ಕತ್ರಿನಾರ flawless skin ಹಿಂದಿನ ರಹಸ್ಯ ಬಯಲು!

Suvarna News   | Asianet News
Published : Oct 30, 2021, 04:00 PM IST

ಈ ದಿನಗಳಲ್ಲಿ ಬಾಲಿವುಡ್‌ (Bollywood) ನಟಿ ಕತ್ರಿನಾ ಕೈಫ್‌ (Katrina Kaif) ಹೆಡ್‌ಲೈನ್‌ ನ್ಯೂಸ್‌ನಲ್ಲಿದ್ದಾರೆ.  ವರದಿಗಳ ಪ್ರಕಾರ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ. ಕತ್ರಿನಾ ಕೈಫ್ ಅವರಂತಹ ಪರ್ಫೆಕ್ಟ್‌ ಸ್ಕಿನ್‌ ಹೇಗೆ ಪಡೆಯುವುದು ಎಂದು ನೀವು ತಿಳಿದುಕೊಳ್ಳಬೇಕಾದರೆ ಕತ್ರಿನಾ ತಮ್ಮ flawless skinಗಾಗಿ ಅನುಸರಿಸುವ ಕೆಲವು ಹ್ಯಾಕ್ಸ್‌ ಇಲ್ಲಿವೆ.  ಮುಂದೆ ಓದಿ.  

PREV
17
ಕತ್ರಿನಾರ flawless skin ಹಿಂದಿನ ರಹಸ್ಯ ಬಯಲು!

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ವಿಕ್ಕಿ ಮತ್ತು ಕತ್ರಿನಾ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ; ಆದರೆ ನಟರ ಹತ್ತಿರದ ಮೂಲವು ಅವರು ಡಿಸೆಂಬರ್‌ನಲ್ಲಿ ಮದುವೆ ಆಗುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.

27

ಕತ್ರಿನಾ ಕೈಫ್  ಮಧುಮಗಳ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರ ಅತ್ಯಂತ ಸುಂದರವಾದ ಸ್ಕಿನ್‌ ಹೊಂದಿದ್ದಾರೆ ಮತ್ತು ಸುಂದರವಾಗಿ ಕಾಣಲು ಮತ್ತು ತಮ್ಮ ಮೈಬಣ್ಣವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. 

37

ಚರ್ಮ ಮತ್ತು ಮುಖದ ಬೆಳಗಿನ ಪಫಿನೆಸ್ ಅನ್ನು ತೊಡೆದುಹಾಕಲು, ಒಂದು ಬೌಲ್‌ನಲ್ಲಿ ಐಸ್ ಮತ್ತು ಐಸ್ ನೀರಿನಿಂದ ತುಂಬಿಸಿ ಅದರಲ್ಲಿ ಅವರ ಮುಖ ಅದ್ದುತ್ತಾರೆ. ಇದರಿಂದ ಮುಖದ ರಂಧ್ರಗಳು ಮುಚ್ಚಿ  ಅವರ ಚರ್ಮ ರಿಲ್ಯಾಕ್ಸ್‌ ಆಗಲು ಸಹಾಯ ಮಾಡುತ್ತದೆ. 

47

Kay Beauty ಎಂಬ ಅವರದೇ ಆದ ಸ್ವಂತ ಬ್ಯೂಟಿ ಪ್ರಾಡೆಕ್ಟ್ ಬ್ರ್ಯಾಂಡ್‌ ಅನ್ನು ಹೊಂದಿದ್ದಾರೆ  ಕತ್ರಿನಾ. ಹಲವು ಮೇಕಪ್‌ ಉತ್ಪನ್ನಗಳಿವೆ. ಅವರು ಆಗಾಗ್ಗೆ ತನ್ನ ಅಭಿಮಾನಿಗಳೊಂದಿಗೆ ಟ್ಯುಟೋರಿಯಲ್‌ಗಳನ್ನು ಸಹ ಹಂಚಿಕೊಳ್ಳುತ್ತಾರೆ, ಅದರಲ್ಲಿ ಅವರು ಸುಂದರವಾಗಿ ಕಾಣಲು ಹಲವಾರು hacks ಕಲಿಸುತ್ತಾರೆ.

 

57

ಪ್ರಸ್ತುತ್ತ ಕತ್ರಿನಾ ಕೈಫ್ ರೋಹಿತ್ ಶೆಟ್ಟಿ ಅವರ ಸೂರ್ಯವಂಶಿ (Suryavanshi) ಚಿತ್ರದಲ್ಲಿ ಅಕ್ಷಯ್ ಕುಮಾರ್ (Akshay Kumar) ಎದುರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಫೋನ್ ಭೂತ್ ಸಿನಿಮಾದಲ್ಲೂ ಇದ್ದಾರೆ ಹಾಗೂ  ಟೈಗರ್ 3ನಲ್ಲಿ  ಸಲ್ಮಾನ್ ಜೊತೆ ಕ್ಯಾಟ್ ಕೂಡ ಕೆಲಸ ಮಾಡುತ್ತಿದ್ದಾರೆ.

67

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಸಂಬಂಧವನ್ನು ಖಚಿತಪಡಿಸಿ ವೈವಾಹಿಕ ಜೀವನಕ್ಕೆ ಕಾಲಿಡುವುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಡಿನ್ನರ್‌ ಅಥವಾ ಒಟ್ಟಿಗೆ ಹ್ಯಾಂಗ್ಔಟ್ ಮಾಡುವಾಗ ಹಲವಾರು ಬಾರಿ ಈ ಜೋಡಿಯನ್ನು ಪ್ಯಾಪ್ ಮಾಡಲಾಗಿದೆ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಹಳ ಸಮಯದಿಂದ ಆರೋಪಿಸಲಾಗಿದೆ ಆದರೆ ಅವರ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. 

77

ಕೆಲಸದ ಮುಂಭಾಗದಲ್ಲಿ, ವಿಕ್ಕಿ ಕೌಶಲ್ ಅವರ ಚಲನಚಿತ್ರ ಸರ್ದಾರ್ ಉದಾಮ್ ಪ್ರಸ್ತುತ ಅಮೆಜಾನ್ ಪ್ರೈಮ್‌ನಲ್ಲಿ (Amazone Prime) ಸ್ಟ್ರೀಮ್ ಆಗುತ್ತಿದೆ. ವಿಕ್ಕಿಯ ಪಾತ್ರವು ಸಿಕ್ಕಾಪಟ್ಟೆ ಮೆಚ್ಚುಗೆಯನ್ನು ಪಡೆಯುತ್ತಿದೆ ಮತ್ತು ಕತ್ರಿನಾ ಕೈಫ್ ಅವರ ಸಿನಿಮಾ ನೋಡಿ ವಿಕ್ಕಿಯನ್ನು ಹೊಗಳಿದ್ದಾರೆ.

Read more Photos on
click me!

Recommended Stories