ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ ..
ಹೇಳಲಿ ಹೇಗೆ ತಿಳಿಯದಾಗಿದೆ
(ಮಿಲನ- 2007)
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
(ಮಿಲನ- 2007)
ಜೊತೆಜೊತೆಯಲಿ ಪ್ರೀತಿ ಜೊತೆಯಲಿ,
ನಡೆದಿದೆ ದಿನ, ಬಯಸಿ ಬಯಸಿ
ಸಿಹಿ ಸಿಹಿ ಸಿಹಿ, ಮಾತು ಸಿಹಿ ಸಿಹಿ
ನುಡಿದಿದೆ ಮನ, ಹರಸಿ ಹರಸಿ
(ವಂಶಿ 2008)
Puneeth Rajkumar
ಹೊಸ ಗಾನ ಬಜಾನ, ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ, ಸ್ಪೀಡಗಿದೆ ಜಮಾನ, ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ,
ನಿಧಾನವೇ ಪ್ರಧಾನ, ಆಧೆ ಸೇಫ್ ಪ್ರಯಾಣ
(ರಾಮ್ 2009)
ಶಿವ ಅಂತ ಹೋಗುತಿದ್ದೆ ರೋಡಿನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲ್ಲಿ
ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕ್ ನಲ್ಲಿ
ನೀ ಕಂಡೆ ಸೈಡಿನಲ್ಲಿ
(ಜಾಕಿ -2010)
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ,
(ಪರಮಾತ್ಮ -2011)
ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ರೀ
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರ್ಬಾರ್ದು ರೀ
(ಪರಮಾತ್ಮ -2011)
ಯಾಕ್ಕೋ ಹುಡ್ಗ ಮೈಯಾಗೆ ಹ್ಯಾಂಗೈತೆ
ನಾಕ್ಕೂ ಜನುಮ ಧಿಮಾಕು ನಿಂಗೈತೆ
ನಂದು ಧಾರವಾಡ ಹೆಚ್ಚಿಗಿ ಮಾತ್ ಬ್ಯಾಡ
ಮೊದ್ಲ ಥಳಿ ಕೆಟ್ಟೇತಿ ಹಂಗಾನ್ ಬ್ಯಾಡ
ಇಟ್ಟಿತ ಹುಚ್ಚು ಇಡಿಸಿದೆ ಮಗನ
(ದೊಡ್ಮನೆ ಹುಡುಗ -2016)
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೊ ರಾರಾಧಿಸೊ ರಾಜರತ್ನನು
(ರಾಜಕುಮಾರ -2017)