ನಟಿಯ 14 ವರ್ಷಗಳ ಸಿನಿ ಕೆರಿಯರ್‌ನಲ್ಲಿ ಒಂದು ಸಿನಿಮಾ ಹೊರತುಪಡಿಸಿ ಯಶಸ್ಸು ಕಂಡಿಲ್ಲ. ಆದರೆ, 40ನೇ ವಯಸ್ಸಿನಲ್ಲಿ ವೆಬ್ ಸಿರೀಸ್‌ನ ಬೋಲ್ಡ್ ಪಾತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿದರು. ಈ ನಟಿ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಈ ನಟಿ ಸಿನಿ ಜೀವನ ಆರಂಭಿಸಿ 14 ವರ್ಷಗಳು ಕಳೆದಿವೆ. ಈ 14 ವರ್ಷದಲ್ಲಿ ಮಾಡಿರುವ ಏಳು ಸಿನಿಮಾಗಳ ಪೈಕಿ ಒಂದು ಚಿತ್ರ ಬಾಕ್ಸ್‌ಆಫಿಸ್ ಹಿಟ್ ಸಾಲಿಗೆ ಸೇರ್ಪಡೆಯಾಗಿದೆ. ಆದ್ರೆ 40ನೇ ವಯಸ್ಸಿನಲ್ಲಿ ಮಾದಕವಾಗಿ ಕಾಣಿಸಿಕೊಂಡ ನಟಿ, ಪಡ್ಡೆಗಳ ಹೃದಯದಲ್ಲಿ ಕಿಚ್ಚು ಹಚ್ಚಿಸುವ ಮೂಲಕ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾದರು.
25
ಜನ್ನತ್ ಸಿನಿಮಾ ನಟಿ ಇಶಾ ಗುಪ್ತಾ
ನಟಿ ಇಶಾ ಗುಪ್ತಾ, 2014ರಲ್ಲಿ ಬಾಲಿವುಡ್‌ನ ಸೀರಿಯಲ್ ಕಿಸ್ಸರ್ ಖ್ಯಾತಿಯ ಇಮ್ರಾನ್ ಹಶ್ಮಿ 'ಜನ್ನತ್-2' ಜೊತೆ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಮೊದಲ ಚಿತ್ರದಲ್ಲಿ ಗಮನ ಸೆಳೆದ್ರೂ ಸಿನಿಮಾ ಬಾಕ್ಸ್‌ಆಫಿಸ್‌ನಲ್ಲಿ ಸದ್ದು ಮಾಡುವಲ್ಲಿ ಫೇಲ್ ಆಯ್ತು.
35
ಸಾಲು ಸಾಲು ಸಿನಿಮಾಗಳಲ್ಲಿ ನಟನೆ
ಜನ್ನತ್ 2 ಬಳಿಕ ರಾಜ್ 3ಡಿ, ಚಕ್ರವ್ಯೂಹ, ಗೋರಿ ತೇರೆ ಪ್ಯಾರ್ ಮೇ, ಹಮ್ ಶಕಲ್, ಕಮಾಂಡೋ 2, ಬಾದ್‌ಶಾಹೋ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರೂ ನಟಿ ಇಶಾ ಗುಪ್ತಾಗೆ ಸಕ್ಸಸ್ ಸಿಕ್ಕಿಲ್ಲ. 2106ರಲ್ಲಿ ಬಿಡುಗಡೆಗೊಂಡ ರುಸ್ತಂ ಸಿನಿಮಾ ಹಿಟ್ ಆಗಿತ್ತು. ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ಇಶಾ ನಟಿಸಿದ್ದಾರೆ.
2022ರಲ್ಲಿ ಬಿಡುಗಡೆಯಾದ ಆಶ್ರಮ್ ವೆಬ್ ಸಿರೀಸ್‌ನ ಬೋಲ್ಡ್ ಸೀನ್‌ಗಳಲ್ಲಿ ನಟಿಸುವ ಮೂಲಕ ತಮ್ಮ 40ನೇ ವಯಸ್ಸಿನಲ್ಲಿ ಸಂಚಲನ ಸೃಷ್ಟಿಸಿದರು. ಹಲವು ವರ್ಷಗಳಿಂದ ಸಕ್ಸಸ್ ಆಗಿ ಕಾಯುತ್ತಿದ್ದ ನಟ ಬಾಬಿ ಡಿಯೋಲ್‌ಗೂ ಈ ವೆಬ್ ಸಿರೀಸ್ ದೊಡ್ಡಮಟ್ಟದ ಹಿಟ್ ಮಾಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಸೈಲೆಂಟ್ ಆಗಿದ್ದ ಇಶಾ ಗುಪ್ತಾ, ಇದೀಗ ಕಾಮಿಡಿ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಇಶಾ ಗುಪ್ತಾ ನಟನೆಯ ಧಮಾಲ್-4 ಸಿನಿಮಾ ಇದೇ 10ನೇ ಜುಲೈ 2026ರಂದು ಬಿಡುಗಡೆಯಾಗಲಿದೆ. ಇಂದ್ರಕುಮಾರ್ ನಿರ್ದೇಶನದ ಧಮಾಲ್-4 ಸಿನಿಮಾದಲ್ಲಿ ಅಜಯ್ ದೇವಗನ್, ಅರ್ಷದ್ ವಾರ್ಸಿ, ರವಿ ಕಿಶನ್, ರಿತೇಶ್ ದೇಶಮುಖ್, ಅಂಜಲಿ ಆನಂದ್ ಸಂಜಿದಾ ಶೇಖ್ ಸೇರಿದಂತೆ ದೊಡ್ಡ ತಾರಾಗಣ ಹೊಂದಿದ್ದು, 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.