ರಾಯಲ್‌ ಫ್ಯಾಮಿಲಿಯ ಈ ನಟಿಯ ಮಿಸ್ಟಿರಿಯಸ್‌ ಲೈಫ್‌!

First Published | Oct 30, 2021, 4:43 PM IST

ರಣವೀರ್ ಸಿಂಗ್  (Ranveer Singh) ಜೊತೆ  'ಪದ್ಮಾವತಿ' (Padmavat) ಸಿನಿಮಾದಲ್ಲಿ ಮೆಹರ್ ಉನ್ನೀಸಾ ಪಾತ್ರದಲ್ಲಿ ಗಮನ ಸೆಳೆದ ನಟಿ ಅದಿತಿ ರಾವ್ ಹೈದರಿ (Aditi Rao Hydari) ಅವರಿಗೆ  35 ವರ್ಷ. ಅಕ್ಟೋಬರ್ 28, 1986 ರಂದು, ಹೈದರಾಬಾದ್‌ನ ರಾಯಲ್ ಕುಟುಂಬದಲ್ಲಿ ಜನಿಸಿದ ಅದಿತಿಯ ಪರ್ಸನಲ್‌ ಲೈಫ್‌ ಮಿಸ್ಟಿರಿಯಸ್‌.ಇವರ ವೈಯಕ್ತಿಕ ಜೀವನದ ಬಗ್ಗೆ ಹೆಷ್ಷು ತಿಳಿದಿಲ್ಲ. ವರದಿಗಳ ಪ್ರಕಾರ, ಅದಿತಿ ಅವರಿಗೆ 21ನೇ ವಯಸ್ಸಿನಲ್ಲಿಯೇ ಮದುವೆ ಆಗಿತ್ತು. 4 ವರ್ಷಗಳ ನಂತರ ಅವರ 25ನೇ ವಯಸ್ಸಿನಲ್ಲಿಯೇ ವಿಚ್ಛೇದನ ಪಡೆದುಕೊಂಡರು. ಆರಂಭದಲ್ಲಿ, ತಮ್ಮ ಡಿವೋರ್ಸ್ ವಿಷಯ ಮುಚ್ಚಿಟ್ಟಿದ್ದ ಅದಿತಿ ನಂತರ ಸ್ವತಃ ಅವರೇ ಅದನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಅದಿತಿ ಮದುವೆಯಾಗಿದ್ದು ಯಾರನ್ನಾ? ನಟಿಯ ಪರ್ಸನಲ್‌ ಲೈಫಿನ ಕೆಲವು ಮಾಹಿತಿಗಳಿಗಾಗಿ ಮುಂದೆ ಓದಿ.

ಮಾಧ್ಯಮಗಳ ಪ್ರಕಾರ,  ಅದಿತಿ 2009 ರಲ್ಲಿ ನಟ ಸತ್ಯದೀಪ್‌ ಮಿಶ್ರಾ (Satyadeep Mishra) ಅವರನ್ನು ವಿವಾಹವಾಗಿದ್ದರು. ಆ ಸಮಯದಲ್ಲಿ ಅದಿತಿಗೆ ಕೇವಲ 21 ವರ್ಷ ವಯಸ್ಸಾಗಿತ್ತು. ಅದಿತಿ 17 ವರ್ಷದವರಾಗಿದ್ದಾಗ, ಸತ್ಯದೀಪ್‌ ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
 

2012ರಲ್ಲಿ ಅವರು ಒಂದು ಸಂದರ್ಶನದಲ್ಲಿ ಅದಿತಿಯ ಮದುವೆಯ ಬಗ್ಗೆ ಕೇಳಿದಾಗ, ನಟಿ ಈ ಬಗ್ಗೆ  ಹೇಳಲು ನಿರಾಕರಿಸಿದ್ದರು. ನಂತರ, 2013 ರಲ್ಲಿ, ಸ್ವತಃ ಅದಿತಿ ಇಬ್ಬರೂ ವಿಚ್ಛೇದನ ಪಡೆದಿರುವುದಾಗಿ ತಿಳಿಸಿದರು

