು ಇಂಥ ಸ್ಟಾರ್ ಪಟ್ಟ. ಅದರ ಬಗ್ಗೆ ಶಾರುಖ್ ಮಾತನಾಡಿರುವುದು ಚರ್ಚೆ ಹುಟ್ಟುಹಾಕಿದೆ.
36
ಶಾರುಖ್ ಮಾತು ಚರ್ಚೆಗೆ ಗ್ರಾಸ
ನಟ ಶಾರುಖ್ ಖಾನ್ ಅವರನ್ನು ಅಭಿಮಾನಿಗಳು ಸೂಪರ್ಸ್ಟಾರ್ ಎಂದು ಇತರ ಕೆಲವು ನಟರಿಗೆ ಕರೆದಂತೆ ಕರೆಯುತ್ತಾರೆ. ಆದರೆ ಕೆಲ ದಿನಗಳ ಹಿಂದೆ ಶಾರುಖ್ ಅವರು ತಾವೇ ಕೊನೆಯ ಸೂಪರ್ ಸ್ಟಾರ್ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಈಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಡಿಯೋ ವೈರಲ್ ಆಗುತ್ತಿದೆ.
ಇದು ಬಾಲಿವುಡ್ ನಟ ಅನುಪಮ್ ಖೇರ್ ಅವರ ಷೋನಲ್ಲಿ ಹೇಳಿದ ಮಾತು. ಅನುಪಮ್ ಖೇರ್ ಅವರು ಈ ಸ್ಟಾರ್ ಪಟ್ಟ ಬೇರೆಯವರು ಪಡೆದುಕೊಳ್ಳುತ್ತಾರೆ, ಬೇರೆ ನಾಯಕರ ಹೆಸರು ಚಾಲ್ತಿಯಲ್ಲಿ ಇರುತ್ತದೆ, ಆಗ ಏನು ಮಾಡುವುದು ಎಂಬ ಯೋಚನೆ ಬರುತ್ತದಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್ ಖಾನ್, ಒಂದು ವಿಷ್ಯ ಹೇಳಲಾ? ನಾನೇ ಕೊನೆಯ ಸ್ಟಾರ್. ನನ್ನನ್ನು ಖ್ಯಾತಿ ಬೇರೆಯವರಿಗೆ ಸಿಗುವುದಿಲ್ಲ ಎಂದಿದ್ದಾರೆ (ಇದರ ವಿಡಿಯೋ ಲಿಂಕ್ ಕೊನೆಯಲ್ಲಿ ಇದೆ)
56
ಪರ-ವಿರೋಧದ ನಿಲುವು
ಶಾರುಖ್ ಅವರ ಈ ಮಾತಿಗೆ ಇದಾಗಲೇ ಹಲವರು ಪರ-ವಿರೋಧದ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಟ ಕಾರ್ತಿಕ್ ಆರ್ಯನ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಾರ್ತಿಕ್ ಅವರಿಗೆ ಶಾರುಖ್ ಅವರ ಈ ಮಾತಿನ ಬಗ್ಗೆ ಪ್ರಶ್ನಿಸಲಾಗಿತ್ತು.
66
ಟಾಂಗ್ ಕೊಟ್ಟ ಕಾರ್ತಿಕ್ ಆರ್ಯನ್
ಆಗ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದ ಕಾರ್ತಿಕ್ ಅವರು, 'ನಾನು ಯಾರೊಂದಿಗೂ ಹೋಲಿಕೆ ಮಾಡಲು ಇಷ್ಟಪಡುವುದಿಲ್ಲ. ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ನಾನು ಶಾರುಖ್ ಅಭಿಮಾನಿ ಎನ್ನುತ್ತಲೇ ಸೂಪರ್‌ಸ್ಟಾರ್‌ಗಳನ್ನು ಸಾರ್ವಜನಿಕರು ಮಾಡುತ್ತಾರೆ. ನಮ್ಮನ್ನು ನಾವೇ ಸೂಪರ್ಸ್ಟಾರ್ ಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ಬಗ್ಗೆ ನಾನು ಏನೂ ಹೇಳುವುದಿಲ್ಲ' ಎಂದಿದ್ದರು.