Tap to resize

ಸತ್ಯದೀಪ್‌ ಜೊತೆ ವಿಚ್ಛೇದನ ನಂತರ, ಅದಿತಿ ಹೆಸರು ನಟ ಫರ್ಹಾನ್ ಅಕ್ತರ್ ಜೊತೆ ಕೇಳಿ ಬಂದಿತ್ತು. ಫರಾನ್ ಅವರ ಪತ್ನಿಯಿಂದ ಬೇರೆಯಾಗುವುದಾಗಿ ಘೋಷಿಸಿದ ಸಮಯದಲ್ಲಿ ನಟನ ಹೆಸರು ಅದಿತಿ ಜೊತೆ ಲಿಂಕ್‌ ಆಗಿತ್ತು. ಈ ಸಮಯದಲ್ಲಿ 'ವಜಿರ್' ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೇ ಕೆಲಸ ಮಾಡಿದ್ದರು. ಆದರೆ, ನಂತರ ಅವರಿಬ್ಬರೂ ಈ ಸುದ್ದಿಯನ್ನು ನಿರಾಕರಿಸಿದ್ದರು.

ಇನ್ನು ತಾಯಿಯ ಕಡೆಗೆ ಬಂದರೆ ಅದಿತಿಯ ಅಜ್ಜ ರಾಜಾ ರಾಮೇಶ್ವರ ರಾವ್ ಹೈದರಾಬಾದ್ ನ ವಾನಪರ್ತಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದವ. ಇವರು ಶಿಕ್ಷಣ ತಜ್ಞರಾಗಿ ಹೆಸರು ಮಾಡಿದವರು. ಹೈದರಾಬಾದ್ ನ ಪ್ರತಿಷ್ಠಿತ ಬ್ಲ್ಯಾಕ್ ಸ್ವಾನ್ ಪಬ್ಲಿಷಿಂಗ್ ಹೌಸ್ ಸ್ಥಾಪಕರೂ ಹೌದು.

ಅದಿತಿ ರಾವ್ ಹೈದರಿ ಎರಡು ರಾಜ ಕುಟುಂಬಗಳ ಜೊತೆ ಸಂಬಂಧ ಹೊಂದಿದ್ದಾರೆ. ಮೊಹಮ್ಮದ್ ಸಾಹೇಲ್ ಅಕ್ಬರ್ ಹೈದರಿ ಮತ್ತು ರಾಜ ಜೆ.ರಾಮೇಶ್ವರ ರಾವ್ ಕುಟುಂಬಗಳಿಗೆ ಸೇರಿದವರಾಗಿದ್ದಾರೆ ಅದಿತಿ. 1941- 1869 ವರೆಗೆ ಹೈದರಾಬಾದ್ ಪ್ರಧಾನಿ ಆಗಿದ್ದ ಅಕ್ಬರ್ ಹೈದರಿ ಅವರ ಮರಿಮಗಳು ಅದಿತಿ.  

ಅಷ್ಟೇ ಅಲ್ಲ,  ಅದಿತಿ ಅಮೀರ್ ಖಾನ್ ಅವರ ಎಕ್ಸ್ ವೈಫ್ ಕಿರಣ್ ರಾವ್ ಕಸಿನ್‌ ಕೂಡ ಹೌದು. ಅದಿತಿ ಹಾಗೂ ಕಿರಣ್‌ ದಕ್ಷಿಣ ಕನ್ನಡ ಮೂಲದ ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ ಗಿರಿ ಮೊಮ್ಮಕ್ಕಳು.

ಅದಿತಿ  ತಂದೆಯ ಹೆಸರು ಎಹಾಸನ್‌ ಹೈದರಿ ಮತ್ತು ತಾಯಿ ವಿದ್ಯಾ ರಾವ್ ಆಗಿದೆ. ಅವರು ಎರಡು ವರ್ಷದವರಿದ್ದಾಗ ಅವರಿಬ್ಬರೂ ವಿಚ್ಛೇದನ  ಪಡೆದರು. ನಂತರ ತಾಯಿ ಬಳಿ ಉಳಿದ ನಟಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ್ದಾರೆ.

ಅದಿತಿ ಅವರ ಹೆತ್ತವರು ಲವ್‌ ಮ್ಯಾರೇಜ್‌ ಆಗಿದ್ದರು. ಆದರೆ ನಟಿ ಎರಡು ವರ್ಷದವರಿದ್ದಾಗ  ಅವರಿಬ್ಬರೂ ಬೇರೆಯಾದರು. ನಂತರ ಅವರ ತಾಯಿಯ ಜೊತೆ ದಿಲ್ಲಿಗೆ ಬಂದರು ಎಂದು  ಒಂದು ಸಂದರ್ಶನದಲ್ಲಿ ಅದಿತಿ  ತಿಳಿಸಿದರು. ಅದಿತಿ  ತಾಯಿ ಗಾಯಕರಾಗಿದ್ದರು.
 

ವಿಚ್ಛೇದನದ ನಂತರ, ಅದಿತಿ ರಾವ್ ಹೈದಾರಿ ಅವರನ್ನು ಅವರ ತಂದೆ ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಬಯಸಿದರು. ಆದರೆ ಅದಿತಿ ತನ್ನ ತಾಯಿ ಜೊತೆಯೇ ಇರಲು ಬಯಸಿದರು. ಅದಿತಿ ನಟಿ ಜೊತೆ, ಟ್ರೆಂಡ್ ಉದಾಹರಣೆಗಳು ಭರತನಾಟ್ಯ ಡ್ಯಾನ್ಸರ್‌ ಕೂಡ ಹೌದು. ಅವರು ಆರು ವರ್ಷದಲ್ಲಿ ಭರತನಾಟ್ಯ ಕಲಿಯಲು ಪ್ರಾರಂಭಿಸಿದರು. ಅದಿತಿ ಫೇಮಸ್‌ ಡ್ಯಾನ್ಸರ್ ಲೀಲಾ ಸ್ಯಾಮ್ಸನ್ ವಿದ್ಯಾರ್ಥಿನಿ.

ಅದಿತಿ, ಅವರು 2006 ರಲ್ಲಿ ಮಲಯಾಳಂ ಚಿತ್ರ 'ಪ್ರಜಾಪತಿ' ನಿಂದ ವೃತ್ತಿಜೀವನವನ್ನು ಆರಂಭಿಸಿದರು. ಅದಿತಿ ಮೊದಲ ಹಿಂದಿ ಚಿತ್ರ 'ದೆಹಲಿ 6' ಆಗಿತ್ತು. ಈ ಚಿತ್ರದ ನಂತರ, ಅದಿತಿ ಅನೇಕ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅದಿತಿ ಅವರು ದೊಡ್ಡ ನಕ್ಷತ್ರಗಳು ನೂಕು ಇರಬಹುದು ತನ್ನ ನಟನಾ ಈ ಸಾಬೀತು ಪ್ರೇಕ್ಷಕರ ಹೊಂದಿದೆ.

ಅದಿತಿ ರಾವ್ ಪ್ರಕಾರ, 'ಇಂಡಸ್ಟ್ರಿಯಲ್ಲಿ ನನಗೆ ಯಾರು ಗಾಡ್‌ಫಾದರ್‌ ಇಲ್ಲ. ನಾನು ಏನಾದರೂ ಸಾಧನೆ ಮಾಡಲು ನಾನೇ ಸ್ವತಃ ಪರಿಶ್ರಮ ಪಡಬೇಕಿತ್ತು. ನನ್ನ ಸಿನಿಮಾ ಕೆರಿಯರ್‌ ದೊಡ್ಡ ಮಟ್ಟದಲ್ಲಿ ಶುರುವಾಗಿಲ್ಲ  ಆದರೆ ನಿಧಾನವಾಗಿ ಆದರೂ ನನ್ನ ಪರಿಚಯ ಬೆಳೆಸಿಕೊಳ್ಳುತ್ತಿದ್ದೇನೆ,' ಎಂದು ಅದಿತಿ ಹೇಳುತ್ತಾರೆ. 

Latest Videos

click me!